More

    ಈ ವಿಚಾರದಲ್ಲಿ ಇರಾನ್​, ಉ. ಕೊರಿಯಾ ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವ ಮೂಲಕ ಕುಖ್ಯಾತಿಯಾದ ರಷ್ಯಾ..!

    ಕೀಯೆವ್​/ಮಾಸ್ಕೋ: ಯೂಕ್ರೇನ್​ ಮೇಲಿನ ರಷ್ಯಾ ದಾಳಿ ಮುಂದುವರಿದಿದ್ದು, ಯಾವಾಗ ಈ ಯುದ್ಧ ಮುಗಿಯುತ್ತದೋ ಎಂಬ ಆಸೆಗಣ್ಣಿನಿಂದ ಉಭಯ ದೇಶದ ಪ್ರಜೆಗಳು ಎದುರು ನೋಡುತ್ತಿದ್ದಾರೆ. ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದ ಜಾಗತಿಕವಾಗಿ ಅನೇಕ ರಾಷ್ಟ್ರಗಳು ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿವೆ. ಈ ಮೂಲಕ ಅತಿ ಹೆಚ್ಚು ನಿರ್ಬಂಧಕ್ಕೆ ಒಳಗಾದ ರಾಷ್ಟ್ರವೆಂಬ ಕುಖ್ಯಾತಿಯನ್ನು ರಷ್ಯಾ ಪಡೆದುಕೊಂಡಿದೆ.

    ಯೂಕ್ರೇನ್​ನನ್ನು ಸಂಪೂರ್ಣ ಆಕ್ರಮಿಸುವ ನಿಲುವು ತಾಳಿರುವ ರಷ್ಯಾಗೆ ಹಲವು ರಾಷ್ಟ್ರಗಳು ಆರ್ಥಿಕ ಸೇರಿದಂತೆ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ಇರಾನ್​ ಮತ್ತು ಉತ್ತರ ಕೊರಿಯಾವನ್ನು ಹಿಂದಿಕ್ಕುವ ಮೂಲಕ ಅತಿ ಹೆಚ್ಚು ನಿರ್ಬಂಧಕ್ಕೆ ಒಳಗಾದ ರಾಷ್ಟ್ರವೆಂಬ ಅಪಖ್ಯಾತಿಗೆ ರಷ್ಯಾ ಗುರಿಯಾಗಿದೆ.

    ಫೆ. 24ರಂದು ರಷ್ಯಾ, ಯೂಕ್ರೇನ್ ಮೇಲೆ ಯುದ್ಧ ಘೋಷಿಸಿತು. ನ್ಯಾಟೋ ಪಡೆಗೆ ಸೇರುವ ಯೂಕ್ರೇನ್​ ಆಸೆಯನ್ನು ರಷ್ಯಾ ತಿರಸ್ಕರಿಸುತ್ತಾ ಬಂದಿತ್ತು. ಅಲ್ಲದೆ, ಎಚ್ಚರಿಕೆಯನ್ನು ನೀಡಿತ್ತು. ಆದರೆ, ರಷ್ಯಾ ಎಚ್ಚರಿಕೆಗೆ ಬಗ್ಗದ ಯೂಕ್ರೇನ್​ ನ್ಯಾಟೋ ಪಡೆ ಸೇರುವುದಾಗಿ ತಿಳಿಸಿತು. ಈ ವಿಚಾರದಲ್ಲಿ ಎರಡು ರಾಷ್ಟ್ರಗಳ ನಡುವೆ ತಿಕ್ಕಾಟ ಮುಂದುರಿದುಕೊಂಡೇ ಬಂದಿತ್ತು. ಅಂತಿಮವಾಗಿ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಯೂಕ್ರೇನ್​ ವಿರುದ್ಧ ಘೋಷಣೆ ಮಾಡಿಯೇ ಬಿಟ್ಟರು.

    ಫೆ.24ರಂದು ಶುರುವಾದ ಯುದ್ಧ ಇಂದಿನವರೆಗೂ ಮುಂದುವರಿದುಕೊಂಡು ಬರುತ್ತಲೇ ಇದೆ. ಯಾವಾಗ ಅಂತ್ಯವಾಗುತ್ತದೋ ಎಂದು ಜನರು ಎದುರು ನೋಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಮಂಡಿಸಿದರೂ ಅದಕ್ಕೆ ರಷ್ಯಾ ಕ್ಯಾರೆ ಎನ್ನಲಿಲ್ಲ. ಅಲ್ಲದೆ, ಅಮೆರಿಕ, ಜರ್ಮನಿ, ಬ್ರಿಟನ್​, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಅನೇಕ ರಾಷ್ಡ್ರಗಳು ರಷ್ಯಾ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದರು ರಷ್ಯಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಯುದ್ಧವನ್ನು ಮುಂದವರಿಸಿದ್ದು, ಇಡೀ ಯೂಕ್ರೇನ್​ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ. (ಏಜೆನ್ಸೀಸ್​)​

    ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​

    ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಆಡಿಯೋ ಕ್ಲಿಪ್..!

    ತೈಲಾಘಾತದ ಹೊಡೆತ: ಕಚ್ಚಾತೈಲ, ಅಡುಗೆ ಎಣ್ಣೆ, ಚಿನ್ನ ದಾಖಲೆ ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts