More

    ಮ್ಯಾಕ್ಸಿಗೆ ಕೂಡಿಬಂತು ಕಂಕಣ ಭಾಗ್ಯ: ಭಾರತೀಯ ಮೂಲದ ಗರ್ಲ್​ಫ್ರೆಂಡ್​ ಜತೆ ಮದುವೆ ದಿನಾಂಕ ಫಿಕ್ಸ್​!

    ನವದೆಹಲಿ:​ ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಅವರು ಭಾರತೀಯ ಮೂಲದ ಗರ್ಲ್​ಫ್ರೆಂಡ್​ ವಿನಿ ರಾಮನ್​ರೊಂದಿಗೆ ಎಂಗೇಜ್​ಮೆಂಟ್​ ಮಾಡಿಕೊಂಡು ಎರಡು ವರ್ಷಗಳೇ ಕಳೆದಿವೆ. ಆದರೆ, ಇಬ್ಬರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ.

    ಹೌದು, ಮ್ಯಾಕ್ಸಿ ಮತ್ತು ವಿನಿ ರಾಮನ್​ ಮದುವೆ ಆಗುವ ಕಾಲ ಸನ್ನಿಹಿತವಾಗಿದೆ. ಇಬ್ಬರು ಮುಂದಿನ ಮಾರ್ಚ್​ 17ರಂದು ಭಾರತೀಯ ಸಂಪ್ರದಾಯಂತೆ ಮದುವೆ ಆಗಲಿದ್ದಾರೆ. ಇಬ್ಬರ ಮದುವೆ ನಿಶ್ವಯವಾಗಿರುವ ಕುರಿತು ತಮಿಳು ಭಾಷೆಯಲ್ಲಿ ಮುದ್ರಿತವಾಗಿರುವ ವೆಡ್ಡಿಂಗ್​ ಕಾರ್ಡ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವೈರಲ್​ ಆಗಿರುವ ವೆಡ್ಡಿಂಗ್​ ಕಾರ್ಡ್​ ಫೋಟೋವನ್ನು ನಟಿ ಕಸ್ತೂರಿ ಶಂಕರ್​ ಶೇರ್​ ಮಾಡಿಕೊಂಡಿದ್ದು, ತಮಿಳು ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ಬರೆದುಕೊಂಡಿದ್ದು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    2017ರಿಂದಲೂ ಡೇಟಿಂಗ್​ ನಡೆಸುತ್ತಿದ್ದ ಜೋಡಿ 2020ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಮ್ಮ ಭಾವಿ ಪತ್ನಿಯೊಂದಿಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಫೋಟೋವನ್ನು ಮ್ಯಾಕ್ಸ್​ವೆಲ್ ಇನ್​ಸ್ಟಾಗ್ರಾಂನಲ್ಲಿ ರಿಂಗ್​ ಎಮೋಜಿಯೊಂದಿಗೆ ಪೋಸ್ಟ್​ ಮಾಡಿಕೊಂಡಿದ್ದರು. ಫೋಟೋದಲ್ಲಿ ವಿನಿ ರಾಮನ್​ ಮ್ಯಾಕ್ಸ್​ವೆಲ್​ ತೊಡಿಸಿರುವ ರಿಂಗ್​ ಅನ್ನು ಪ್ರದರ್ಶಿಸಿದ್ದರು. ಇದಾದ ಬಳಿಕ ಇಬ್ಬರ ನಿಶ್ಚಿತಾರ್ಥ ಸುದ್ದಿ ಹರಿದಾಡಿತ್ತು. ನಂತರ 2020ರ ಮಾರ್ಚ್​ ತಿಂಗಳಲ್ಲಿ ಮೆಲ್ಬೋರ್ನ್​ನ ಉಪನಗರ ತೋರಕ್​ನಲ್ಲಿ ಮ್ಯಾಕ್ಸಿ ಮತ್ತು ವಿನಿ ನಿಶ್ಚಿತಾರ್ಥ ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು.

    ಅಂದಿನಿಂದ ಮದುವೆ ಯಾವಾಗ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು. ಇದೀಗ ಅದಕ್ಕೆ ಉತ್ತರ ಸಿಗುವ ಕಾಲ ಬಂದಿದೆ. ಮುಂದಿನ ಮಾರ್ಚ್​ ತಿಂಗಳಲ್ಲಿ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ.

    ಅಂದಹಾಗೆ ವಿನಿ ರಾಮನ್​ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್​ ಸೈನ್ಸ್​ ವಿಭಾಗದಲ್ಲಿ ಮೆಂಟನ್​​ ಗರ್ಲ್ಸ್​ ಸೆಕೆಂಡರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಮೆಲ್ಬೋರ್ನ್​ನಲ್ಲಿ ಫಾರ್ಮಸಿಸ್ಟ್​ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ವಿನಿ ರಾಮನ್​ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದು, ವಿನಿ ಅಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.

    ಇನ್ನು ಮ್ಯಾಕ್ಸ್​ವೆಲ್​ 2021ರ ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದು, ಈ ಬಾರಿಯು ಅವರನ್ನು ಆರ್​ಸಿಬಿ ಉಳಿಸಿಕೊಂಡಿದೆ. ಕಳೆದ ಬಾರಿ ಆರ್​ಸಿಬಿ ತಂಡದಲ್ಲಿ ಮ್ಯಾಕ್ಸಿ ಉತ್ತ ಪ್ರದರ್ಶನ ನೀಡಿದ್ದರು. (ಏಜೆನ್ಸೀಸ್​)

    View this post on Instagram

    A post shared by VINI (@vini.raman)

    PHOTOS| ಭಾರತೀಯ ಸಂಪ್ರದಾಯದಂತೆ ವಿನಿ-ಮ್ಯಾಕ್ಸಿ ನಿಶ್ಚಿತಾರ್ಥ: ದೇಶಿ ಉಡುಗೆಯಲ್ಲಿ ಭಾವಿ ಪತ್ನಿ ಜತೆ ಮ್ಯಾಕ್ಸಿ ಮಿಂಚಿಂಗ್​!

    ಭಾರತೀಯ ಮೂಲದ ಗರ್ಲ್​ಫ್ರೆಂಡ್​ನೊಂದಿಗೆ ಆಸಿಸ್​ ಆಲ್​ರೌಂಡರ್​ ಮ್ಯಾಕ್ಸಿ ಎಂಗೇಜ್ಡ್! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts