More

    PSI ನೇಮಕಾತಿ ಹಗರಣ: ಕಾಂಗ್ರೆಸ್​ ಜತೆಗಿನ ನಂಟಿನ ಬಗ್ಗೆ ಸಿಐಡಿ ಎದುರು ತಿಳಿಸಿದ ದಿವ್ಯಾ ಹಾಗರಗಿ

    ಕಲಬುರಗಿ: ತನಗೂ ಹಾಗೂ ಕಾಂಗ್ರೆಸ್​ ಪಕ್ಷಕ್ಕೂ ಇರುವ ನಂಟನ್ನು ಸಿಐಡಿ ತನಿಖಾ ತಂಡದ ಎದುರು ಪಿಎಸ್​ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಹಿರಂಗ ಪಡಿಸಿದ್ದಾರೆ.

    ದಿವ್ಯಾಗೆ ಆಶ್ರಯ ನೀಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸುರೇಶ ಕಾಟೇಗಾಂವರನ್ನು ಬಂಧಿಸಲಾಗಿದೆ. ಸುರೇಶ ಕಾಟೇಗಾಂವ ಸಹೋದರಿ ಸುರೆಖಾ ಕೂಡ ಕಾಂಗ್ರೆಸ್ ನಾಯಕಿ. ಸುರೇಖಾ ಅವರು ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯಾಗಿದ್ದಾರೆ.

    ಸುರೇಶಗೆ ಅಫಜಲಪುರದಲ್ಲಿ ಮರಳು ಬ್ಲಾಕ್ ಟೆಂಡರ್ ಪಡೆಯಲು ದಿವ್ಯಾ ಹಾಗರಗಿ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಮರಳು ಮಾಫಿಯಾದಲ್ಲಿ ಸಹಕಾರ ಮಾಡಿದ‌ ಹಿನ್ನಲೆ ದಿವ್ಯಾ ಹಾಗರಗಿಗೆ ತೆಲೆ‌ಮರೆಸಿಕೊಳ್ಳಲು ಸುರೇಶ್​ ಕಾಟೆಂಗಾವ್​ ಸಹಾಯ ಮಾಡಿದ್ದಾರೆ.

    ಪಿಎಸ್ಐ ಅಕ್ರಮ ಬಯಲಾಗುತ್ತಿದ್ದಂತೆಯೇ ದಿವ್ಯಾ, ಏಪ್ರಿಲ್ 13 ರಂದು ಕಲಬುರಗಿಯಿಂದ ಗುಜರಾತಿನ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದರು. ಗುಜರಾತಿನಲ್ಲಿ 4 ದಿನ ತಲೆಮರೆಸಿಕೊಂಡಿದ್ದ ದಿವ್ಯಾ, ಅಲ್ಲಿಂದ ಗುಜರಾತನ ಅಂಬಾಜಿ ಮಂದಿರಕ್ಕೆ ತೆರಳಿ 3 ರಿಂದ 4 ದಿನ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಪುಣೆಗೆ ತೆರಳಿ ಕಾಳಿದಾಸ್​ಗೆ ಸೇರಿದ್ದ ಅಪಾರ್ಟ್ಮೆಂಟ್​ನಲ್ಲಿ 5 ದಿನ ವಾಸ್ತವ್ಯ ಹೂಡಿದ್ದರು.

    ಕಾಳಿದಾಸ, ಸುರೇಶ್ ಅವರ ಕಂಪನಿಯ ಉದ್ಯೋಗಿ. ಕಾಳಿದಾಸ ಅಪಾರ್ಟ್​ಮೆಂಟ್​ಗೆ ತೆರಳಿಯೇ ಸಿಐಡಿ ಅಧಿಕಾರಿಗಳು ದಿವ್ಯಾರನ್ನು ಬಂಧಿಸಿ, ರಾಜ್ಯಕ್ಕೆ ಕರೆತಂದಿದ್ದಾರೆ. (ಏಜೆನ್ಸೀಸ್​)

    ಕಾರ್ಮಿಕರ ದಿನದಂದೇ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್​: LPG ಸಿಲಿಂಡರ್​ ಬೆಲೆಯಲ್ಲಿ 102.50 ರೂ. ಹೆಚ್ಚಳ

    ಪರೋಟ ತಿಂದ ಮರುದಿನವೇ ಬಾಲಕ ದುರಂತ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಬಿ.ಎಲ್​. ಸಂತೋಷ್​ ಹೇಳಿಕೆಯಿಂದ ಬಿಜೆಪಿ ಶಾಸಕರು ಹಾಗೂ ಸಚಿವರ ಎದೆಯಲ್ಲಿ ಶುರುವಾಯ್ತು ಭಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts