ಲವರ್​ ಜತೆ ರಾತ್ರಿ ಹೋಟೆಲ್​ಗೆ ಹೋದ ಸುಂದರಿಯ ದುರಂತ ಸಾವಿಗೆ ಕಾರಣವಾಯ್ತು ವಾಟ್ಸ್​ಆ್ಯಪ್​ ಸ್ಟೇಟಸ್!​​

blank

ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರದ ಹೋಟೆಲ್​ ಒಂದರಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪ್ರವೀಣ್​ ಎಂದು ಗುರುತಿಸಲಾಗಿದೆ. ಮೃತ ಗಾಯತ್ರಿ ಕೊಲೆಯಾಗಿದ್ದು, ಇದೊಂದು ಪೂರ್ವ ಯೋಜಿತ ಎಂದು ಪೊಲೀಸರು ಹೇಳಿದ್ದು, ಇದನ್ನು ಆರೋಪಿ ಪ್ರವೀಣ್​ ನಿರಾಕರಿಸಿದ್ದಾನೆ. ನಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಸರಿ ಮಾಡಿಕೊಳ್ಳಲು ಆಕೆಯನ್ನು ಹೋಟೆಲ್​ ಕೊಠಡಿಗೆ ಕರೆದೊಯ್ದೆ. ಆದರೆ, ದುರಾದೃಷ್ಟವಶಾತ್​ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಯದೇ ಮತ್ತಷ್ಟು ಬಿಗಡಾಯಿಸಿ ಅದು ಕೊಲೆಯಲ್ಲಿ ಅಂತ್ಯವಾಯಿತು ಎಂದು ಪ್ರವೀಣ್​ ಹೇಳಿಕೆ ನೀಡಿದ್ದಾನೆ.

ಕಳೆದ ಭಾನುವಾರ ರಾತ್ರಿ ಪ್ರವೀನ್​ ಹೋಟೆಲ್​ ರೂಂ ಬುಕ್​ ಮಾಡಿದ್ದ. ಬಳಿಕ ಗಾಯತ್ರಿಯನ್ನು ಹೋಟೆಲ್​ಗೆ ಕರೆತಂದಿದ್ದ. ತನ್ನ ಮತ್ತು ಗಾಯತ್ರಿ ನಡುವಿನ ಸಂಬಂಧವನ್ನು ಕಡಿದುಕೊಳ್ಳಲು ಬಯಸಿದ್ದ. ಏಕೆಂದರೆ, ಪ್ರವೀಣ್​ಗೆ ಈಗಾಗಲೇ ಮದುವೆ ಆಗಿದೆ. ಆದರೆ, ಗಾಯತ್ರಿ ಸಂಬಂಧವನ್ನು ಕಡಿದುಕೊಳ್ಳಲು ಒಪ್ಪಿಕೊಳ್ಳದೇ ತನ್ನನ್ನು ಜತೆಗೆ ಕರೆದುಕೊಂಡು ಹೋಗುವಂತೆ ಹಠಕ್ಕೆ ಬಿದ್ದಿದ್ದಳು ಎಂದು ಪ್ರವೀಣ್​ ತಿಳಿಸಿದ್ದಾನೆ.

ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಾಯತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಲ್ಲದೆ, ಇದೇ ಸಂದರ್ಭದಲ್ಲಿ ಪ್ರವೀಣ್​ ಜತೆ ಮದುವೆ ಆಗಿದ್ದ ಫೋಟೋಗಳನ್ನು ಗಾಯತ್ರಿ ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಅಪ್​ಲೋಡ್​ ಮಾಡುತ್ತಾಳೆ. ಇದರಿಂದ ಪ್ರಚೋದನೆಗೆ ಒಳಗಾಗಿ ಆಕೆಯನ್ನು ಕೊಲೆ ಮಾಡಿದ್ದಾಗಿ ಪ್ರವೀಣ್​ ಹೇಳಿಕೆ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಬಳಿಕ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಗಾಯತ್ರಿಯ ಮೊಬೈಲ್​ ತೆಗೆದುಕೊಂಡಿದ್ದಾನೆ. ಆಕೆಯ ಸಂಬಂಧಿಕರು ಮಾಡುವ ಕರೆಗಳನ್ನು ಸ್ವೀಕರಿಸಿ, ಗಾಯತ್ರಿ ತನ್ನೊಂದಿಗೆ ಇರುವುದಾಗಿ ಮಾತನಾಡಿದ್ದಾನೆ. ಇಬ್ಬರ ನಡುವಿನ ಸಂಬಂಧ ಪಾಲಕರಿಗೂ ಮತ್ತು ಸಂಬಂಧಿಕರಿಗೂ ಸಹ ತಿಳಿದಿತ್ತು. ಅಲ್ಲದೆ, ಗಾಯತ್ರಿಯ ವಾಟ್ಸ್​ಆ್ಯಪ್​ ಸ್ಟೇಟಸ್​​ ಅನ್ನು ಆಕೆಯ ಫೇಸ್​ಬುಕ್​ಗೆ ಶೇರ್​ ಮಾಡಿ ಲವ್​ ಯೂ ಎಂದು ಬರೆದಿದ್ದಾನೆ.

ಇದಾದ ಬಳಿಕ ಏನು ಮಾಡುವುದೆಂದು ತೋಚದೆ ವಕೀಲರ ಬಳಿ ತೆರಳಿ ಎಲ್ಲವನ್ನು ವಿವರಿಸಿದ್ದಾರೆ. ತಕ್ಷಣ ನೀನು ಶರಣಾಗು ಎಂದು ವಕೀಲರು ಹೇಳಿದ ಬಳಿಕ ಆರೋಪಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅದಕ್ಕೂ ಮುನ್ನ ಹೋಟೆಲ್​ಗೆ ಕರೆ ಮಾಡಿ ಗಾಯತ್ರಿಯ ಮೃತದೇಹ ಕೊಠಡಿಯಲ್ಲಿದೆ ಎಂದು ಹೇಳಿದ್ದಾನೆ. ಸದ್ಯ ಆರೋಪಿಯ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆತನನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ಕಾಂಡೋಮ್​ ಟೆಸ್ಟರ್​ ಪಾತ್ರದ ಬಗ್ಗೆ ಪಾಲಕರ ಪ್ರತಿಕ್ರಿಯೆ ಹೇಗಿತ್ತು? ರಾಕುಲ್​ ಹೇಳಿದ ಅಚ್ಚರಿಯ ಮಾತುಗಳಿವು..

ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್​ ಸೇನಾ ಪಡೆ ಸೇರಿದ ತಮಿಳು ವಿದ್ಯಾರ್ಥಿ! ಪಾಲಕರು ಕೊಟ್ಟ ಕಾರಣ ಹೀಗಿದೆ…

ಇದುವರೆಗೂ ನೋಡಿರದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ! ತಜ್ಞರು ಹೇಳಿದ ಕಾರಣ ಇಲ್ಲಿದೆ…

Share This Article

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…

ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…