More

    ಸರ್ವಾಧಿಕಾರಿ ಪುತಿನ್ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ: ಜೋ ಬೈಡೆನ್​ ಎಚ್ಚರಿಕೆ

    ವಾಷಿಂಗ್ಟನ್​: ಯೂಕ್ರೇನ್​ ವಿರುದ್ಧ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಓರ್ವ ಸರ್ವಾಧಿಕಾರಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕುಟುಕಿದ್ದಾರೆ. ಮಂಗಳವಾರ ಕಾಂಗ್ರೆಸ್​ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತನ್ನ ಸ್ಟೇಟ್ ಆಫ್ ಯೂನಿಯನ್ ಭಾಷಣ ಮಾಡುವಾಗ ರಷ್ಯಾ ವಿರುದ್ಧ ಬೈಡೆನ್​ ಟೀಕೆಗಳ ಸುರಿಮಳೆಗೈದರು.

    ರಷ್ಯಾದ ಸರ್ವಾಧಿಕಾರಿ ಬೇರೊಂದು ದೇಶ(ಯೂಕ್ರೇನ್​)ವನ್ನು ಆಕ್ರಮಿಸಿದ್ದು, ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಬೈಡೆನ್​ ಎಚ್ಚರಿಸಿದರು. ಯೂರೋಪ್​ ಅನ್ನು ಇಭ್ಭಾಗ ಮಾಡಬಹುದು ಅಂತಾ ಪುತಿನ್​ ಅಂದುಕೊಂಡಿದ್ದಾರೆ, ಆದರೆ ಅದು ತಪ್ಪು ಎಂದು ಹೇಳಿದರು.

    ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ನಡುವಿನ ಯುದ್ಧದಲ್ಲಿ ಪ್ರಜಾಪ್ರಭುತ್ವವೂ ಉಯಿಸುತ್ತಿದೆ ಮತ್ತು ಇಡೀ ವಿಶ್ವವು ಶಾಂತಿ ಮತ್ತು ಭದ್ರತೆಯನ್ನು ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

    ಯೂಕ್ರೇನ್​ ಮೇಲೆ ತನ್ನ ಸೇನೆಯನ್ನು ಛೂ ಬಿಟ್ಟ ವ್ಲಾದಿಮಿರ್​ ಪುತಿನ್​ರನ್ನು ಇಡೀ ಜಗತ್ತು ಪ್ರತ್ಯೇಕವಾಗಿ ಇಡುತ್ತಿದೆ. ಅದರ ಮೇಲೆ ಅನೇಕ ರಾಷ್ಟ್ರಗಳು ಹೇರಿರುವ ವಿನಾಶಕಾರಿ ನಿರ್ಬಂಧಗಳು ರಷ್ಯಾದ ಆರ್ಥಿಕ ಬಲವನ್ನು ಕುಸಿಯುವಂತೆ ಮಾಡುತ್ತದೆ ಮತ್ತು ಅದರ ಮಿಲಿಟರಿಯನ್ನು ದುರ್ಬಲಗೊಳಿಸುತ್ತದೆ ಎಂದು ಬೈಡೆನ್​ ಪ್ರತಿಜ್ಞೆ ಮಾಡಿದರು.

    ಪುತಿನ್ ಈಗ ಹಿಂದೆಂದಿಗಿಂತಲೂ ಹೆಚ್ಚು ಜಗತ್ತಿನಿಂದ ಏಕಾಂಗಿಯಾಗಿದ್ದಾರೆ ಎಂದ ಬೈಡೆನ್, ರಷ್ಯಾ ವಿರುದ್ಧ ಆರ್ಥಿಕ ದಂಡಗಳು ಮತ್ತು ಶಿಕ್ಷೆಯ ವಿಷಯದಲ್ಲಿ ಏನು ಬರಲಿದೆ ಎಂಬುದು ತಿಳಿದಿಲ್ಲ ಎಂದು ಬೈಡೆನ್​ ಹೇಳಿದರು. (ಏಜೆನ್ಸೀಸ್​)

    ಯೂಕ್ರೇನ್​ನಲ್ಲಿ ಕನ್ನಡಿಗ ನವೀನ್​ ಸಾವು: ಘಟನೆಯನ್ನು​ ಎಳೆಎಳೆಯಾಗಿ ಬಿಚ್ಚಿಟ್ಟ ನವೀನ್​ ಸ್ನೇಹಿತ ಗೌತಮ್​

    ತೆರಿಗೆ ಒರತೆ, ಕೇಂದ್ರದ ಸಹಾಯಧನ ಕೊರತೆ: ನಿರೀಕ್ಷೆ ಮೀರುವ ಕರ, ಬದ್ಧತಾ ವೆಚ್ಚಗಳ ಭಾರ…

    ಚಂದನವನದಲ್ಲಿ ಇದುವರೆಗೂ ಯಾರು ಮಾಡಿರದ ದಾಖಲೆ ಮಾಡಲು ಮುಂದಾದ ಕಬ್ಜ ಸಿನಿಮಾ ತಂಡ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts