More

    ನಿನ್ನೆ ರಾತ್ರಿ ಅದ್ದೂರಿಯಾಗಿ ನಡೆದ ನಂದಿ ಶಿವೋತ್ಸವ: ರಾಜ್ಯಪಾಲರು, ಸಿಎಂ ಭಾಗಿ, ಶಂಖನಾದ ಮೊಳಗಿಸಿದ ಗಣ್ಯರು

    ಚಿಕ್ಕಬಳ್ಳಾಪುರ: ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸಚಿವ ಡಾ ಕೆ.ಸುಧಾಕರ್ ಫೌಂಡೇಷನ್ ಆಯೋಜಿಸಿದ್ದ ಶಿವೋತ್ಸವ ಮಂಗಳವಾರ (ಮಾ.1) ರಾತ್ರಿ ಅದ್ದೂರಿಯಾಗಿ ನಡೆಯಿತು.

    ವಿಶ್ವ ಭ್ರಾತೃತ್ವ, ಸಾಮರಸ್ಯವನ್ನು ಪ್ರತಿಪಾದಿಸುವ ಸನಾತನ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿಯು ದೇಶದ ಯುವ ಜನರ ಮೇಲಿದೆ ಎಂದು ಶಿವೋತ್ಸವಕ್ಕೆ ಚಾಲನೆ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಣ್ಣು ಮುಚ್ಚಿದ ಧ್ಯಾನದಲ್ಲೂ ಇಡೀ ಲೋಕವನ್ನು ಕಾಣುವುದರಲ್ಲಿನ ಜ್ಞಾನಧಾರಿ ಶಿವನ ಇಡೀ ಚರಿತ್ರೆಯು ಸತ್ಯ ಬೋಧನೆಯನ್ನು ಸಾರುತ್ತದೆ. ಇದರಲ್ಲಿ ಪರಸ್ಪರ ಸುಖ ದುಃಖ, ಕತ್ತಲು ಬೆಳಕಿನ ನಾನಾ ಮಾರ್ಗದರ್ಶಿ ತತ್ವಗಳಿವೆ ಎಂದರು. ಭಕ್ತಿಯೇ ನಿಜವಾದ ದೊಡ್ಡ ದೈವಶಕ್ತಿ. ಇದರರ್ಥ ಉತ್ಕ್ಪ್ರ್ಟವಾದ ಪ್ರೀತಿ ಭಕ್ತಿಯನ್ನು ತೋರಿಸುತ್ತದೆ. ಇದಕ್ಕೆ ದೈವನಲ್ಲಿ ಕರಗಿ, ಲೀನವಾಗುವುದು ಭಕ್ತಿಯ ಸಮರ್ಪಣೆಯ ಪ್ರತೀಕ ಎಂದರು.

    ಶಿವೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶಂಖನಾದ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು. ರಾಷ್ಟ್ರಗೀತೆ, ನಾಡಗೀತೆಯ ಬಳಿಕ ಶಿವಸ್ತುತಿ ಮೊಳಗಿತು. ವೇದಿಕೆಯಲ್ಲಿ ಆಗಮಿಕ ಪಂಡಿತರ ವೇದಮಂತ್ರಗಳ ಪಠಣದ ಜತೆಗೆ ಶಿವಲಿಂಗಕ್ಕೆ ಕ್ಷೀರಾಭಿಷೇಕ ಸಲ್ಲಿಸಲಾಯಿತು.

    ನಂದಿಯಲ್ಲಿ ಜನಸಾಗರ: ಪ್ರತಿ ವರ್ಷದಂತೆ ಕರ್ನಾಟಕದ ಕಾಶಿಯಾಗಿರುವ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಗರವೇ ಹರಿದು ಬಂತು. ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾಗರಣೆಯ ಮೂಲಕ ಇಡೀ ರಾತ್ರಿ ಕಳೆದರು.

    ಕಾರ್ಯಕ್ರಮದಲ್ಲಿ ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಸತ್ಯ ಸಾಯಿ ಸಂಸ್ಥೆಯ ಮಧುಸೂದನಸಾಯಿ, ಸಚಿವ ಡಾ ಕೆ.ಸುಧಾಕರ್ ಮತ್ತಿತರರಿದ್ದರು.

    ಇಡೀ ದಿನ ಒಂದೇ ಕೋಣೆಯಲ್ಲಿ ಆತನೊಂದಿಗೆ ಇರಬೇಕಿತ್ತು: ಮಾಜಿ ಪತಿಯ ಕರಾಳ ಮುಖ ಬಿಚ್ಚಿಟ್ಟ ಪೂನಂ ಪಾಂಡೆ

    ಕೀಯೆವ್​ ಭೇಟಿ ನೀಡಿದ ಎರಡೇ ದಿನದಲ್ಲಿ ಕಾಲ್ನಡಿಗೆಯಲ್ಲಿ ಯೂಕ್ರೇನ್​ನಿಂದ ಕಾಲ್ಕಿತ್ತ ಹಾಲಿವುಡ್​ ಸ್ಟಾರ್​ ಸೀನ್​ ಪೆನ್ನ್!​

    ಸರ್ವಾಧಿಕಾರಿ ಪುತಿನ್ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ: ಜೋ ಬೈಡೆನ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts