More

    ಅದ್ಧೂರಿ ಜೀವನಶೈಲಿಯ ನಡುವೆಯು ಸರಳವಾಗಿ ಬದುಕಿದ ಪುನೀತ್​ ಕುರಿತು ನಿಮಗೆ ಗೊತ್ತಿರದ ಸಂಗತಿ ಇಲ್ಲಿದೆ…

    ಬೆಂಗಳೂರು: ಬಾಲ ನಟನಾಗಿ ಮುಗ್ಧ ಅಭಿನಯದಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಕನ್ನಡ ಚಿತ್ರ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದ ಪುನೀತ್​, ಚಿತ್ರನಟ ಮಾತ್ರವಲ್ಲದೇ ಹಿನ್ನೆಲೆ ಗಾಯನ, ನಿರೂಪಕರಾಗಿಯೂ ಕೂಡ ಸ್ಯಾಂಡಲ್​ವುಡ್​ನಲ್ಲಿ ಛಾಪು ಮೂಡಿಸಿದವರು. ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಮನಗೆದ್ದ ಅಪ್ಪು ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಜತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪುನೀತ್​ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

    ಪುನೀತ್​ ಸರಳ ಹಾಗೂ ಸ್ನೇಹ ಜೀವಿಯಾಗಿದ್ದರು. ತಮ್ಮ ತಂದೆ ಬಹುದೊಡ್ಡ ಸ್ಟಾರ್​ ಎಂಬ ಹಮ್ಮುಬಿಮ್ಮು ತೋರಿದವರಲ್ಲ. ರಾಜ್​ರಂತೆ ಪುನೀತ್​ ಕೂಡ ಸರಳ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ಸಿನಿಮಾದಲ್ಲಿ ಆಳಾಗಿ ದುಡಿದು ಜೀವನದಲ್ಲಿ ಅರಸನಂತೆ ಬದುಕಿದ ಪುನೀತ್​, ಸರಳ ಜೀವನ ಶೈಲಿ ಮಾತ್ರವಲ್ಲದೇ, ಅದ್ದೂರಿ ಜೀವನಶೈಲಿಯನ್ನು ಹೊಂದಿದ್ದರು. ಆ ಕುರಿತ ಕೆಲ ಇಂಟೆರೆಸ್ಟಿಂಗ್​ ಮಾಹಿತಿ ಇಲ್ಲಿದೆ.

    ಪುನೀತ್​ಗೆ ಉತ್ತರ ಕರ್ನಾಟಕದ ಆಹಾರ ಅಂದರೆ ತುಂಬಾ ಅಚ್ಚುಮೆಚ್ಚಾಗಿತ್ತು. ಜವಾರ್​, ರೋಟಿ, ಮೀನು, ಮಂಗಳೂರಿನ ಗೀ ರೋಸ್ಟ್​, ಇಡ್ಲಿ ಹಾಗೂ ಪೇಡ ಮುಂತಾದವುಗಳು ಬಲು ಇಷ್ಟವಾಗಿತ್ತು. ನಾಟಿಕೋಳಿ ಸಾಂಬರ್​ ಪುನೀತ್​ ಫೇವರಿಟ್​ ಆಗಿತ್ತು. ಪುನೀತ್​ ಹುಟ್ಟಿನಿಂದಲೂ ಅಕ್ಕಪಕ್ಕದ ಹುಡುಗನಂತಿದ್ದ. ನಾನೊಬ್ಬ ಸ್ಟಾರ್​ ಮಗ ಎಂಬ ಅಹಂ ಇರಲಿಲ್ಲ. ಎಲ್ಲರ ಜತೆ ಸುಲಭವಾಗಿ ಬೆರೆಯುತ್ತಿದ್ದರು.

    ಇನ್ನು ಪುನೀತ್​ ಅವರ ಆದಾಯ 60 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರತಿ ಸಿನಿಮಾಗೆ 6 ರಿಂದ 7 ಕೋಟಿ ರೂಪಾಯಿಯನ್ನು ಪಡೆಯುತ್ತಿದ್ದರು. ಅತಿ ಹೆಚ್ಚಿನ ಆದಾಯ ಜಾಹಿರಾತುಗಳಿಂದ ಬರುತ್ತಿತ್ತು. ಒಂದು ಬ್ರ್ಯಾಂಡ್​ ಜಾಹಿರಾತಿಗೆ 1 ಕೋಟಿ ರೂ. ಅನ್ನು ಪುನೀತ್​ ಚಾರ್ಜ್​ ಮಾಡುತ್ತಿದ್ದರು. ಪಿಆರ್​ಕೆ ಹೆಸರಿನ ತಮ್ಮದೇ ಸ್ವಂತ ಪ್ರೊಡಕ್ಷನ್​ ಹೌಸ್​ ಅನ್ನು ಹೊಂದಿದ್ದಾರೆ. ಬೆಂಗಳೂರು ರಾಯಲ್ಸ್​ ಹೆಸರಿನ ಫುಟ್​ಬಾಲ್​ ಟೀಮ್​ ಕೂಡ ಹೊಂದಿದ್ದರು.

    ಪುನೀತ್​ ಕಾರುಗಳ ಕ್ರೇಜ್​ ಇತ್ತು. 3 ಕೋಟಿ ರೂ. ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಒಡೆಯರಾಗಿದ್ದರು. ಅಲ್ಲದೆ, ಫೋರ್ಡ್​, ಎಂಡೇವಿಯರ್​, ಟೊಯೋಟಾ ಫಾರ್ಚುನರ್​, ಮಿನಿ ಕೂಪರ್​ ಕನವರ್ಟಿಬಲ್​ ಹಾಗೂ ಇತರೆ ಕಾರುಗಳ ಸಂಗ್ರಹವನ್ನು ಪುನೀತ್​ ಹೊಂದಿದ್ದರು. ಎಲ್ಲ ಕಾರುಗಳು ಕೂಡ 30 ರಿಂದ 40 ಲಕ್ಷದ ರೇಂಜ್​ನಲ್ಲಿವೆ. ಇವುಗಳೊಂದಿಗೆ 80 ರಿಂದ 90 ಲಕ್ಷ ಮೌಲ್ಯದ ವೋಲ್ವೋ ಎಕ್ಷ್​ಸಿ90 ಆಡಿ ಕ್ಯೂ7 ಕಾರು ಸಹ ಇತ್ತು. ರೇಂಜ್​ ರೋವರ್​, ವೋಗ್​, ನಿಶಾನ್​ ಜಿಟಿಆರ್​ ಸಂಗ್ರಹವು ಇದೆ.

    ಇನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪುನೀತ್​ ತಮ್ಮ ಮಡದಿ ಅಶ್ವಿನಿ ಅವರಿಗೆ 4 ಕೋಟಿ ರೂ. ಮೌಲ್ಯದ ಎಸ್​ಯುವಿ ಕಾರು ಉಡುಗೊರೆ ನೀಡಿದ್ದಾರೆ. ಕೇವಲ ಕಾರು ಮಾತ್ರವಲ್ಲದೆ, ಪುನೀತ್​ಗೆ ಬೈಕ್​ ಕ್ರೇಜ್​ ಕೂಡ ಇತ್ತು. 3 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯೂ ಜಿ310 ಹಾಗೂ 13 ಲಕ್ಷ ರೂ. ಮೌಲ್ಯದ ಇಂಡಿಯನ್​ ಸ್ಕೌಟ್​ ಬೈಕ್​ ಹೊಂದಿದ್ದರು.

    ಅಪ್ಪುಗಾಗಿ ಚಿತ್ರರಂಗದಿಂದ ‘ಪುನೀತ ನಮನ’: ಎಲ್ಲಿ-ಹೇಗೆ ನಡೆಯುತ್ತೆ, ಯಾರ್ಯಾರು ಭಾಗಿ?; ಇಲ್ಲಿದೆ ವಿವರ..

    ಅಪ್ಪು ಫೋಟೋಗಳಿಗೆ ಡಿಮಾಂಡ್​: ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಕ್ಯಾಪ್ಷನ್​ಗೆ ಬೇಡಿಕೆ ಹೆಚ್ಚಾಗಿದೆ…

    ಪುನೀತ್ ನೇತ್ರದಾನದಿಂದ ಮತ್ತಷ್ಟು ಮಂದಿಗೆ ದೃಷ್ಟಿಭಾಗ್ಯ; ನಾಲ್ವರಿಗಲ್ಲ ಇನ್ನೂ ಹಲವರ ಬಾಳಿಗೆ ಬೆಳಕಾಗಲಿದ್ದಾರೆ ‘ಅಪ್ಪು’

    ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts