More

    ಥಾಯ್ಲೆಂಡ್​ ವಿಮಾನದಲ್ಲಾದ ಅತ್ಯಂತ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ ಮಲಯಾಳಿ ಬ್ಯೂಟಿ ನಜ್ರಿಯಾ!

    ಕೊಚ್ಚಿ: ಮಲಯಾಳಿ ಬ್ಯೂಟಿ ನಜ್ರಿಯಾ ನಜೀಮ್​, ಸಿನಿಮಾಗಳಲ್ಲಿ ಸಾಕಷ್ಟು ಬಿಜಿಯಾಗಿದ್ದರೂ ಆಗಾಗ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ಮರೆಯುವುದಿಲ್ಲ. ಇದೀಗ ತಮ್ಮ ಕೆಟ್ಟ ಅನುಭವವೊಂದನ್ನು ಬಹಿರಂಗಪಡಿಸಿದ್ದಾರೆ.

    ವಿಮಾನದಲ್ಲಿ ತಮ್ಮ ಬ್ಯಾಗ್​ ಅನ್ನು ಕಳೆದುಕೊಂಡ ಬಳಿಕ ವಿಮಾನ ಕಂಪನಿಗೆ ದೂರು ನೀಡಿದಾಗ ಆದ ಕೆಟ್ಟ ಅನುಭವದ ಬಗ್ಗೆ ನಜ್ರಿಯಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

    ಥಾಯ್ಲೆಂಡ್​ ಏರ್​ವೇಸ್​​ ಅತ್ಯಂತ ಕೆಟ್ಟ ಏರ್​ವೇಸ್​ ಕಂಪನಿ. ಇಂತಹ ಕಟ್ಟ ಅನುಭವವನ್ನು ನಾನು ಯಾವುದೇ ಏರ್​ಲೈನ್​ ಮತ್ತು ಸಿಬ್ಬಂದಿ ಬಳಿ ಅನುಭವಿಸಿರಲಿಲ್ಲ. ವಿಮಾನದಲ್ಲಿ ನನ್ನ ಬ್ಯಾಗ್​ ಕಳೆದುಕೊಂಡೆ. ಅದನ್ನು ಮರಳಿ ಪಡೆಯಲು ಥಾಯ್​ ಏರ್​ವೇಸ್​ ಕಂಪನಿಯನ್ನು ಸಂಪರ್ಕಿಸಿದಾಗ ಅವರು ನನ್ನನ್ನು ಕ್ಯಾರೆ ಎನ್ನಲಿಲ್ಲ. ನನ್ನ ಜೀವನದಲ್ಲಿ ಮತ್ತೆಂದೂ ಥಾಯ್​ ಏರ್​ವೇಸ್​ ಅನ್ನು ತೆಗೆದುಕೊಳ್ಳುವುದಿಲ್ಲ ಎಂದು ನಜ್ರಿಯಾ ಅಸಮಾಧಾನ ಹೊರಹಾಕಿದ್ದಾರೆ.

    ಥಾಯ್ಲೆಂಡ್​ ವಿಮಾನದಲ್ಲಾದ ಅತ್ಯಂತ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ ಮಲಯಾಳಿ ಬ್ಯೂಟಿ ನಜ್ರಿಯಾ!

    ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಥಾಯ್​ ಏರ್​ವೇಸ್​ಗೆ ನಜ್ರಿಯಾ ಟ್ಯಾಗ್​ ಮಾಡಿದ್ದು, ಯಾವ ರೀತಿಯಲ್ಲಿ ಅವರು ಪ್ರತಿಕ್ರಿಯಿಸಲಿದ್ದಾರೆ ಎಂದು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

    ಭಾರತ ಸರ್ಕಾರ VLC ಮೀಡಿಯಾ ಪ್ಲೇಯರ್​ ಬ್ಯಾನ್​ ಮಾಡಿದ್ದೇಕೆ? ಈ ಆ್ಯಪ್​ ಹಿಂದಿರುವ ಕರಾಳತೆ ಇದೇನಾ?

    ಕೋಲಾರದಲ್ಲಿ ಬಸ್​ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ: 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಸಾಮಾಜಿಕ ಜಾಲತಾಣ ಕೂ ಮೂಲಕ ಕನಸು ಈಡೇರಿಸಿಕೊಂಡ ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts