More

    ನ್ಯಾಟೋ ಕೈಕೊಟ್ಟ ಬೆನ್ನಲ್ಲೇ ನಿಲುವು ಬದಲಿಸಿದ ಯೂಕ್ರೇನ್​ ಅಧ್ಯಕ್ಷ: ಯುದ್ಧಕ್ಕೆ ಅಂತ್ಯ ಹೇಳೋ ಕಾಲ ಸನ್ನಿಹಿತ

    ಕೀಯೆವ್​​/ಮಾಸ್ಕೋ: ಯೂಕ್ರೇನ್​ ವಿಚಾರದಲ್ಲಿ ನಾರ್ಥ್​ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೆಶನ್​ (ನ್ಯಾಟೋ) ತನ್ನ ನಿಲುವು ಬದಲಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಇದೀಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ನ್ಯಾಟೋ ಸೇರಲು ಇಂಗಿತ ವ್ಯಕ್ತಪಡಿಸಿದ್ದ ಝೆಲೆನ್​ಸ್ಕಿ ಇದೀಗ ನ್ಯಾಟೋ ಸೇರುವ ಬಯಕೆ ಇಲ್ಲ. ಏಕೆಂದರೆ ರಷ್ಯಾ ವಿರುದ್ಧ ನ್ಯಾಟೋ ಹೋರಾಡುವುದಿಲ್ಲ ಎಂದಿದ್ದಾರೆ.

    ಎಬಿಸಿ ನ್ಯೂಸ್​ ಸಂದರ್ಶನದಲ್ಲಿ ಮಾತನಾಡಿರುವ ಝೆಲೆನ್​​ಸ್ಕಿ, ಇದೊಂದು ಸೂಕ್ಷ್ಮ ಸಮಸ್ಯೆಯಾಗಿದ್ದು, ಯೂಕ್ರೇನ್​ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ಮುಂದೆ ನಾವು ಒತ್ತಾಯಿಸುವುದಿಲ್ಲ ಎಂದಿದ್ದಾರೆ. ಯೂಕ್ರೇನ್​ ನ್ಯಾಟೋ ಸೇರುವುದನ್ನು ರಷ್ಯಾ ತಿರಸ್ಕರಿಸಿತ್ತು. ಆದರೆ, ಯೂಕ್ರೇನ್​ ಈ ಮೊದಲು ನ್ಯಾಟೋ ಸೇರುವುದಾಗಿ ಪಟ್ಟು ಹಿಡಿದಿದ್ದರಿಂದ ರಷ್ಯಾ ತನ್ನ ನೆರೆಯ ದೇಶ ಯೂಕ್ರೇನ್​ ಮೇಲೆ ಫೆ.24ರಂದು ಯುದ್ಧ ಘೋಷಣೆ ಮಾಡಿದೆ.

    ಇನ್ನು ರಷ್ಯಾವನ್ನು ಸಮಾಧಾನಪಡಿಸುವ ಮತ್ತೊಂದು ಗುರಿ ಹೊಂದಿರುವ ಝೆಲೆನ್​ಸ್ಕಿ, ಆಕ್ರಮಣವನ್ನು ಸಡಿಲಿಸುವ ಮೊದಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಯುದ್ಧಕ್ಕೂ ಮುನ್ನ ಸ್ವತಂತ್ರವೆಂದು ಘೋಷಿಸಿದ ಯೂಕ್ರೇನ್​ನ ಎರಡು ಪ್ರದೇಶಗಳ ಸ್ಥಿತಿಯ ಬಗ್ಗೆ “ರಾಜಿ” ಮಾಡಿಕೊಳ್ಳಲು ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ.

    ಯೂಕ್ರೇನ್​ ಅನ್ನು ಸ್ವೀಕರಿಸಲು ನ್ಯಾಟೋ ಸಿದ್ಧವಾಗಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗಲೇ ಬಹಳ ಸಮಯದಿಂದ ನಾನು ತಣ್ಣಗಾಗಿದ್ದೇನೆ. ಒಕ್ಕೂಟವು ವಿವಾದಾತ್ಮಕ ವಿಷಯಗಳಿಗೆ ಮತ್ತು ರಷ್ಯಾದೊಂದಿಗೆ ಮುಖಾಮುಖಿಯಾಗಲು ಹೆದರುತ್ತದೆ ಎಂದು ಝೆಲೆನ್​​ಸ್ಕಿ ತಿಳಿಸಿದರು.

    ಇದೇ ಸಂದರ್ಭದಲ್ಲಿ ನ್ಯಾಟೋ ಸದಸ್ಯತ್ವದ ಬಗ್ಗೆ ಮಾತನಾಡಿದ ಝೆಲೆನ್​ಸ್ಕಿ, “ಮಂಡಿಯೂರಿ ಏನನ್ನಾದರೂ ಬೇಡಿಕೊಳ್ಳುವ ದೇಶದ” ಅಧ್ಯಕ್ಷರಾಗಲು ನಾನು ಬಯಸುವುದಿಲ್ಲ ಎಂದು ಹೇಳಿದರು.

    ಸೋವಿಯತ್ ಒಕ್ಕೂಟದಿಂದ ಯುರೋಪ್ ಅನ್ನು ರಕ್ಷಿಸಲು ಶೀತಲ ಸಮರದ ಪ್ರಾರಂಭದಲ್ಲಿ ರಚಿಸಲಾದ ಅಟ್ಲಾಂಟಿಕ್ ಒಕ್ಕೂಟವಾದ ನ್ಯಾಟೋಗೆ ನೆರೆಯ ಯೂಕ್ರೇನ್​ ಸೇರಲು ಬಯಸುವುದಿಲ್ಲ ಎಂದು ರಷ್ಯಾ ಈ ಹಿಂದಿನಿಂದಲೂ ಹೇಳಿದೆ. ಇದೀಗ ಝಲೆನ್​ಸ್ಕಿ ನ್ಯಾಟೋ ಸೇರುವುದಿಲ್ಲ ಎಂದು ಹೇಳುವುದರಿಂದ ಯುದ್ಧ ನಿಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಯೂಕ್ರೇನ್​ ಮೇಲೆ ಹಾರಾಟ ನಿಷಿದ್ಧ ವಲಯವನ್ನು ಸ್ಥಾಪಿಸಬೇಕೆಂಬ ಮನವಿಯನ್ನು ನ್ಯಾಟೋ ತಿರಸ್ಕರಿಸಿದ್ದಕ್ಕೆ ಈ ಹಿಂದೆಯು ನ್ಯಾಟೋ ವಿರುದ್ಧ ಹರಿಹಾಯ್ದಿದ್ದ ಝೆಲೆನ್​​​ಸ್ಕಿ ಆಕ್ರೋಶ ಹೊರಹಾಕಿದ್ದರು. ಇಂದು ನ್ಯಾಟೋ ಶೃಂಗಸಭೆ ಇತ್ತು. ಅದೊಂದು ದುರ್ಬಲ ಸಭೆ, ಗೊಂದಲಮಯ ಸಭೆ ಮತ್ತು ಯುರೋಪಿನ ಸ್ವಾತಂತ್ರ್ಯದ ಹೋರಾಟವನ್ನು ಮೊದಲ ಗುರಿ ಎಂದು ಎಲ್ಲರೂ ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟವಾದ ಶೃಂಗಸಭೆಯಾಗಿತ್ತು ಎಂದು ಝೆಲೆನ್ಸ್ಕಿ ಅಸಮಾಧಾನ ಹೊರಹಾಕಿದ್ದರು.

    ಯೂಕ್ರೇನ್​ ಮೇಲಿನ ಹಾರಾಟ ನಿಷಿದ್ಧ ವಲಯ ಸ್ಥಾಪಿಸಬೇಕೆಂಬ ನಮ್ಮ ಮನವಿಯನ್ನು ತಿರಸ್ಕರಿಸುವ ಮೂಲಕ ಯೂಕ್ರೇನ್​ನ ನಗರಗಳು ಮತ್ತು ಗ್ರಾಮಗಳ ಮೇಲೆ ರಷ್ಯಾ ಮತ್ತಷ್ಟು ಬಾಂಬ್​ ಸ್ಫೋಟ ಮಾಡಲು ನ್ಯಾಟೋ ಮೈತ್ರಿಕೂಟದ ನಾಯಕರು ಹಸಿರು ನಿಶಾನೆ ತೋರಿದ್ದಾರೆ. ಇದಕ್ಕೂ ಮೊದಲು ಫೆ. 24 ರಂದು ರಷ್ಯಾ ಭೂಮಿ, ಸಮುದ್ರ ಮತ್ತು ವಾಯುಮಾರ್ಗದ ಮೂಲಕ ದೇಶವನ್ನು ಆಕ್ರಮಿಸಿದ ನಂತರ ಝೆಲೆನ್ಸ್ಕಿ ಅವರು ಯೂಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ಸ್ಥಾಪಿಸಲು ನ್ಯಾಟೋಗೆ ಮನವಿ ಮಾಡಿದ್ದರು. ಆದರೆ, ಅಮೆರಿಕ ನೇತೃತ್ವದ ನ್ಯಾಟೋ ಮೈತ್ರಿಕೂಟ ಯೂಕ್ರೇನ್​ ಮನವಿಯನ್ನು ತಿರಸ್ಕರಿಸಿತು. (ಏಜೆನ್ಸೀಸ್​)

    2017ರ ಲೈಂಗಿಕ ದೌರ್ಜನ್ಯ ಕೇಸ್​: ಮೊದಲ ಬಾರಿ ಮಾಧ್ಯಮದೆದುರು ಕರಾಳ ಘಟನೆಯ ಬಗ್ಗೆ ನಟಿ ಭಾವನಾ ಮಾತು

    ಕಾಂಡೋಮ್​ ಟೆಸ್ಟರ್​ ಪಾತ್ರದ ಬಗ್ಗೆ ಪಾಲಕರ ಪ್ರತಿಕ್ರಿಯೆ ಹೇಗಿತ್ತು? ರಾಕುಲ್​ ಹೇಳಿದ ಅಚ್ಚರಿಯ ಮಾತುಗಳಿವು..

    ಕಸ ಸಂಗ್ರಹಣಾ ಆಟೋಗೆ ಚಂದನಾ ಡ್ರೈವರ್​! ಗಂಡ-ಅತ್ತೆಯ ಸಹಕಾರ, ಆತ್ಮಬಲವೇ ಈಕೆಗೆ ಶ್ರೀರಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts