More

    ‘ಇತರೆ ರೂಪಾಂತರಿ ವೈರಸ್​ಗಿಂತ ಒಮಿಕ್ರಾನ್​ ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ’

    ಸಿಂಗಾಪುರ್​: ಕರೊನಾ ವೈರಸ್​ ರೂಪಾಂತರಿ “ಒಮಿಕ್ರಾನ್”ನ ಇತರೆ ರೂಪಾಂತರಿ ವೈರಸ್​ಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಇದುವರೆಗೂ ಯಾವುದೇ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ ಎಂದು ಸಿಂಗಾಪುರ್​ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್ಲದೆ, ಲಸಿಕೆಗಳು ಕೂಡ ಹೊಸ ವೈರಸ್​ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

    ಸಿಂಗಾಪುರ್​ ಆರೋಗ್ಯ ಸಚಿವಾಲಯದ ಹೇಳಿಕೆಯನ್ನು ನ್ಯೂಸ್​ ಏಷಿಯಾ ವರದಿ ಮಾಡಿದ್ದು, ಸಿಂಗಾಪುರ್​ ಮೂಲಕ ಮಲೇಷಿಯಾ ಮತ್ತು ಆಸ್ಟ್ರೇಲಿಯಾಗೆ ಪ್ರವಾಸ ಮಾಡಿದ ಎರಡಕ್ಕಿಂತ ಹೆಚ್ಚು ಪ್ರಯಾಣಿಕರಲ್ಲಿ ಒಮಿಕ್ರಾನ್​ ವೈರಸ್​ ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಕರಣಗಳು ವರದಿಯಾಗಲಿದ್ದು, ಒಮಿಕ್ರಾನ್​ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಿಂಗಾಪುರ್​ ಆರೋಗ್ಯ ಸಚಿವಾಲಯ ತಿಳಿಸಿದೆ.

    ಒಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಹೆಚ್ಚು ಹರಡುತ್ತದೆ ಮತ್ತು ಕಾಲಾನಂತರದಲ್ಲಿ ಜಾಗತಿಕವಾಗಿ ಪ್ರಬಲವಾದ ರೂಪಾಂತರವಾಗಬೇಕಾದರೆ, ಅದು ಸಿಂಗಾಪುರದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಮೊದಲು ಸಮಯ ಹಿಡಿಯುತ್ತದೆ. ಆದರೆ, ಹೆಚ್ಚುವರಿ ಕ್ರಮಗಳೊಂದಿಗೆ ಒಮಿಕ್ರಾನ್​​ನೊಂದಿಗೆ ವ್ಯವಹರಿಸುವುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಮಯವಿದೆ. ಈ ಹೊಸ ರೂಪಾಂತರದ ವಿರುದ್ಧ ಉತ್ತಮ ರಕ್ಷಣೆಗಾಗಿ ನಮ್ಮ ಸಾಮೂಹಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ನಮ್ಮ ಬೂಸ್ಟರ್ ಪ್ರೋಗ್ರಾಂ ಅನ್ನು ಮುಂದುವರಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

    ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ಮೂಲಕ ಒಮಿಕ್ರಾನ್ ಸೋಂಕು ಹರಡಿದ್ದು, ಮೊದಲ ಪ್ರಕರಣವು ನವೆಂಬರ್ 27 ರಂದು ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಸಿಂಗಾಪುರ್ ಏರ್‌ಲೈನ್ಸ್ ವಿಮಾನದ ಮೂಲಕ ಸಿಂಗಾಪುರ್​ಗೆ ಆಗಮಿಸಿದ ಪ್ರಯಾಣಿಕನಿಂದ ಸೋಂಕು ಕಾಣಿಸಿಕೊಂಡಿದೆ. ನಂತರ ಪ್ರಯಾಣಿಕ ನವೆಂಬರ್ 28 ರಂದು ಆಗಮಿಸಿದ ಮತ್ತೊಂದು ಸಿಂಗಾಪುರ್ ಏರ್‌ಲೈನ್ಸ್ ವಿಮಾನದಲ್ಲಿ ಸಿಡ್ನಿಗೆ ಪ್ರಯಾಣ ಬೆಳೆಸಿದ್ದಾರೆ. ಇದರ ಬೆನ್ನಿಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಆರೋಗ್ಯ ಸಚಿವಾಲಯ ಶುಕ್ರವಾರ ಮೊದಲ ಪಾಸಿಟಿವ್​ ಪ್ರಕರಣವನ್ನು ದೃಢಪಡಿಸಿದೆ.

    ಸಿಂಗಾಪುರದಲ್ಲಿ ಶುಕ್ರವಾರ 766 ಹೊಸ ಕೋವಿಡ್​ ಪ್ರಕರಣಗಳು ಮತ್ತು ಒಂಬತ್ತು ಸಾವುಗಳು ಕರೋನವೈರಸ್‌ನಿಂದ ಸಂಭವಿಸಿವೆ. (ಏಜೆನ್ಸೀಸ್​)

    ಮಟನ್​ ಅಥವಾ ನಾನು… ಮಾಂಸಾಹಾರಿ ಪತ್ನಿಗೆ ಆಯ್ಕೆ ನೀಡಿ ಪೇಚಿಗೆ ಸಿಲುಕಿದ ಸಸ್ಯಹಾರಿ ಗಂಡ!

    ಗ್ಯಾಸ್ ಟ್ಯಾಂಕರ್ ಡಿಕ್ಕಿ: ಈರುಳ್ಳಿ ಲಾರಿಗೆ ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ

    ಸವಾರಿಗೆ ರೈಡರ್ ರೆಡಿ: ಕ್ರಿಸ್​ಮಸ್​ಗೆ ನಿಖಿಲ್​ ಕುಮಾರಸ್ವಾಮಿ ಸಿನಿಮಾ ಬಿಡುಗಡೆ..

    40 ವರ್ಷದವರಿಗೆ ಬೂಸ್ಟರ್ ಸಲಹೆ: ದೆಹಲಿಯಲ್ಲಿ 12 ಒಮಿಕ್ರಾನ್ ಶಂಕಿತರು ಆಸ್ಪತ್ರೆಗೆ, ಆಫ್ರಿಕಾಕ್ಕೆ ಡಬ್ಲ್ಯುಎಚ್​ಒ ತಂಡ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts