More

    ಯುದ್ಧ ಪೀಡಿತ ಯೂಕ್ರೇನ್​ನಿಂದ ಸುರಕ್ಷಿತ ಸ್ಥಳಾಂತರ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಾಕ್​ ಯುವತಿ

    ನವದೆಹಲಿ: ರಾಜಧಾನಿ ಕೀಯೆವ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಯುದ್ಧ ಪೀಡಿತ ಯೂಕ್ರೇನ್​ನಿಂದ ಸುರಕ್ಷಿತ ವಲಯಕ್ಕೆ ಸ್ಥಳಾಂತರಗೊಂಡಿರುವ ಪಾಕಿಸ್ತಾನಿ ಯುವತಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ.

    ವಿಡಿಯೋದಲ್ಲಿ ಮಾತನಾಡಿರುವ ಯುವತಿ, ಸಂಕಷ್ಟದ ಸ್ಥಿತಿಯಲ್ಲಿ ನಮ್ಮನ್ನು ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದ ಭಾರತೀಯ ರಾಯಭಾರಿ ಕಚೇರಿ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾಳೆ. ಅಲ್ಲದೆ, ನಾವು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಮರಳುತ್ತೇವೆ ಎಂಬ ಭರವಸೆ ಇದೆ ಎಂದಿದ್ದಾಳೆ.

    ಯುವತಿಯ ಹೆಸರು ಅಸ್ಮಾ ಶಫಿಕ್​. ಅಂತಿಮವಾಗಿ ಯುದ್ಧ-ಹಾನಿಗೊಳಗಾದ ದೇಶದಿಂದ ಹೊರಬಂದಿರುವ ಅಸ್ಮಾ, ಸದ್ಯ ಪಶ್ಚಿಮ ಯೂಕ್ರೇನ್‌ಗೆ ಹೋಗುವ ದಾರಿಯಲ್ಲಿದ್ದಾಳೆ. ಶೀಘ್ರದಲ್ಲೇ ತನ್ನ ಕುಟುಂಬವನ್ನು ಸೇರಲಿದ್ದಾಳೆ.


    ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈ ಕಮಿಷನರ್ ಮಾರ್ಚ್​ 6 ರಂದು ಟ್ವೀಟ್​ ಮಾಡಿದ್ದು, ಸುಮಾರು 1.5 ಮಿಲಿಯನ್​ ಜನರು ಕಳೆದ 10 ದಿನಗಳಲ್ಲಿ ಯೂಕ್ರೇನ್​ ತೊರೆದು ಬೇರೆಡೆಗೆ ಹೋಗಿದ್ದಾರೆಂದು ಹೇಳಿದೆ. ಅದರಲ್ಲಿ ಹೆಚ್ಚಿನ ಜನರು ಪೋಲ್ಯಾಂಡ್​ಗೆ ಹೋಗಿದ್ದಾರೆ. 1 ಮಿಲಿಯನ್​ಗೂ ಅಧಿಕ ಯೂಕ್ರೇನಿಯನ್ನರು ಪೋಲ್ಯಾಂಡ್​ಗೆ ತೆರಳಿದ್ದಾರೆ.

    ಫೆ. 24ರಂದು ರಷ್ಯಾ, ಯೂಕ್ರೇನ್ ಮೇಲೆ ಯುದ್ಧ ಘೋಷಿಸಿತು. ನ್ಯಾಟೋ ಪಡೆಗೆ ಸೇರುವ ಯೂಕ್ರೇನ್​ ಆಸೆಯನ್ನು ರಷ್ಯಾ ತಿರಸ್ಕರಿಸುತ್ತಾ ಬಂದಿತ್ತು. ಅಲ್ಲದೆ, ಎಚ್ಚರಿಕೆಯನ್ನು ನೀಡಿತ್ತು. ಆದರೆ, ರಷ್ಯಾ ಎಚ್ಚರಿಕೆಗೆ ಬಗ್ಗದ ಯೂಕ್ರೇನ್​ ನ್ಯಾಟೋ ಪಡೆ ಸೇರುವುದಾಗಿ ತಿಳಿಸಿತು. ಈ ವಿಚಾರದಲ್ಲಿ ಎರಡು ರಾಷ್ಟ್ರಗಳ ನಡುವೆ ತಿಕ್ಕಾಟ ಮುಂದುರಿದುಕೊಂಡೇ ಬಂದಿತ್ತು. ಅಂತಿಮವಾಗಿ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಯೂಕ್ರೇನ್​ ವಿರುದ್ಧ ಘೋಷಣೆ ಮಾಡಿಯೇ ಬಿಟ್ಟರು.

    ಫೆ.24ರಂದು ಶುರುವಾದ ಯುದ್ಧ ಇಂದಿನವರೆಗೂ ಮುಂದುವರಿದುಕೊಂಡು ಬರುತ್ತಲೇ ಇದೆ. ಇಂದಿಗೆ ಯುದ್ಧ ಆರಂಭವಾಗಿ 14 ದಿನಗಳಾಗಿವೆ. ಯಾವಾಗ ಅಂತ್ಯವಾಗುತ್ತದೋ ಎಂದು ಜನರು ಎದುರು ನೋಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಮಂಡಿಸಿದರೂ ಅದಕ್ಕೆ ರಷ್ಯಾ ಕ್ಯಾರೆ ಎನ್ನಲಿಲ್ಲ. ಅಲ್ಲದೆ, ಅಮೆರಿಕ, ಜರ್ಮನಿ, ಬ್ರಿಟನ್​, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಅನೇಕ ರಾಷ್ಡ್ರಗಳು ರಷ್ಯಾ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದರು ರಷ್ಯಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಯುದ್ಧವನ್ನು ಮುಂದವರಿಸಿದ್ದು, ಇಡೀ ಯೂಕ್ರೇನ್​ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ.

    ಇದೀಗ ಯೂಕ್ರೇನ್​ ವಿಚಾರದಲ್ಲಿ ನಾರ್ಥ್​ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೆಶನ್​ (ನ್ಯಾಟೋ) ತನ್ನ ನಿಲುವು ಬದಲಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಇದೀಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ನ್ಯಾಟೋ ಸೇರಲು ಇಂಗಿತ ವ್ಯಕ್ತಪಡಿಸಿದ್ದ ಝೆಲೆನ್​ಸ್ಕಿ ಇದೀಗ ನ್ಯಾಟೋ ಸೇರುವ ಬಯಕೆ ಇಲ್ಲ. ಏಕೆಂದರೆ ರಷ್ಯಾ ವಿರುದ್ಧ ನ್ಯಾಟೋ ಹೋರಾಡುವುದಿಲ್ಲ ಎಂದಿದ್ದು, ಯುದ್ಧ ಮುಗಿಯುವ ಸನ್ನಿಹಿತವಾಗಿದೆ. (ಏಜೆನ್ಸೀಸ್​)

    ಬೆತ್ತಲೆ ದೇಹ ತೋರಿಸು ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

    ನ್ಯಾಟೋ ಕೈಕೊಟ್ಟ ಬೆನ್ನಲ್ಲೇ ನಿಲುವು ಬದಲಿಸಿದ ಯೂಕ್ರೇನ್​ ಅಧ್ಯಕ್ಷ: ಯುದ್ಧಕ್ಕೆ ಅಂತ್ಯ ಹೇಳೋ ಕಾಲ ಸನ್ನಿಹಿತ

    40 ಸಾವಿರ ರೂಪಾಯಿ ಕೊಟ್ರೆ ಸಿಗಲಿವೆ ಅಂಕಪಟ್ಟಿ!; ಫೇಲಾದ ವಿದ್ಯಾರ್ಥಿಗಳೇ ಟಾರ್ಗೆಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts