More

    ಆರ್​ಸಿಬಿ ವಿರುದ್ಧ ಹೀನಾಯ ಸೋಲು: ತಮ್ಮನ್ನು ತಾವೇ ಟ್ರೋಲ್​ ಮಾಡಿಕೊಂಡ ರಾಜಸ್ಥಾನ ರಾಯಲ್ಸ್​!

    ನವದೆಹಲಿ: ನಿನ್ನೆ (ಏಪ್ರಿಲ್​ 22) ನಡೆದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎದುರು ಹೀನಾಯ ಸೋಲನ್ನು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

    ಪಂದ್ಯದ ಸೋತ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್​ ತಂಡ ತಾವೇ ಟ್ರೋಲ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ಅಚ್ಚರಿಗೆ ದೂಡಿದೆ. ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಯಾವುದೇ ಅಡಿಬರಹ ಇಲ್ಲದ ಒಂದೇ ಒಂದು ಮೀಮ್ಸ್​ ಹರಿಬಿಟ್ಟಿದೆ. ಅದರಲ್ಲಿ “ಡೈರೆಕ್ಟೆಡ್​ ಬೈ ರಾಬರ್ಟ್​ ಬಿ ವೀಡ್​” ಎಂದು ಬರೆದು ತಮ್ಮ ಆಟವನ್ನು ತಾವೇ ಕಾಲೆಳೆದುಕೊಂಡಿದೆ.

    ಅಂದಹಾಗೆ “ಡೈರೆಕ್ಟೆಡ್​ ಬೈ ರಾಬರ್ಟ್​ ಬಿ ವೀಡ್​” ಎನ್ನುವುದು ದುರಂತ ಅಂತ್ಯವಿರುವ ತಮಾಷೆ ವಿಡಿಯೋ ಕೊನೆಯಲ್ಲಿ ಇದನ್ನು ಸಾಮಾನ್ಯವಾಗಿ ಪ್ರದರ್ಶಿಸಲ್ಪಡುತ್ತದೆ. ಇದನ್ನು ವೈಫಲ್ಯವನ್ನು ವ್ಯಕ್ತಪಡಿಸುವ ಸಂಕೇತವಾಗಿ ಬಳಸಲಾಗುತ್ತಿದೆ.

    ಇದೀಗ ರಾಜಸ್ಥಾನ ರಾಯಲ್ಸ್​ ಕ್ರೀಡಾ ಸ್ಫೂರ್ತಿಗೆ ಮರುಳಾಗಿರುವ ನೆಟ್ಟಿಗರು ತಂಡದ ಟ್ವಿಟರ್​ ಅಡ್ಮಿನ್​​ನನ್ನು ಕೊಂಡಾಡುತ್ತಿದ್ದಾರೆ. ಅಲ್ಲದೆ, ರಾಜಸ್ಥಾನ್​ ಮೀಮ್ಸ್​ಗೆ 21 ಸಾವಿರಕ್ಕೂ ಹೆಚ್ಚು ಲೈಕ್ಸ್​ ಜತೆಗೆ ನೂರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ.

    ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ, ಫೀಲ್ಡಿಂಗ್ ಆಯ್ದುಕೊಂಡರು. ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ (46 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಮತ್ತು ರಾಹುಲ್ ತೆವಾಟಿಯಾ (40 ರನ್, 23 ಎಸೆತ, 4 ಬೌಂಡರಿ, 2 ಸಿಕ್ಸರ್) ಪ್ರದರ್ಶಿಸಿದ ಬಿರುಸಿನ ಆಟದಿಂದ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್ 177 ರನ್ ಪೇರಿಸುವಲ್ಲಿ ಸಲವಾಯಿತು. ಆದರೆ ಈ ಮೊತ್ತ ಸವಾಲೇ ಅಲ್ಲ ಎಂಬಂತೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ-ಪಡಿಕಲ್ ಜೋಡಿ 16.3 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 181 ರನ್ ಪೇರಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು. 4ನೇ ಪಂದ್ಯದಲ್ಲಿ 3ನೇ ಸೋಲು ಕಂಡ ರಾಜಸ್ಥಾನ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿಯಿತು.

    ಪಡಿಕಲ್-ಕೊಹ್ಲಿ ಭರ್ಜರಿ ಜತೆಯಾಟ
    ಕಳೆದ ಕೆಲ ಪಂದ್ಯಗಳಿಂದ ಉತ್ತಮ ಆರಂಭ ಕಾಣಲು ವಿಲವಾಗುತ್ತಿದ್ದ ಆರ್‌ಸಿಬಿ ತಂಡ ಈ ಬಾರಿ ಆರಂಭಿಕ ಜೋಡಿಯ ಸಾಹಸದಿಂದಲೇ ಗೆಲುವಿನ ದಡ ಸೇರಿತು. ಕರೊನಾದಿಂದ ಚೇತರಿಸಿಕೊಂಡು ಆರ್‌ಸಿಬಿ ತಂಡ ಕೂಡಿಕೊಂಡ ಬಳಿಕ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಎಡಗೈ ಆರಂಭಿಕ ದೇವದತ್ ಪಡಿಕಲ್ ವಾಂಖೆಡೆ ಮೈದಾನದಲ್ಲಿ ಆರಂಭದಿಂದಲೇ ರನ್ ಪ್ರವಾಹ ಹರಿಸಿದರು. ಆರಂಭದಲ್ಲಿ ಅವರಿಗೆ ಬೆಂಬಲವಾಗಿ ತಾಳ್ಮೆಯ ಆಟವಾಡಿದ ಕೊಹ್ಲಿ ಬಳಿಕ ತಾವೂ ಭರ್ಜರಿ ಹೊಡೆತಗಳ ಮೂಲಕ ಗಮನಸೆಳೆದರು. ಪಡಿಕಲ್ 27 ಎಸೆತಗಳಲ್ಲಿ ಮತ್ತು ಕೊಹ್ಲಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಪಡಿಕಲ್ 51 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಈ ಜೋಡಿಯನ್ನು ಬೇರ್ಪಡಿಸಲು ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ನಡೆಸಿದ ಪ್ರಯತ್ನಗಳೆಲ್ಲ ವಿಲವಾದವು. (ಏಜೆನ್ಸೀಸ್​)

    ಪಡಿಕಲ್ ಭರ್ಜರಿ ಶತಕ, ಕೊಹ್ಲಿ ಆಕರ್ಷಕ ಅರ್ಧಶತಕ; ಆರ್‌ಸಿಬಿಗೆ ಸತತ 4ನೇ ಜಯ

    ಪ್ರಿಯಕರನ ಮಾತು ನಂಬಿ ಹೋಟೆಲ್​ಗೆ​ ಹೋದವಳು ಹೆಣವಾಗಿದ್ದೇಕೆ? 3 ತಿಂಗಳ ಬಳಿಕ ಸತ್ಯಾಂಶ ಬಯಲು!

    VIDEO| ಭಾರಿ ಗಾಳಿ-ಮಳೆಗೆ ನೀರಿನ ಹನಿಯಂತೆ ಉದುರಿದ ಮಾವು ಬೆಳೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts