More

    ನನ್​ ತಾಯಿ ಸತ್ತೋಗ್ತಾಳೆ ಆಕ್ಸಿಜನ್​ ಸಿಲಿಂಡರ್​ ಕೊಂಡೊಯ್ಯಬೇಡಿ ಸರ್​! ಕಾಲಿಗೆ ಬಿದ್ರೂ ಕರಗಲಿಲ್ಲ ಪೊಲೀಸರ ಮನಸ್ಸು

    ಲಖನೌ: ಕರೊನಾ ಪ್ರಕರಣಗಳ ಏರಿಕೆಯಿಂದ ದೇಶದಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ. ಈ ಮಧ್ಯೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಖಾಸಗಿ ಆಸ್ಪತ್ರೆಯಿಂದ ಆಕ್ಸಿಜನ್​ ಸಿಲಿಂಡರ್​ ತೆಗೆದುಕೊಂಡು ಹೋಗದಂತೆ ವ್ಯಕ್ತಿಯೊಬ್ಬ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ನನ್ನ ತಾಯಿ ಸತ್ತು ಹೋಗುತ್ತಾಳೆ. ದಯವಿಟ್ಟು ಆಕ್ಸಿಜನ್​ ಸಿಲಿಂಡರ್​ ತೆಗೆದುಕೊಂಡು ಹೋಗಬೇಡಿ. ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇನೆಂದು ಪಿಪಿಇ ಕಿಟ್​ ಧರಿಸಿದ ವ್ಯಕ್ತಿ ಆಗ್ರಾ ಆಸ್ಪತ್ರೆಯ ಮುಂದೆ ಪೊಲೀಸರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋವನ್ನು ಸೋಮವಾರ ಸಂಜೆ ಆಗ್ರಾ ಆಸ್ಪತ್ರೆ ಮುಂದೆ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯ ತಾಯಿ ಕೋವಿಡ್​ನಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಗೆ ಬಂದ ಪೊಲೀಸರು ಸಿಲಿಂಡರ್​ ತೆಗೆದುಕೊಂಡು ಆಂಬ್ಯುಲೆನ್ಸ್​ಗೆ ತುಂಬಿಕೊಂಡು ಹೋಗಿದ್ದಾರೆನ್ನಲಾಗಿದೆ.

    ನನ್ನ ತಾಯಿಯನ್ನು ಮರಳಿ ಕರೆತರುತ್ತೇನೆಂದು ನನ್ನ ಕುಟುಂಬಕ್ಕೆ ಭರವಸೆ ನೀಡಿ ನಾನು ಈ ಆಸ್ಪತ್ರಗೆ ಬಂದಿದ್ದೇನೆ. ಈಗ ನೀವು ಸಿಲಿಂಡರ್​ ತೆಗೆದುಕೊಂಡು ಹೋದರೆ ನಾನು ಎಲ್ಲಿಂದ ಸಿಲಿಂಡರ್​ ವ್ಯವಸ್ಥೆ ಮಾಡಲಿ? ಪ್ಲೀಸ್​ ಸರ್​ ತೆಗೆದುಕೊಂಡು ಹೋಗಬೇಡಿ ಎಂದು ಕಣ್ಣೀರಿಡುತ್ತಾ ಪೊಲೀಸರ ಕಾಲಿಗೆ ಬಿದ್ದ ವ್ಯಕ್ತಿ ಕೇಳಿಕೊಂಡಿದ್ದಾನೆ,

    ಎಷ್ಟೇ ಬೇಡಿಕೊಂಡರು ಪೊಲೀಸರ ಮನಸ್ಸು ಮಾತ್ರ ಕರಗಲೇ ಇಲ್ಲ. ಸಿಲಿಂಡರ್​ ತುಂಬಿಕೊಂಡು ಹೊರಟೇ ಹೋದರು. ಇನ್ನು ತಮ್ಮ ಮೇಲಿನ ಆಪಾದನೆಯನ್ನು ಆಗ್ರಾ ಪೊಲೀಸರು ತಳ್ಳಿಹಾಕಿದ್ದಾರೆ. ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಖಾಲಿ ಸಿಲಿಂಡರ್​ ಎಂದು ಆಗ್ರಾ ಎಸ್​ಪಿ ಸ್ಪಷ್ಟನೆ ನೀಡಿದ್ದಾರೆ. ಆದರೂ, ಜಾಲತಾಣದಲ್ಲಿ ಪೊಲೀಸರ ವರ್ತನೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

    ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ

    4000 ಮಹಿಳೆಯರ ಜತೆ​ ಸೆಕ್ಸ್​, 77ನೇ ವಯಸ್ಸಲ್ಲಿ ಮರು ಮದ್ವೆ: ಸುಂದರಿಯಿಂದಲೇ ಆಗರ್ಭ ಶ್ರೀಮಂತನ ದುರಂತ ಅಂತ್ಯ!

    ಧೈರ್ಯಂ ಸರ್ವತ್ರ ಸಾಧನಂ… ಕರೊನಾದ ಸಾವಿನ ಬಾಯಿಗೆ ಹೋಗಿ ಜಯಿಸಿ ಬಂದ ಶತಾಯುಷಿ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts