More

    ಕಾಂಗ್ರೆಸ್, ಜೆಡಿಎಸ್​ನದು ನಾಟಕ, ನಾವೇ ಗೆಲ್ತೇವೆ: ಸಚಿವ ಆರ್.ಅಶೋಕ್ ವಿಶ್ವಾಸ

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸುಮ್ಮನೆ ನಾಟಕವಾಡುತ್ತಿವೆ. ರಾಜ್ಯಸಭೆಯ ನಾಲ್ಕನೇ ಸ್ಥಾನವನ್ನು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಕಂದಾಯ ಸಚಿವ ಆರ್.ಅಶೋಕ್ ವ್ಯಕ್ತಪಡಿಸಿದರು.

    ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು ಎರಡೂ ಪಕ್ಷಗಳಿಗೆ ಹೋಲಿಸಿದರೆ ಎರಡನೇ ಪ್ರಾಶಸ್ತ್ಯ ದ ಮತಗಳು ನಮ್ಮ ಬಳಿ ಹೆಚ್ಚಿವೆ. ಗೆಲ್ಲುವ ವಿಶ್ವಾಸದಿಂದಲೇ ಮೂರನೇ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿದ್ದೇವೆ ಎಂದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೇಂದ್ರ ಹಣಕಾಸು ಸಚಿವೆ, ರಾಜ್ಯಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಸೇರಿ ಹಲವು ನಾಯಕರು ವಿಧಾನಸೌಧಕ್ಕೆ ಆಗಮಿಸಿದರು.

    ತೀವ್ರ ನಿಗಾ
    ಪಕ್ಷದ ಶಾಸಕರ ಮೇಲೆ ಬಿಜೆಪಿ ನಾಯಕರು ತೀವ್ರ ನಿಗಾ ವ್ಯವಸ್ಥೆ ಮಾಡಿದ್ದಾರೆ. ಅಡ್ಡ ಮತದಾನ‌ದ ಶಂಕೆ ಮೂಡಿರುವ ತನ್ನ ಶಾಸಕರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಒತ್ತು ನೀಡಿದೆ.

    ಪ್ರತಿಯೊಬ್ಬ ಶಾಸಕರು ಕಡ್ಡಾಯ ಮತ ಚಲಾವಣೆ ಜತೆಗೆ ಒಂದು ಮತವೂ ವ್ಯರ್ಥವಾಗದಂತೆ ನೋಡಿಕೊಳ್ಳಲು ಕ್ತಮವಹಿಸಿದೆ. ಮೂರು ತಂಡಗಳಲ್ಲಿ ಶಾಸಕರನ್ನು ಕರೆತಂದು ಮತಹಾಕಿಸುವ ಜವಾಬ್ದಾರಿ ಹಂಚಲಾಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಸಚಿವ ವಿ.ಸುನಿಲ್ ಕುಮಾರ್, ನಟ ಜಗ್ಗೇಶ್ ಅವರಿಗೆ‌ ಸಚಿವ ಆರ್.ಅಶೋಕ್ ಹಾಗೂ ಲೆಹರ್ ಸಿಂಗ್ ಸಿರೋಯಿ ಅವರಿಗೆ ಸಚಿವ ಬಿ.ಸಿ.ನಾಗೇಶ್ ಸಂಚಾಲಕರಾಗಿದ್ದಾರೆ.

    ಬಿಜೆಪಿ ಚುನಾವಣಾ ಏಜೆಂಟರಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇಮಕವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ನ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಯಾ ಪಕ್ಷದ ಚುನಾವಣಾ ಏಜೆಂಟರಾಗಿದ್ದಾರೆ.

    ಹಠಬಿಡದ ಕಾಂಗ್ರೆಸ್, ನಿರೀಕ್ಷೆಯಲ್ಲಿ ಜೆಡಿಎಸ್: ಬಿಜೆಪಿ ಮತ ಕಡಿಮೆ, ಅಡ್ಡ ಮತದಾನದ ಅನುಮಾನ; ಶಾಸಕಾಂಗ ಸಭೆಯಲ್ಲಿ ಕೈ ನಾಯಕರ ವಿಶ್ವಾಸ

    ಮತ್ತೆ ಬಂದರು ಕಮಲ್ ಹಾಸನ್; ಬಾಕ್ಸ್​ಆಫೀಸ್​ನಲ್ಲಿ ತ್ರಿವಿಕ್ರಮ

    ರಾಷ್ಟ್ರಪತಿ ಗದ್ದುಗೆ ಯಾರಿಗೆ?; ಜುಲೈ 24ಕ್ಕೆ ರಾಮನಾಥ ಕೋವಿಂದ ಅಧಿಕಾರಾವಧಿ ಮುಕ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts