More

    ಶಿಕ್ಷಕರ ನೇಮಕಾತಿ; ಅಭ್ಯರ್ಥಿಗಳ ಗ್ರೇಡ್ ಪರದಾಟ

    |ಅವಿನಾಶ ಎಸ್.ಮೈಸೂರು

    ಶಿಕ್ಷಕರ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಆದರೆ ಬಿ.ಇಡಿ ಪದವಿಯ ಅಂಕಗಳನ್ನು ಕಡ್ಡಾಯವಾಗಿ ನಮೂದಿಸುವಂತೆ ಅರ್ಜಿಯಲ್ಲಿ ಸೂಚಿಸಿರುವುದು ಹಲವು ಅಭ್ಯರ್ಥಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಮೈಸೂರು ವಿಶ್ವವಿದ್ಯಾಲಯ ಸೇರಿ ಕೆಲವು ವಿಶ್ವವಿದ್ಯಾಲಯಗಳು ಬಿ.ಇಡಿಯಲ್ಲಿ ಶೇಕಡವಾರು ಅಂಕಗಳನ್ನು ನೀಡುವುದರ ಬದಲು ಗ್ರೇಡ್ ಪಾಯಿಂಟ್ ನೀಡುತ್ತಿವೆ. ಅಲ್ಲದೆ, ಅಂಕಪಟ್ಟಿಯಲ್ಲೂ ಗ್ರೇಡ್ ಪಾಯಿಂಟ್ ನಮೂದಿಸುತ್ತಿದ್ದು, ಪಕ್ಕದಲ್ಲೇ ಶೇಕಡವಾರುಗೆ ಸಮ ಎಂದು ಶೇಡಕವಾರು ಪ್ರಮಾಣವನ್ನು ನಮೂದಿಸುತ್ತಿವೆ.

    ವಿದ್ಯಾರ್ಥಿಗಳು ಒಟ್ಟಾರೆ ಗಳಿಸಿರುವ ಅಂಕಗಳನ್ನು ಎಲ್ಲಿಯೂ ನಮೂದಿಸುತ್ತಿಲ್ಲ. ಆದರೆ, ಇದೀಗ ಅರ್ಜಿ ಸಲ್ಲಿಸಬೇಕಾದರೆ ಅಂಕಗಳ ನಮೂದಿಸುವಿಕೆಯನ್ನು ಕಡ್ಡಾಯಗೊಳಿಸಿರುವುದು ವಿದ್ಯಾರ್ಥಿಗಳನ್ನು ಪೇಚಿಗೆ ಸಿಲುಕಿಸಿದೆ. ಈ ಕುರಿತು ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಬಯಸಿದರೆ, ವಿದ್ಯಾರ್ಥಿಗಳು ಬಿ.ಇಡಿ ಪದವಿ ವ್ಯಾಸಂಗ ಮಾಡಿದ ಕಾಲೇಜನ್ನು ಸಂರ್ಪಸಿ ಗ್ರೇಡ್ ಪಾಯಿಂಟ್ ಅನ್ನು ಅಂಕಗಳಿಗೆ ಬದಲಾಯಿಸಿಕೊಳ್ಳುವಂತೆ ಸೂಚಿಸಿ ಕರೆ ಕಡಿತ ಮಾಡುತ್ತಿದ್ದಾರೆ.

    ಪ್ರಕ್ರಿಯೆ ಮುಗಿಯಲು 2-3 ದಿನ ಬೇಕು: ಸಹಾಯವಾಣಿಯ ಸೂಚನೆಯಂತೆ, ವಿದ್ಯಾರ್ಥಿಗಳು ಮೊದಲಿಗೆ ತಾವು ಓದಿದ ಕಾಲೇಜನ್ನು ಸಂರ್ಪಸಬೇಕು. ತಮ್ಮ ಪ್ರಮಾಣ ಪತ್ರವನ್ನು ಅಂಕಗಳಿಗೆ ಬದಲಾಯಿಸಲು ಮನವಿ ಸಲ್ಲಿಸಬೇಕು. ಅಂಕಗಳಿಗೆ ಬದಲಾಯಿಸಿಕೊಂಡ ಮತ್ತೊಂದು ಪ್ರಮಾಣಪತ್ರ ಪಡೆದುಕೊಳ್ಳಬೇಕು. ನಂತರ ಅದನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಕ್ಕೆ ನೀಡಿ, ಅಲ್ಲಿಂದ ದೃಢೀಕರಣಗೊಳಿಸಿಕೊಳ್ಳಬೇಕು. ಆದರೆ ಹಳ್ಳಿಗಾಡಿನ ವಿದ್ಯಾರ್ಥಿಗಳು ತಾವು ಓದಿದ ಕಾಲೇಜು, ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರಮಾಣಪತ್ರ ದೃಢೀಕರಣ ಮಾಡಿಸಿಕೊಳ್ಳಬೇಕಾದರೆ ಕನಿಷ್ಠ ಎರಡರಿಂದ ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ.

    ಗ್ರೇಡ್ ಪಾಯಿಂಟ್ ದಾಖಲಿಸಲು ಅವಕಾಶ ನೀಡಿ: ಇತ್ತೀಚೆಗೆ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಗ್ರೇಡ್ ಪಾಯಿಂಟ್ ಆಧಾರದಲ್ಲಿ ಅಭ್ಯಾಸ ಮಾಡಿದವರಿಗೆ ಗ್ರೇಡ್ ಪಾಯಿಂಟ್ ಹಾಗೂ ಅಂಕಗಳ ಆಧಾರದಲ್ಲಿ ಅಧ್ಯಯನ ಮಾಡಿದವರಿಗೆ ಶೇಕಡವಾರು ಅಂಕ ನಮೂದಿಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗಿರುವಾಗ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಏಕೆ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಲು ಹೇಳಲಾಗಿದೆ ಎಂಬುದು ಪ್ರಶ್ನೆಯಾಗಿದೆ. ಅಲ್ಲದೆ, ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇಕೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಜಾತಿ ಪ್ರಮಾಣಪತ್ರ ದಾಖಲಿಸಲೂ ತೊಡಕು: ಎಲ್ಲ ಸಮರ್ಪಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಮುಂದಾದ ಕೆಲವು ಅಭ್ಯರ್ಥಿಗಳು ತಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರ ಅಪ್​ಲೋಡ್ ಮಾಡಲು ಮುಂದಾಗುವ ವೇಳೆ ಆರ್​ಡಿ ನಂಬರ್ ಎಂಟ್ರಿ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಆರ್​ಡಿ ಎಂದು ಟೈಪಿಸಿದರೆ ಇನ್​ವ್ಯಾಲಿಡ್ ಎಂದು ಬರುತ್ತಿದ್ದು, ಅಭ್ಯರ್ಥಿಗಳನ್ನು ಸಂಕಷ್ಟಕ್ಕೆ ನೂಕಿದೆ.

    ಪದವಿ ಉತ್ತೀರ್ಣರಾಗಿ, ಪ್ರಮಾಣಪತ್ರ ಪಡೆದಿದ್ದೇವೆ. ಈವರೆಗೆ ಅದನ್ನು ಬಳಸಿದ್ದೇವೆ. ಆಗ ಎದುರಾಗದ ಸಮಸ್ಯೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಮ್ಮನ್ನು ಗುರಿ ಮಾಡುತ್ತಿದೆ. ಅರ್ಜಿ ಸ್ವೀಕರಿಸಿ, ಪರೀಕ್ಷೆಗೆ ಅವಕಾಶ ನೀಡಬೇಕು. ದಾಖಲಾತಿ ಪರಿಶೀಲನೆ ಸಂದರ್ಭದ ಅವಧಿ ವರೆಗೆ ಪರ್ಯಾಯ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು.

    | ಸುಜಾತಾ ಶಿಕ್ಷಕರ ಹುದ್ದೆ ಆಕಾಂಕ್ಷಿ

    ಕೆಲವರು ಪ್ರವೇಶ ಪಡೆದು ಹಲವು ವರ್ಷವಾದರೂ ಪದವಿ ಪೂರ್ಣಗೊಳಿಸಿರುವುದಿಲ್ಲ. ಜತೆಗೆ, ಎಲ್ಲರೂ ಪದವಿ ಪ್ರಮಾಣಪತ್ರವನ್ನು ಪಡೆದಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ಪಿಡಿಸಿಗೆ ಅರ್ಜಿ ಸಲ್ಲಿಸಿದಲ್ಲಿ ತ್ವರಿತವಾಗಿ ನೀಡುವ ವ್ಯವಸ್ಥೆ ಕೆಎಸ್​ಒಯು ಮಾಡಲಿದೆ.

    | ಡಾ. ಆರ್. ಲೋಕೇಶ್, ಕೆಎಸ್​ಒಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ

    ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts