More

    ಟಿಮ್​ ಡೇವಿಡ್​ ವಿರುದ್ಧ ಡಿಆರ್​ಎಸ್ ಮನವಿ ಮಾಡದಿದ್ದಕ್ಕೆ ಕಾರಣ ಬಿಚ್ಚಿಟ್ಟ ರಿಷಬ್​ ಪಂತ್!

    ನವದೆಹಲಿ: ಐಪಿಎಲ್​ ಟೂರ್ನಿಯ ಮಹತ್ವದ ಘಟ್ಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮುಂಬೈ ಇಂಡಿಯನ್ಸ್​ ಎದುರು ಸೋಲಿಗೆ ಶರಣಾಯಿತು. ಇದರ ಲಾಭವನ್ನು ಪಡೆದ ರಾಯಲ್​ ಚಾಲೆಂಜರ್ಸ್ ಬೆಂಗಳೂರು​ ತಂಡ ಪ್ಲೇ ಆಫ್​ ಹಂತಕ್ಕೇರಿದೆ. ತಾನೇ ಮಾಡಿಕೊಂಡ ಎಡವಟ್ಟುಗಳಿಂದ ಡೆಲ್ಲಿ ತಂಡ ಪಂದ್ಯವನ್ನು ಕೈಚೆಲ್ಲಿದೆ ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಸ್ಫೋಟಕ ಆಟಗಾರ ಟಿಮ್ ಡೇವಿಡ್ ಔಟಾಗಿದ್ದ ಸಂದರ್ಭದಲ್ಲಿ ಡೆಲ್ಲಿ ನಾಯಕ ರಿಷಬ್​ ಪಂತ್​ ಡಿಆರ್​ಎಸ್​ ಮನವಿ ಮಾಡದೇ ಇದ್ದದ್ದು ಸೋಲಿಗೆ ಪ್ರಮುಖ ಕಾರಣವಾಯಿತು ಎನ್ನಲಾಗುತ್ತಿದೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ವೇಗಿ ಜಸ್‌ಪ್ರೀತ್ ಬುಮ್ರಾ (25ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಡುವೆಯೂ 7 ವಿಕೆಟ್‌ಗೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್ ಗಳಿಸಿ ಡೆಲ್ಲಿ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು.

    ಪ್ಲೇಆಫ್​ ಹಂತಕ್ಕೇರಲು ಡೆಲ್ಲಿ ತಂಡಕ್ಕೆ ಒಳ್ಳೆಯ ಅವಕಾಶ ಇತ್ತು. ಆದರೆ, ದುರಾದೃಷ್ಟವಶಾತ್​ ಅವಕಾಶವನ್ನು ಮುಂಬೈ ಇಂಡಿಯನ್ಸ್​ ಕಸಿದುಕೊಂಡರು. ಇತ್ತ ಮುಂಬೈ ಗೆಲುವಿಗೆ ಪ್ರಾರ್ಥಿಸುತ್ತಿದ್ದ ಆರ್​ಸಿಬಿ ತಂಡಕ್ಕೆ ಕೊನೆಗೂ ಗುಡ್​ ನ್ಯೂಸ್​ ಸಿಕ್ಕಿತು. ಡೆಲ್ಲಿ ಸೋಲಿನಿಂದ ಪ್ಲೇಆಫ್​ ಹಂತಕ್ಕೇರಿರುವ ಆರ್​ಸಿಬಿ ಮೇ 25ರಂದು ಎಲಿಮಿನೇಟರ್​ ಪಂದ್ಯದಲ್ಲಿ ಲಖನೌ ಸೂಪರ್​ ಜೇಂಟ್ಸ್​ ತಂಡವನ್ನು ಎದುರಿಸಲಿದೆ.

    ಟಿಮ್​ ಡೇವಿಡ್​ ಕೀಪರ್​ ಕ್ಯಾಚ್​ ಆಗಿದ್ದ ಸಂದರ್ಭದಲ್ಲಿ ಡಿಆರ್​ಎಸ್​ ಯಾಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಪಂದ್ಯದ ಬಳಿಕ ಉತ್ತರ ನೀಡಿದ ರಿಷಬ್​ ಪಂತ್,​ ಏನೋ ನಡೆದಿದೆ ಅಂತಾ ನಾನು ಕೂಡ ಭಾವಿಸಿದೆ. ಆದರೆ, ನನ್ನ ಸುತ್ತಲೂ ನಿಂತಿದ್ದ ಯಾರಿಗೂ ಅದರ ಬಗ್ಗೆ ಮನವರಿಕೆಯಾಗಲಿಲ್ಲ. ಹೀಗಾಗಿ ನಾನು ಡಿಆರ್​ಎಸ್​ ಮೊರೆ ಹೋಗಲಿಲ್ಲ ಎಂದು ಹೇಳಿದ್ದಾರೆ.

    ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಪಂತ್​, ಬಹುತೇಕ ನಾವು ಅಗ್ರಸ್ಥಾನದಲ್ಲಿದ್ದೆವು. ಕೆಲವು ಸಂದರ್ಭಗಳಲ್ಲಿ ನಾವು ಮೇಲಿರುವಾಗ ಆಟವನ್ನು ನಮ್ಮ ಹಿಡಿತದಿಂದ ದೂರ ಸರಿಯಲು ನಮಗೆ ಗೊತ್ತಿಲ್ಲದಂತೆ ಬಿಟ್ಟು ಬಿಡುತ್ತೇವೆ. ಈ ಋತುವಿನ ಉದ್ದಕ್ಕೂ ನಾವು ಮಾಡಿದ್ದು ಅದನ್ನೇ. ಈ ಪಂದ್ಯವನ್ನು ಗೆಲ್ಲುವಷ್ಟು ನಾವು ಉತ್ತಮವಾಗಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.

    ಇಲ್ಲಿ ಒತ್ತಡ ಅಂತಾ ಏನಿಲ್ಲ. ನಾವು ಉತ್ತಮ ಕಾರ್ಯನಿರ್ವಹಣೆ ಮತ್ತು ಯೋಜನೆಯನ್ನು ಮಾಡಬಹುದಿತ್ತು. ಆದರೆ, ಅದನ್ನು ಮಾಡಲಿಲ್ಲ. ನಮ್ಮ ತಪ್ಪುಗಳಿಂದ ಕಲಿತು, ಮುಂದಿನ ವರ್ಷ ಬಲಶಾಲಿಯಾಗಿ ಹಿಂತಿರುಗುತ್ತೇವೆ ಎಂದು ಹೇಳಿದರು. (ಏಜೆನ್ಸೀಸ್​)

    ಆರ್‌ಸಿಬಿಗೆ ಪ್ಲೇಆಫ್​ ಲಕ್; ಡೆಲ್ಲಿ ತಂಡವನ್ನು ಹೊರದಬ್ಬಿದ ಮುಂಬೈ ಇಂಡಿಯನ್ಸ್

    ನಟ ಅಲ್ಲು ಅರ್ಜುನ್​ ವರದಕ್ಷಿಣೆ ತೆಗೆದುಕೊಂಡಿದ್ದಾರಾ? ಅಚ್ಚರಿಯ ಹೇಳಿಕೆ ನೀಡಿದ ಪತ್ನಿ ಸ್ನೇಹಾ ರೆಡ್ಡಿ ತಂದೆ

    ಗರುಡನ ಹಾರಾಟ ಮತ್ತು ಹೋರಾಟ: ಗರುಡ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts