More

    ಚೀನಾದ ಆರ್ಥಿಕ ರಾಜಧಾನಿ ಶಾಂಘೈಯಲ್ಲಿ ಕಠಿಣ ನಿಯಮ ಜಾರಿ

    ಶಾಂಘೈ: ಕರೊನಾ ಸೋಂಕಿನ ಉಲ್ಬಣದಿಂದ ಲಾಕ್​ಡೌನ್​ಗೆ ಒಳಪಟ್ಟಿರುವ ಚೀನಾದ ಆರ್ಥಿಕ ರಾಜಧಾನಿ ಶಾಂಘೈಯಲ್ಲಿ ಕಠಿಣ ನಿಯಮ ಜಾರಿಗೆ ತರಲಾಗಿದೆ. ಜನರು ಮನೆಯೊಳಗೆ ಒಟ್ಟಿಗೆ ಮಲಗುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಬಾರದು ಹಾಗೂ ಚುಂಬಿಸಲೂ ಬಾರದು ಎಂದು ಅಧಿಕಾರಿಗಳು ಆದೇಶಿಸಿದ್ದಾರೆ. ಕಠಿಣ ನಿರ್ಬಂಧ ಕಾರಣ ಶಾಂಘೈ ನಿವಾಸಿಗಳು ಕಡುಕಷ್ಟದ ಜೀವನ ನಡೆಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಿಂದ ಗೊತ್ತಾಗುತ್ತದೆ. ಚೀನಾದ ಕರೊನಾ ಸಾಂಕ್ರಾಮಿಕತೆಯ ಸದ್ಯದ ಹಾಟ್​ಸ್ಪಾಟ್ ಆಗಿರುವ 2.6 ಕೋಟಿ ಜನಸಂಖ್ಯೆಯ ಶಾಂಘೈಯಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕಿನ ಪ್ರಕರಣ ಗಳಲ್ಲಿ ಇಳಿಮುಖವಾಗಿದೆ. ಆದರೂ ಸೋಂಕನ್ನು ಕಟ್ಟಿ ಹಾಕುವ ಸಂಕಲ್ಪ ಮಾಡಿರುವ ಸರ್ಕಾರ ಕಠಿಣ ನಿಯಮಗಳನ್ನು ಮುಂದುವರಿಸಿದೆ.

    ಬ್ಲಡ್ ಕ್ಲಾಟ್​ನ ಅಪಾಯ: ಕೋವಿಡ್-19 ಸೋಂಕು ತಗಲಿದ 6 ತಿಂಗಳವರೆಗೆ ಸೋಂಕಿತರಲ್ಲಿ ಗಂಭೀರ ಪ್ರಮಾಣದ ರಕ್ತ ಹೆಪು್ಪಗಟ್ಟುವಿಕೆ ಸಮಸ್ಯೆ ಎದುರಾಗುತ್ತದೆ ಎಂದು ಹೊಸ ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆ. ಸೌಮ್ಯ ಪ್ರಮಾಣದ ಸೋಂಕಿತರಲ್ಲಿಯೂ ಈ ಸಮಸ್ಯೆ ಎದುರಾಗುತ್ತದೆ ಎಂದು ‘ದಿ ಬಿಎಂಜೆ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೇಳಿದೆ. ಕಾಲುಗಳಲ್ಲಿ ಬ್ಲಡ್ ಕ್ಲಾಟ್ ಆಗುವ ವೇಯ್್ನ ಥ್ರೊಂಬೊಸಿಸ್ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಶ್ವಾಸಕೋಶದಲ್ಲಿ ರಕ್ತ ಹೆಪ್ಪಾಗುವ ಪಲ್ಮನರಿ ಎಂಬೋಲಿಸಂ ಹಾಗೂ ಎರಡು ತಿಂಗಳವರೆಗೆ ರಕ್ತಸ್ರಾವವಾಗುವ ಅಪಾಯವೂ ಇದೆ ಎಂದು ಅಧ್ಯಯನ ಹೇಳಿದೆ.

    ಮಾಸ್ಕ್ ಕಡ್ಡಾಯ ನಿಯಮ ತೆರವು?: ದೇಶದಲ್ಲಿ ಕರೊನಾ ಇಳಿಮುಖವಾಗಿರುವುದರಿಂದ ಕಡ್ಡಾಯ ಮಾಸ್ಕ್ ನಿಯಮವನ್ನು ತೆಗೆದು ಹಾಕಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಯಮದಿಂದ ಜನರು ಸುಸ್ತಾಗಿದ್ದು ಅದನ್ನು ಸಡಿಲಿಸುವುದು ಅಗತ್ಯ ಎಂದು ಹೇಳಿದ್ದಾರೆ. ಮಾಸ್ಕ್ ಧರಿಸುವುದರ ಲಾಭದ ಕುರಿತ ಜನಜಾಗೃತಿ ಸಂದೇಶವನ್ನು ಮುಂದುವರಿಸಬಹುದು. ಆದರೆ ಸದ್ಯ ಅದನ್ನು ತೆಗೆದು ಹಾಕುವುದು ಒಳ್ಳೆಯದು. ಅಲ್ಲದೆ ಇನ್ನೊಂದು ಅಲೆ ಎದ್ದರೆ ಆಗ ಮಾಸ್ಕ್ ನಿಯಮವನ್ನು ಪುನಃ ಜಾರಿಗೊಳಿಸಬಹುದೆಂದು ತಜ್ಞರ ಅಭಿಮತವಾಗಿದೆ.

    ಇಂಗ್ಲೆಂಡ್​ನಲ್ಲಿ ಸೋಂಕು ಹೆಚ್ಚಳ: ಇಂಗ್ಲೆಂಡ್​ನಲ್ಲಿ ಸೋಂಕಿನ ಪ್ರಮಾಣ ಫೆಬ್ರವರಿಗಿಂತ ಮಾರ್ಚ್​ನಲ್ಲಿ ತೀವ್ರ ಏರಿಕೆಯಾಗಿದೆ. ಪರೀಕ್ಷೆ ನಡೆಸಲಾದ ಪ್ರತಿ 16 ಮಂದಿಯಲ್ಲಿ ಒಬ್ಬರು ಅಥವಾ ಶೇಕಡ 6.37 ಪಾಸಿಟಿವಿಟಿ ದರ ಮಾರ್ಚ್​ನಲ್ಲಿ ದಾಖಲಾಗಿದ್ದು ಇದು ದಾಖಲೆಯ ಪ್ರಮಾಣವಾಗಿದೆ. ಫೆಬ್ರವರಿಯಲ್ಲಿ 35ರಲ್ಲಿ ಒಬ್ಬರಂತೆ ಸೋಂಕಿತರಾಗಿದ್ದರು. ನಂತರದ ಮಾಸಿಕದಲ್ಲಿ ಅದು ಬಹುತೇಕ ದುಪ್ಪಟ್ಟುಗೊಂಡಿದೆ. ಪ್ರತಿ 30 ದಿನಕ್ಕೊಮ್ಮೆ ಸೋಂಕು ಇಮ್ಮಡಿಗೊಳ್ಳುತ್ತಿದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

    ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts