More

    ಪಿಎಸ್​ಐ ಕೆಲಸ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂ. ವಂಚನೆ: ಹಣ ವಾಪಸ್​ ಕೇಳಿದ್ರೆ ಕೊಲೆ ಬೆದರಿಕೆ

    ರಾಮನಗರ: ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ ಕೆಲಸ ಕೊಡುವುದಾಗಿ ನಂಬಿಸಿ 14 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಘಟನೆ ನಡೆದಿದ್ದು, ಚನ್ನಪಟ್ಟಣ ಪುರ ಪೊಲೀಸ್​ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ.

    ಆರೋಪಿಗಳಾದ ಚನ್ನಪಟ್ಟಣ ನಗರದ ಗಿರೀಶ್, ವಂದಾರಗುಪ್ಪೆ ಪೊಲೀಸ್ ತರಬೇತಿ ಶಾಲೆಯ ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ವಿರುದ್ಧ ದೂರು ದಾಖಲಾಗಿದೆ. ಕೆಲಸ ಕೊಡಿಸುವುದಾಗಿ 2019ನೇ ಸಾಲಿನಲ್ಲಿ ಅಮಾಯಕರಿಂದ ಆರೋಪಿಗಳು ಹಣ ಪೀಕಿದ್ದರು.

    ಬೆಂಗಳೂರು ದಕ್ಷಿಣ ತಾಲೂಕಿನ‌ ಕೆಂಗೇರಿ ಬಳಿಯ ರಾಮೋಹಳ್ಳಿಯ ಗೋವಿಂದರಾಜು ಮತ್ತು ದಿಲೀಪ್ ಎಂಬುವರು ಹಣ ಕಳೆದುಕೊಂಡಿದ್ದು, ದೂರು ನೀಡಿದ್ದಾರೆ. ಮೂವರಿಗೆ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ 36 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಂತ ಹಂತವಾಗಿ ಈವರೆಗೆ 14 ಲಕ್ಷ ನೀಡಿರುವುದಾಗಿ ಗೋವಿಂದರಾಜು ಮತ್ತು ದಿಲೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಹಣ ನೀಡಿ ಒಂದು ವರ್ಷ‌ ಕಳೆದರೂ ಕೆಲಸ ಕೊಡಿಸುವ ವಿಚಾರವಾಗಿ ಮಾತನಾಡಿದರೆ ಆರೋಪಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಬೌನ್ಸ್ ಚೆಕ್ ನೀಡಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದ್ರು ಏನು ಮಾಡಿಕೊಳ್ಳಲು ಆಗಲ್ಲ ಎಂದು ಧಮಕಿ ಹಾಕಿದ್ದಾರೆ.

    ಸದ್ಯ ಈ ಸಂಬಂಧ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ ಮಮತಾ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಇದೀಗ ಖದೀಮರಿಗಾಗಿ ಖಾಕಿ ಪಡೆ ಬಲೆ ಬೀಸಿದೆ. (ದಿಗ್ವಿಜಯ ನ್ಯೂಸ್​)

    ಮಾಡೆಲ್​ಗಳಿಬ್ಬರ ದುರ್ಮರಣ: ನಿಗೂಢ ಸಾವಿಗೆ ಕೊನೆಗೂ ಕಾರಣ ಪತ್ತೆಹಚ್ಚಿದ ಪೊಲೀಸರು!

    ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆಂದು ಹೇಳಿ ಹೋದ ಪತ್ನಿ: ಪತಿಗೆ ಕಾದಿತ್ತು ಬಿಗ್​ ಶಾಕ್​!

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವನ ಪುತ್ರನಿಗೆ ಸಿಗಲಿಲ್ಲ ಜಾಮೀನು- ಕೋರ್ಟ್‌ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts