More

    ಬ್ರಿಟನ್​ ಪ್ರಧಾನಿಯನ್ನು ಸ್ವಾಗತಿಸಿದ ಪ್ರಧಾನಿ ಮೋದಿ: ಹವಾಮಾನ ಬದಲಾವಣೆ, ರಕ್ಷಣೆ ಕುರಿತು ಚರ್ಚೆ ಸಾಧ್ಯತೆ

    ನವದೆಹಲಿ: ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಪ್ರವಾಸದ ಎರಡನೇ ದಿನವಾಗ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಜಾನ್ಸನ್​ ಅವರನ್ನು ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

    ಪ್ರವಾಸದ ಮೊದಲನೇ ದಿನ ಗುಜರಾತಿನ ಸಬರಮತಿಯಲ್ಲಿರುವ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಚರಕವನ್ನು ತಿರುಗಿಸಿ, ಆಶ್ರಮವನ್ನು ಕಣ್ತುಂಬಿಕೊಂಡರು. ಅಲ್ಲದೆ, ಅಲ್ಲಿನ ಸರ್ಕಾರ ಹಾಗೂ ಉದ್ಯಮಿಗಳು ಜತೆ ಸಭೆ ನಡೆಸಿದರು.

    ಇಂದು ಪ್ರಧಾನಿ ಮೋದಿ ಅವರನ್ನು ಜಾನ್ಸನ್​ ಅವರು ಭೇಟಿಯಾಗಿದ್ದಾರೆ. ಭೇಟಿಗೂ ಮುನ್ನ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ ಸ್ನೇಹಿತ ಬೋರಿಸ್​ ಜಾನ್ಸನ್​ ಅವರನ್ನು ಭಾರತದಲ್ಲಿ ನೋಡಲು ತುಂಬಾ ಖುಷಿಯಾಗುತ್ತದೆ. ನಮ್ಮ ನಡುವಿನ ಚರ್ಚೆಗೆ ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ. ಜಾನ್ಸನ್​ ಕೂಡ ಮೋದಿ ಭೇಟಿಯ ಬಗ್ಗೆ ಉತ್ಸುಕ ವ್ಯಕ್ತಪಡಿಸಿದ್ದಾರೆ. ಹವಾಮಾನ ಬದಲಾವಣೆಯಿಂದಿಡಿದು ಇಂಧನ ಭದ್ರತೆ ಮತ್ತು ರಕ್ಷಣೆ, ನಿರಂಕುಶಾಧಿಕಾರದ ರಾಷ್ಟ್ರಗಳಿಂದ ಹೆಚ್ಚಾಗುತ್ತಿರುವ ಜಾಗತಿಕ ಬೆದರಿಕೆಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಪ್ರಜಾಪ್ರಭುತ್ವದ ಪಾಲುದಾರಿಕೆಯು ಅತ್ಯಗತ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು, ಮುಕ್ತ ಮತ್ತು ನ್ಯಾಯಯುತ ವ್ಯಾಪಾರವನ್ನು ಉಸಿರುಗಟ್ಟಿಸಲು ಮತ್ತು ಸಾರ್ವಭೌಮತ್ವವನ್ನು ತುಳಿಯಲು ಪ್ರಯತ್ನಿಸುವ ನಿರಂಕುಶಾಧಿಕಾರದ ರಾಜ್ಯಗಳಿಂದ ಜಗತ್ತು ಬೆದರಿಕೆಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತದೊಂದಿಗಿನ ಯುಕೆ ಪಾಲುದಾರಿಕೆಯು ಬಿರುಗಾಳಿಯ ಸಮುದ್ರಗಳಲ್ಲಿ ದಾರಿದೀಪವಾಗಿದೆ. ಹವಾಮಾನ ಬದಲಾವಣೆಯಿಂದಿಡಿದು ಇಂಧನ ಭದ್ರತೆ ಮತ್ತು ರಕ್ಷಣೆಯವರೆಗೆ ಉಭಯ ದೇಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುವುದಾಗಿ ಹೇಳಿದರು.

    ಇದಕ್ಕೂ ಮುನ್ನ ದೆಹಲಿಗೆ ಬಂದಿಳಿದ ಬೋರಿಸ್​ ಜಾನ್ಸನ್​ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ನೀಡಲಾಯಿತು. (ಏಜೆನ್ಸೀಸ್​)

    21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!

    ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

    ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts