More

    ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಗುಳಂ: ನಯ ವಂಚಕಿ ಸೆರೆ

    ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ನಯ ವಂಚಕಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

    ಪಾರ್ವತಿ ಬಂಧಿತ ವಂಚಕಿ. ಲೆಕ್ಕಪರಿಶೋಧಕ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರತಿಯೊಬ್ಬರ ಬಳಿ ಆರು ಲಕ್ಷ ಹಣ ಪೀಕಿರುವ ಆರೋಪ ಕೇಳಿಬಂದಿದೆ.

    ಎರಡು ತಿಂಗಳಲ್ಲಿ ನಿಮ್ಮ ಮನೆಗೆ ಕೆಲಸದ ಆದೇಶದ ಪ್ರತಿ ಬರುತ್ತದೆ ಎಂದಿದ್ದಳು. ಎರಡಲ್ಲ, ಇಪ್ಪತ್ತು ತಿಂಗಳಾದರೂ ಕೆಲಸದ ಆದೇಶದ ಪ್ರತಿ ಮನೆಗೆ ಬರದಿದ್ದಾಗ, ಪಾರ್ವತಿಗೆ ಹಣ ಕೊಟ್ಟಿದ್ದ ಆಕಾಂಕ್ಷಿಗಳು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಂಚಕಿ ಪಾರ್ವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬೇರೆ, ಬೇರೆ ಕಡೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವುದು ಬಯಲಾಗಿದೆ. (ದಿಗ್ವಿಜಯ ನ್ಯೂಸ್​)

    ಮದ್ಯದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಮಹಿಳೆ! ವಿಡಿಯೋ ವೈರಲ್​

    ಈ ನನ್ನ ಸಾವು ನಿನ್ನ ಮದುವೆಗೆ ನನ್ನ ಗಿಫ್ಟ್: ಒನ್​ ಸೈಡ್​ ಲವ್​ ಮಾಡಿ ದುರಂತ ಅಂತ್ಯ ಕಂಡ ಯುವಕ

    ಹಿಂಬದಿ ಸೀಟಿನಲ್ಲಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ: ವಿಮಾನದಿಂದ ಇಳಿಯುತ್ತಿದ್ದಂತೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts