More

    ಕಾವೇರಿ ನದಿ ನಡುಗಡ್ಡೆಯಲ್ಲಿರುವ ಸರ್ವಧರ್ಮ ಆಶ್ರಮದ ತಾತ್ಕಾಲಿಕ ಸೇತುವೆ ಮುಳುಗಡೆ: ಭಕ್ತರು ಸೇರಿ 15 ಮಂದಿ ಸುರಕ್ಷಿತ

    ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕಾವೇರಿ ನದಿ ಪಾತ್ರಕ್ಕೆ ಸತತವಾಗಿ 86 ಸಾವಿರ ಕ್ಯುಸೆಕ್ ನೀರು ಹರಿಯುತ್ತಿರುವ ಕಾರಣ ಬೆಳಗೊಳ ಗ್ರಾಮದ ಬಳಿಯ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಸರ್ವಧರ್ಮ ಆಶ್ರಮದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

    ಕಾವೇರಿ ನದಿ ನಡುಗಡ್ಡೆಯಲ್ಲಿರುವ ಸರ್ವಧರ್ಮ ಆಶ್ರಮದ ತಾತ್ಕಾಲಿಕ ಸೇತುವೆ ಮುಳುಗಡೆ: ಭಕ್ತರು ಸೇರಿ 15 ಮಂದಿ ಸುರಕ್ಷಿತ

    ನದಿ ಪಾತ್ರಕ್ಕೆ ಹೆಚ್ಚಿನ ನೀರು ಬಿಡುಗಡೆ ಕುರಿತು ಕಾವೇರಿ ನೀರಾವರಿ ನಿಗಮ ಮತ್ತು ಕೆ.ಆರ್.ಸಾಗರ ಪೊಲೀಸರು ಖುದ್ದು ಮಾಹಿತಿ ನೀಡಿದ್ದರು, ಟ್ರಸ್ಟಿ, ಕೆಲಸಗಾರು, ಆಂಧ್ರ ಮೂಲದ ನಾಲ್ವರು ಭಕ್ತರು ಸೇರಿ ಸುಮಾರು 15 ಜನ, ಸುತ್ತಲೂ ನೀರು ಆವರಿಸಿರುವ ಸರ್ವಧರ್ಮ ಆಶ್ರಮದ ನಡುಗೆಡ್ಡೆಯಲ್ಲಿ ಕಳೆದ ಐದಾರು ದಿನಗಳಿಂದ ವಾಸವಾಗಿದ್ದಾರೆ. 13 ರಂದು ಗುರುಪೂರ್ಣಿಮೆ ಉತ್ಸವ ನಡೆಯಬೇಕಾಗಿತ್ತು, ಹೆಚ್ಚಿನ ಹೊರ ಹರಿವು ಕಾರಣ ಕಾರ್ಯಕ್ರಮ ರದ್ದಾಗಿದೆ.

    ಎರಡು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ ನಮ್ಮಲ್ಲಿ ಇದೆ. ನಮ್ಮ ಆರೋಗ್ಯ ಚೆನ್ನಾಗಿದೆ. ಏನೂ ಕೊರತೆ ಉಂಟಾಗಿಲ್ಲ. ನಾವು ಒಟ್ಟು 15 ಜನರು ಆಶ್ರಮದಲ್ಲಿದ್ದೇವೆ. ಇಲ್ಲಿನ ಭಗವಂತನ ಸೇವೆ ಮತ್ತು ತೋಟದ ಕೆಲಸ ಮಾಡಿಕೊಂಡು ಎಲ್ಲರೂ ಚೆನ್ನಾಗಿದ್ದೇವೆ. ಈ ಹಿಂದೆ ಕೂಡ 1991 ರಲ್ಲಿಯೂ ಹೆಚ್ಚಿನ ನೀರು ಬಿಡುಗಡೆ ಆದಗಲೂ ನಾವು ಇಲ್ಲಿಯೇ ಇದ್ದೇವು ಎಂದು ಸರ್ವಧರ್ಮ ಆಶ್ರಮದ ಟ್ರಸ್ಟಿ ಹಾಗೂ ವ್ಯವಸ್ಥಾಪಕ ಕೇಶವ ರಾಯಡು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    ಕಾವೇರಿ ನದಿ ನಡುಗಡ್ಡೆಯಲ್ಲಿರುವ ಸರ್ವಧರ್ಮ ಆಶ್ರಮದ ತಾತ್ಕಾಲಿಕ ಸೇತುವೆ ಮುಳುಗಡೆ: ಭಕ್ತರು ಸೇರಿ 15 ಮಂದಿ ಸುರಕ್ಷಿತ

    ಕಾವೇರಿ ನದಿಯಲ್ಲಿ ಹೆಚ್ಚಿನ ಹೊರಹರಿವು ಕುರಿತು ತಾಲೂಕು ಆಡಳಿತ ಸರ್ವಧರ್ಮ ಆಶ್ರಮಕ್ಕೆ ಸ್ಥಳೀಯ ಅಧಿಕಾರಿಗಳ ಮೂಲಕ ಮಾಹಿತಿ ನೀಡಿದ್ದೇವೆ. ಅವರು ತಮ್ಮಲ್ಲಿ ದಿನನಿತ್ಯ ಆಹಾರ ಸೇವನೆಗೆ ಆಗತ್ಯ ಸಾಮಗ್ರಿಗಳು ನಮ್ಮಲ್ಲಿ ಇದೇ, ನೀವು ಭಯ ಪಡುವ ಆತಂಕವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ನಮ್ಮ ಆಧಿಕಾರಿಗಳು ಪ್ರತಿ ದಿನ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ತೊಂದರೆಯಿಲ್ಲಿ, ನಾವು ಸಹಕಾರ ನೀಡಲ್ಲೂ ನಮ್ಮ ಜಿಲ್ಲಾಡಳಿತ ಸದಾ ಸಿದ್ದರಿದ್ದೇವೆ ಎಂದು ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ ತಿಳಿಸಿದ್ದಾರೆ.

    ಜನಾಕ್ರೋಶಕ್ಕೆ ಮಣಿದ ಸರ್ಕಾರ: ಸರ್ಕಾರಿ ಕಚೇರಿಗಳಲ್ಲಿ ಫೋಟೋ-ವಿಡಿಯೋ ಶೂಟಿಂಗ್​ ಬ್ಯಾನ್​ ಆದೇಶ ವಾಪಸ್​

    ನಟ ರಾಘವ ಲಾರೆನ್ಸ್​ ತಲೈವಾ​​ ರಜಿನಿಕಾಂತ್​ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು ಇದೇ ಕಾರಣಕ್ಕೆ…

    ಎಲೆಕ್ಷನ್ ದೃಷ್ಟಿ, ವರ್ಚಸ್ಸಿಗೆ ಪುಷ್ಟಿ: ಬಿಜೆಪಿ ಚಿಂತನ ಸಭೆ; ಮಿಷನ್ 150 ಗುರಿ ಸಾಧಿಸುವ ಸಂಕಲ್ಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts