More

    ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ದಿನಗಣನೆ: ಮಹತ್ವದ ನಿರ್ಧಾರ ಮಾಡಿದ ಸಾನಿಯಾ ಮಿರ್ಜಾ..!

    ನವದೆಹಲಿ: ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಟಿ20 ವಿಶ್ವಕಪ್​ ಟೂರ್ನಿಯು ಆರಂಭವಾಗಿದೆ. ಆದರೆ, ಇಡೀ ವಿಶ್ವ ಕ್ರಿಕೆಟ್​ನ ಕಣ್ಣು ಅ.24ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಅದಕ್ಕೂ ಮುನ್ನವೇ ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರು ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದ್ದಾರೆ.

    ಏನಪ್ಪಾ ಆ ನಿರ್ಧಾರ ಅಂತಾ ನೋಡುವುದಾದರೆ, ಹೈವೋಲ್ಟೇಜ್​ ಪಂದ್ಯ ನಡೆಯುವ ದಿನದಂದು ಸಾನಿಯಾ ಅವರು ಸಾಮಾಜಿಕ ಜಾಲತಾಣದಿಂದ ಕಾಣೆಯಾಗುತ್ತಾರಂತೆ. ಸಾನಿಯಾ ಕಾಣೆಯಾಗಲು ಕಾರಣ ಏನಿರಬಹುದು ಅಂತಾ ಯೋಚಿಸ್ತಿದ್ದೀರಾ? ಅದಕ್ಕೆ ಉತ್ತರ ಮುಂದೆ ಇದೆ ಓದಿ…

    ಇಂಡೋ-ಪಾಕ್​ ಕ್ರಿಕೆಟ್​ ಕದನ ಅಂದ್ರೆ ಅದೊಂದು ನಿಜವಾದ ಯುದ್ಧದಂತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾರೇ ಗೆದ್ದರೂ? ಅಥವಾ ಯಾರೇ ಸೋತರು? ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಗೆದ್ದರೆ ವಿಶ್ವಕಪ್​ ಟ್ರೋಫಿ ಗೆದ್ದಷ್ಟೇ ಸಂಭ್ರಮಿಸುತ್ತಾರೆ. ಒಂದು ವೇಳೆ ಸೋತರೆ ಆಯಾ ದೇಶದ ಜನತೆಯ ಕೆಂಗಣ್ಣಿಗೆ ತಂಡಗಳು ಗುರಿಯಾಗುತ್ತವೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಎರಡು ತಂಡಗಳು ಕಾದಾಡುತ್ತವೆ.

    ಸೋತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ಆಟಗಾರನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗುತ್ತದೆ. ಸಾನಿಯಾ ಮಿರ್ಜಾ ಮೊದಲೇ ಪಾಕ್​ ಸೊಸೆ. ಭಾರತೀಯಳಾಗಿ ಪಾಕ್​ ತಂಡದ ಮಾಜಿ ನಾಯಕ ಶೋಯೆಬ್​ ಮಲ್ಲಿಕ್​ರನ್ನು ಮದುವೆ ಆಗಿದ್ದಾರೆ. ಹೀಗಾಗಿ ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾನಿಯಾ ಅವರು ಅಡಕತ್ತರಿಯಲ್ಲಿ ಸಿಲುಕುತ್ತಾರೆ. ಹೀಗಾಗಿ ಪಂದ್ಯದ ಬಗ್ಗೆ ಏನೇ ಮಾತನಾಡಿದರೂ ವಿವಾದ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂದು ಸಾಮಾಜಿಕ ಜಾಲತಾಣಕ್ಕೆ ಗುಡ್​ ಬೈ ಹೇಳಿ ತಟಸ್ಥ ನಿಲುವು ಹೊಂದಲು ಸಾನಿಯಾ ಮುಂದಾಗಿದ್ದಾರೆ.

    ಮಿರ್ಜಾ ಈ ಹಿಂದೆ ನಡೆದ ಇಂಡೋ-ಪಾಕ್​ ಕದನದ ವೇಳೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲೆ ವಿಷತ್ವವನ್ನು ಎದುರಿಸಿದ್ದರು. ಪಾಕಿಸ್ತಾನದ ಸೊಸೆ ಆಗಿರುವುದರಿಂದ ಸಹಜವಾಗಿಯೇ ಅವರ ಮೇಲೆ ವಿಷತ್ವ ಕಾರುವ ಸಾಧ್ಯತೆ ಇರುವುದರಿಂದ ಸಾಮಾಜಿಕ ಜಾಲತಾಣಕ್ಕೆ ಹೈವೋಲ್ಟೇಜ್​ ಪಂದ್ಯದ ದಿನ ಗುಡ್​ ಬೈ ಹೇಳುತ್ತಿರುವುದಾಗಿ ಇನ್​ಸ್ಟಾಗ್ರಾಂನಲ್ಲಿ ಸಾನಿಯಾ ಬರೆದುಕೊಂಡಿದ್ದಾರೆ.

    View this post on Instagram

    A post shared by Sania Mirza (@mirzasaniar)

    ಸಾನಿಯಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​, ನಿಜಕ್ಕೂ ಇದೊಂದು ಒಳ್ಳೆಯ ಆಲೋಚನೆ ಎಂದು ಕಾಮೆಂಟ್​ ಮಾಡಿ ನಗುತ್ತಿರುವ ಎಮೋಜಿಯನ್ನು ಪೋಸ್ಟ್​ ಮಾಡಿದ್ದಾರೆ.

    ಭಾನುವಾರ (ಅ.24) ಇಂಡೋ-ಪಾಕ್​ ಕ್ರಿಕೆಟ್​ ಕದನ ನಡೆಯಲಿದ್ದು, ಹೈವೋಲ್ಟೇಜ್​ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ದಾಖಲೆ ಮಟ್ಟದಲ್ಲಿ ಟಿಕೆಟ್​ ಬುಕ್ಕಿಂಗ್​ ಕೂಡ ಮಾಡಲಾಗಿದೆ. (ಏಜೆನ್ಸೀಸ್​)

    ಆಂಟಿ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ: ಅಪ್ರಾಪ್ತನ ಜತೆ ಓಡಿ ಹೋಗಲು ಮುಂದಾಗಿದ್ದವಳು ಆತನಿಂದಲೇ ಹತ್ಯೆ?

    ಈ 3 ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಾನೂನು ಸಮರ ಸಾರಿದ ಸಮಂತಾ! ದೂರಿನಲ್ಲಿ ಸ್ಯಾಮ್​ ಹೇಳಿದ್ದಿಷ್ಟು…

    ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವಿದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts