More

    VIDEO| ತುಂಡುಡುಗೆ ತೊಟ್ಟು ಮುಜುಗರಕ್ಕೀಡಾದ ರಶ್ಮಿಕಾಗೆ ಏನಮ್ಮಾ ನಿನ್ನ ಫಜೀತಿ ಎಂದ ನೆಟ್ಟಿಗರು!

    ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಲ್ಕು ಚಿತ್ರರಂಗಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ, ಬಾಲಿವುಡ್​ನಲ್ಲಿ ಬೀಡುಬಿಟ್ಟಿರುವ ರಶ್ಮಿಕಾ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸ್ಟಾರ್​ ನಾಯಕಿ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ರಶ್ಮಿಕಾಗೆ ಸಲ್ಲುತ್ತದೆ. ಅದು ಅವರ ಅದೃಷ್ಟವೂ ಹೌದು.

    ತಮಿಳು, ತೆಲುಗು ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲು ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮಿಷನ್​ ಮುಂಜು ಚಿತ್ರವನ್ನು ಪೂರ್ಣಗೊಳಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾದಿಂದಾಚೆಗೆ ರಶ್ಮಿಕಾ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಅಲ್ಲದೆ, ಆಗಾಗ ವಿವಿಧ ಕಾರಣಗಳಿಂದ ಟ್ರೋಲ್​ಗಳಿಗೆ ಗುರಿಯಾಗುತ್ತಿರುತ್ತಾರೆ. ಈ ಬಾರಿಯು ತಮ್ಮ ಬಟ್ಟೆ ವಿಚಾರಕ್ಕೆ ರಶ್ಮಿಕಾ ನೆಟ್ಟಿಗರ ಟ್ರೋಲ್​ ದಾಳಕ್ಕೆ ಸಿಲುಕಿದ್ದಾರೆ.

    ಶುಕ್ರವಾರ ರಾತ್ರಿ ರಶ್ಮಿಕಾ ಅವರು ಮುಂಬೈನಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತೊಟ್ಟಿದ್ದ ಕೆಂಪು ಬಣ್ಣದ ತುಂಡುಡುಗೆ ಎಲ್ಲರ ಕಣ್ಣನ್ನು ಕೆಂಪಾಗಿಸಿದೆ. ಶಾರ್ಟ್​ ಡ್ರೆಸ್​ನಲ್ಲಿ ತುಂಬಾ ಹಾಟ್​ ಆಗಿ ಕಾಣಿಸಿಕೊಂಡ ರಶ್ಮಿಕಾ, ಕ್ಯಾಮೆರಾಗೆ ಪೋಸ್​ ನೀಡಿದರು. ಕಾರ್ಯಕ್ರಮಕ್ಕೆ ಬಂದಿದ್ದವರ ಜೊತೆ ಸೋಫಾ ಮೇಲೆ ಕುಳಿತು ಫೋಟೋಗ್ರಾಫರ್​ಗೆ ಫೋಸ್​ ನೀಡಿದರು.

    ಫೋಟೋ ತೆಗೆಯುವುವ ವೇಳೆ ತುಂಡುಡುಗೆಯಿಂದ ರಶ್ಮಿಕಾ ಮುಜುಗರಕ್ಕೀಡಾದಂತೆ ಕಂಡಿತು. ಆದರೂ ಅದನ್ನು ತೋರಿಸಿಕೊಳ್ಳದೇ ನಗುತ್ತಾ ಕ್ಯಾಮೆರಾಗೆ ಪೋಸ್​ ನೀಡಿ ಅಲ್ಲಿಂದ ಹೊರಟರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವೈರಲ್​ ಭಯಾನಿ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. 20 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ. ರಶ್ಮಿಕಾ ಹಾಟ್​ ಡ್ರೆಸ್​ ನೋಡಿ ಅನೇಕರು ಫಿದಾ ಆಗಿದ್ದಾರೆ. ಇನ್ನು ಕೆಲವರು ರಶ್ಮಿಕಾ ಏನಮ್ಮಾ ನಿನ್ನ ಫಜೀತಿ ಎಂದು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

    ಜೂಜಾಟಕ್ಕೆ ಪೊಲೀಸ್​ ಪೇದೆ ಬಲಿ: ರಮ್ಮಿ ಆಡಲು ಮಾಡಿದ್ದ ಸಾಲದ ಮೊತ್ತ ಕೇಳಿದ್ರೆ ಶಾಕ್​ ಆಗುತ್ತೆ!

    ಸಾಲಶೂಲದಲ್ಲಿ ಡಜನ್ ದೇಶ; ಲಂಕೆಯ ಹಾದಿಯಲ್ಲಿ ಹೆಜ್ಜೆ, ಆರ್ಥಿಕ ಪತನದ ಭೀತಿ..

    ಸುಖಾಸುಮ್ಮನೆ ವಾಹನ ತಡೆಯದಂತೆ ಜಿಲ್ಲಾ ಎಸ್‌ಪಿಗಳಿಗೆ ಡಿಜಿಪಿ ಪ್ರವೀಣ್​ ಸೂದ್​ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts