More

    ಪೊಲೀಸ್​ ತಪಾಸಣೆ ವೇಳೆ ಓಡಿ ಹೋಗಲು ಯತ್ನಿಸಿ ರೈಲಿಗೆ ಸಿಲುಕಿ ರೌಡಿಶೀಟರ್ ದುರ್ಮರಣ

    ರಾಮನಗರ: ಪೊಲೀಸರ ತಪಾಸಣೆ ವೇಳೆ ಪರಾರಿಯಾಗಲು ಹೋಗಿ ರೌಡಿಶೀಟರ್​ ಒಬ್ಬ ರೈಲಿಗೆ ಸಿಲುಕಿ ಸಾವಿಗೀಡಾಗಿರುವ ಘಟನೆ ರಾಮನಗರದ ಬಸವನಪುರ ಗ್ರಾಮದ ಬಳಿ ನಡೆದಿದೆ.

    ದಿಲೀಪ್ (29) ಮೃತ ರೌಡಿಶೀಟರ್. ಈತ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್. ಬಸವನಪುರ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ತಾಪಸಣೆ ವೇಳೆ ಕಾರಿನಲ್ಲಿದ್ದ 4 ಜನರು ಓಡಿ ಹೋಗಲು ಯತ್ನಿಸಿದರು. ಈ ವೇಳೆ ಹೆದ್ದಾರಿಯ ಪಕ್ಕದಲ್ಲೇ ಇದ್ದ ರೈಲ್ವೆ ಹಳಿಯ ಮೇಲೆ ಓಡಿ ಹೋಗುವಾಗ ಇದೇ ಸಮಯಕ್ಕೆ ಬಂದ ರೈಲು ಡಿಕ್ಕಿಯಾಗಿ ದಿಲೀಪ್ ಮೃತಪಟ್ಟಿದ್ದಾನೆ. ಉಳಿದ 3 ಮಂದಿಯಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಓರ್ವ ಪರಾರಿಯಾಗಿದ್ದಾನೆ.

    ಈ ಘಟನೆ ಬಗ್ಗೆ ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಸ್. ಪಿ. ಸಂತೋಷ್ ಬಾಬು ಮಾತನಾಡಿದ್ದಾರೆ. ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಸಹಿ ಮಾಡಲು ದಿಲೀಪ್ ಹಾಗೂ ಆತನ ಸಹಚರರು ಎರಡು ಕಾರುಗಳಲ್ಲಿ ಬಂದಿದ್ದರು. ಜೈಲಿನಲ್ಲಿ ಸಹಿ ಮಾಡಿ ಮೈಸೂರಿಗೆ ಹೋಗುವ ಪ್ಲಾನ್​ ಮಾಡಿದ್ದರು. ದಿಲೀಪ್ ಜತೆಗೆ ರೌಡಿ ಶೀಟರ್​ಗಳಾದ ಕೆಟಿಎಂ ಭರತ, ಗುಬ್ಬಚ್ಚಿ ಹಾಗೂ ಅಭಿಷೇಕ್ ಇದ್ದರು. 4 ಮಂದಿಯು ಕೂಡ ಮದ್ಯದ ಅಮಲಿನಲ್ಲಿ ಇದ್ದರು.

    ಈ ವೇಳೆ ಹೆದ್ದಾರಿಯ ಪಕ್ಕದಲ್ಲೇ ಇರುವ ರೈಲ್ವೆ ಹಳಿಯ ಮೇಲೆ ದಿಲೀಪ್ ನಡೆದು ಹೋಗುತ್ತಿದ್ದ ಈ ವೇಳೆ ರೈಲು ಡಿಕ್ಕಿ ಹೊಡೆದು ದಿಲೀಪ್ ಮೃತಪಟ್ಟಿದ್ದಾನೆ. ಜತೆಯಲ್ಲಿದ್ದ ಕೆಟಿಎಂ ಭರತ, ಅಭಿಷೇಕ್ ಪೊಲೀಸರ ವಶದಲ್ಲಿದ್ದಾನೆ. ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ. ಕಾರಿನಲ್ಲಿ ಬೇರೆಯಾವುದೆ ಮಾರಕಾಸ್ತ್ರಗಳು ಸಿಕ್ಕಿಲ್ಲ. ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದರು ಹೇಳಿದರು.

    ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ದೇಶದಲ್ಲಿ ಚೀನಾ ವಸ್ತು ಸುಸ್ತು; ಒಂದು ವರ್ಷದ ಅವಧಿಯಲ್ಲಿ ಶೇ.67 ಬೇಡಿಕೆ ಕುಸಿತ

    ಶಿಕ್ಷಕರ ನೇಮಕಾತಿ; ಅಭ್ಯರ್ಥಿಗಳ ಗ್ರೇಡ್ ಪರದಾಟ

    ಚೀನಾದ ಆರ್ಥಿಕ ರಾಜಧಾನಿ ಶಾಂಘೈಯಲ್ಲಿ ಕಠಿಣ ನಿಯಮ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts