More

    ಹಬ್ಬದ ಕರ್ತವ್ಯದಲ್ಲಿದ್ದ ಮಹಿಳಾ ಎಸ್​ಐಗೆ ಕಾದಿತ್ತು ಬಿಗ್​ ಶಾಕ್​: ಈ ಸಮಯಕ್ಕೆ 1 ತಿಂಗಳು ಕಾದಿದ್ದ ದುಷ್ಟ!

    ಚೆನ್ನೈ: ಕರ್ತವ್ಯ ನಿರತ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಮೇಲೆ ವ್ಯಕ್ತಿಯೊಬ್ಬ ದಾಳಿ ಮಾಡಿರುವ ಆತಂಕಕಾರಿ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಶುಕ್ರವಾರ ರಾತ್ರಿ ಸುಥಮಲ್ಲಿ ಪಕ್ಕದ ಪಹವೂರ್ ಗ್ರಾಮದ ದೇವಸ್ಥಾನದಲ್ಲಿ ಹಬ್ಬ ನಡೆಯುತ್ತಿತ್ತು. ಈ ವೇಳೆ ಎಸ್​ಐ ಮಾರ್ಗರೇಟ್​ ಥೆರೆಸಾ(29) ಕರ್ತವ್ಯದಲ್ಲಿದ್ದರು. ಹಬ್ಬ ಮುಗಿದ ಬಳಿಕ ದೇವಸ್ಥಾನದ ಫ್ಲೆಕ್ಸ್​ ತೆರೆವುಗೊಳಿಸುವಾಗ ಆರುಮುಗಸ್ವಾಮಿ (40) ಎಂಬ ವ್ಯಕ್ತಿ ಮಾರ್ಗರೇಟ್​ ಜತೆ ವಾಗ್ವಾದಕ್ಕೆ ಇಳಿದಿದ್ದ. ಮಾತಿನ ಚಕಮಕಿ ನಡೆಯುವಾಗಲೇ ಚಾಕು ತೆಗೆದು ಮಾರ್ಗರೇಟ್​ ಮುಖ ಮತ್ತು ಕುತ್ತಿಗೆಗೆ ದಾಳಿ ಮಾಡಿದ್ದಾನೆ.

    ಗಂಭೀರವಾಗಿ ಗಾಯಗೊಂಡಿದ್ದ ಎಸ್​ಐ ಮಾರ್ಗರೇಟ್​ ಅವರನ್ನು ತಕ್ಷಣ ತಿರುನೆಲ್ವೇಲಿ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸ್​ ಮೂಲಗಳ ಪ್ರಕಾರ ಹಳೆಯ ದ್ವೇಷವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

    ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕೆ ಒಂದು ತಿಂಗಳ ಹಿಂದೆ ಆರುಮುಗಸ್ವಾಮಿ ವಿರುದ್ಧ ಮಾರ್ಗರೇಟ್​ ಡ್ರಿಂಕ್​ ಆ್ಯಂಡ್​ ಡ್ರೈವ್​ ಪ್ರಕರಣ ದಾಖಲಿಸಿದ್ದರು. ಇದರಿಂದ ಅಸಮಾಧನಗೊಂಡಿದ್ದ ಆತ ಇದೀಗ ಸಾರ್ವಜನಿಕರ ಎದುರೇ ಅವರ ಮೇಲೆ ದಾಳಿ ಮಾಡಿದ್ದಾನೆ. ಆರುಮುಗಸ್ವಾಮಿಯನ್ನು ತಿರುನೆಲ್ವೇಲಿ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಈ ಘಟನೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ವರೆಗೂ ಮುಟ್ಟಿದೆ. ಏ. 23ರಂದು ಟ್ವೀಟ್​ ಮಾಡಿರುವ ಸ್ಟಾಲಿನ್​, ನಾನು ಎಸ್​ಐ ಮಾರ್ಗರೇಟ್​ ಜತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಮಾರ್ಗರೇಟ್​ ಅವರಿಗೆ ಗುಣಮಟ್ಟದ ಚಿಕಿತ್ಸೆ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್​)

    ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಗುಳಂ: ನಯ ವಂಚಕಿ ಸೆರೆ

    ಸಮಂತಾ ಯಾಕೆ ಈ ರೀತಿ ಟ್ವೀಟ್​ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್​ ಬ್ಯೂಟಿಯ ಈ ಒಂದು ಟ್ವೀಟ್!​

    ಪ್ರಭಾಸ್​ ನಟನೆಯ ಸಲಾರ್​ ಮೇಲೆ KGF-2 ಗೆಲುವಿನ ಒತ್ತಡ! ಸಾಹೋ ಅನುಭವ ಮರೆಯುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts