More

    ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಸಂಸ್ಕಾರ: ಸ್ನೇಹಿತನಿಗೆ ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ಮೋದಿ ​

    ಟೋಕಿಯೊ: ಜಪಾನ್​ ರಾಜಧಾನಿ ಟೋಕಿಯೊದಲ್ಲಿಂದು ನಡೆಯುತ್ತಿರುವ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ನೆಚ್ಚಿನ ಸ್ನೇಹಿತನಿಗೆ ಅಂತಿಮ ಗೌರವವನ್ನು ಸಲ್ಲಿಸಿದ್ದಾರೆ.

    ಸೋಮವಾರ ರಾತ್ರಿ ಟೋಕಿಯೊಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ ಅವರು ಜಪಾನ್​ ಪ್ರಧಾನಿ ಪುಮಿಯೋ ಕಿಷಿದಾರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಆಳಗೊಳಿಸುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅವರು ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಿದರು

    ಇಂದು ಬೆಳಗ್ಗೆ ನಡೆಯುತ್ತಿರುವ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಅಲ್ಲದೆ, ನೂರಾರು ದೇಶಗಳ ಪ್ರತಿನಿಧಿಗಳು ಸಹ ಭಾಗಿಯಾಗಿದ್ದು, ಅಬೆಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

    ಕಳೆದ ಜುಲೈ 8ರಂದು ಜಪಾನ್​​ನ ಪಶ್ಚಿಮ ಭಾಗದ ನಗರ ನಾರಾದ ರೈಲು ನಿಲ್ದಾಣ ಸಮೀಪ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ 67 ವರ್ಷದ ಶಿಂಜೋ ಅಬೆ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡೇಟಿನಿಂದ ತೀವ್ರ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಶಿಂಜೋ ಅಬೆ ಅದೇ ದಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

    1982ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಶಿಂಜೋ ಅಬೆ, ವಿದೇಶಾಂಗ ಇಲಾಖೆಯಲ್ಲೂ ಕೆಲಸ ಮಾಡಿದ್ದಾರೆ. 2006ರ ಜುಲೈನಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. 52ನೇ ವಯಸ್ಸಿನಲ್ಲಿ ಪ್ರಧಾನಿ ಹುದ್ದೆಗೇರಿದ ಅಬೆ, ಆ ಮೂಲಕ ಅತಿ ಕಿರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಪ್ರಧಾನ ಮಂತ್ರಿಯಾಗಿ ಎರಡು ಅವಧಿಯನ್ನೂ ಪೂರ್ಣಗೊಳಿಸಿ, ಅನಾರೋಗ್ಯದ ಕಾರಣಕ್ಕಾಗಿ 2020ರಲ್ಲಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು. (ಏಜೆನ್ಸೀಸ್​)

    ಆಲಿಯಾ​ ಜತೆ ಮಲಗುವುದೆಂದರೆ ಅದೊಂದು ಹೋರಾಟ! ರಣಬೀರ್​​ ಹೇಳಿಕೆಗೆ ಆಲಿಯಾ ಉತ್ತರ ಹೀಗಿತ್ತು….

    ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

    ಸ್ಟಾರ್​​ ನಟನ ಪುತ್ರನ ಜೊತೆ ರೋಜಾ ಪುತ್ರಿಯ ರೊಮ್ಯಾನ್ಸ್​: ಕಾಲಿವುಡ್​ ಗಲ್ಲಿಯಲ್ಲಿ ಹೀಗೊಂದು ಸುದ್ದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts