ಸರ್ವಾಧಿಕಾರಿ ಪುತಿನ್ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ: ಜೋ ಬೈಡೆನ್​ ಎಚ್ಚರಿಕೆ

ವಾಷಿಂಗ್ಟನ್​: ಯೂಕ್ರೇನ್​ ವಿರುದ್ಧ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಓರ್ವ ಸರ್ವಾಧಿಕಾರಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕುಟುಕಿದ್ದಾರೆ. ಮಂಗಳವಾರ ಕಾಂಗ್ರೆಸ್​ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತನ್ನ ಸ್ಟೇಟ್ ಆಫ್ ಯೂನಿಯನ್ ಭಾಷಣ ಮಾಡುವಾಗ ರಷ್ಯಾ ವಿರುದ್ಧ ಬೈಡೆನ್​ ಟೀಕೆಗಳ ಸುರಿಮಳೆಗೈದರು. ರಷ್ಯಾದ ಸರ್ವಾಧಿಕಾರಿ ಬೇರೊಂದು ದೇಶ(ಯೂಕ್ರೇನ್​)ವನ್ನು ಆಕ್ರಮಿಸಿದ್ದು, ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಬೈಡೆನ್​ ಎಚ್ಚರಿಸಿದರು. ಯೂರೋಪ್​ ಅನ್ನು ಇಭ್ಭಾಗ ಮಾಡಬಹುದು ಅಂತಾ ಪುತಿನ್​ … Continue reading ಸರ್ವಾಧಿಕಾರಿ ಪುತಿನ್ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ: ಜೋ ಬೈಡೆನ್​ ಎಚ್ಚರಿಕೆ