More

    ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ರಜೆ ನಿರಾಕರಣೆ: ರಾಜೀನಾಮೆಗೆ ಮುಂದಾದ ಎಸ್​ಐ!

    ಭುವನೇಶ್ವರ್​: ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ರಜೆ ನಿರಾಕರಿಸಿದ್ದಕ್ಕೆ ಮತ್ತು ಠಾಣೆಯ ಇನ್​​ಸ್ಪೆಕ್ಟರ್​ ಕಿರುಕುಳವನ್ನು ಸಹಿಸಲಾರದೇ ಒಡಿಶಾದ ಜಾಜ್ಪುರ್ ಜಿಲ್ಲೆಯ ಧರ್ಮಶಾಲಾ ಪೊಲೀಸ್​ ಠಾಣೆಯ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಠಾಣಾ ಇನ್​ಸ್ಪೆಕ್ಟರ್​ರಿಂದ ನನಗೆ ಜೀವ ಬೆದರಿಕೆ ಇದೆ. ಅವರು ನೀಡುತ್ತಿರುವ ಮಾನಸಿಕ ಕಿರುಕುಳವನ್ನು ನನ್ನಿಂದ ಸಹಿಸಲು ಆಗುತ್ತಿಲ್ಲ ಎಂದು ಎಸ್​ಐ ರಾಧಾನಾಥ್​ ದಾಸ್​ ಎಂಬುವರು ಜಾಜ್ಪುರ್​ ಪೊಲೀಸ್​ ವರಿಷ್ಠಾಧಿಕಾರಿಗೆ ಲಿಖಿತ ದೂರು ದಾಖಲಿಸಿದ್ದು, ಪೊಲೀಸ್​ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಬಗೆಹರಿಯದ ಸಮಸ್ಯೆ: ಗನ್​ ಪಾಯಿಂಟ್​ನಲ್ಲಿ ಸರ್ಕಾರಿ ಉದ್ಯೋಗಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಯುವಕ!

    ಎಸ್​ಐ ರಾಧಾನಾಥ್​ ದೂರಿನ ಪ್ರಕಾರ ಇನ್​ಸ್ಪೆಕ್ಟರ್​ ರಾಕೇಶ್​ ತ್ರಿಪಾಠಿ ಅವರು ಪರಿಹರಿಸಲು ಹೆಚ್ಚೆಚ್ಚು ಪ್ರಕರಣಗಳನ್ನು ನೀಡುವ ಮೂಲಕ ಮಾನಸಿಕ ಒತ್ತಡವನ್ನು ಹೇರುತ್ತಿದ್ದಾರೆ. ಸಂಚಲನಾತ್ಮಕ ಮತ್ತು ಹೆಚ್ಚು ಮಹತ್ವದ ಪ್ರಕರಣಗಳ ತನಿಖೆಯನ್ನು ನಡೆಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅದರಲ್ಲೂ ಪೊಕ್ಸೊ ಮತ್ತು ಅತ್ಯಾಚಾರ ಪ್ರಕರಣಗಳ ಮೇಲೆ ತಾತ್ಸಾರ ಮನೋಭಾವವನ್ನು ಹೊಂದಿದ್ದು, ಅಂತಹ ಪ್ರಕರಣಗಳನ್ನು ಪರಿಹರಿಸುವಂತೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಎಸ್​ಐ ರಾಧಾನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇಷ್ಟೇ ಅಲ್ಲದೆ, ರಾಧಾನಾಥ್​ಗೆ ರಜೆಯನ್ನೂ ನೀಡದೆ ಹೆಚ್ಚಿನ ಸಮಯ ಕೆಲಸ ಮಾಡುವಂತೆ ಬಲವಂತ ಮಾಡುತ್ತಿದ್ದಾರಂತೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ನೋಡಿಕೊಂಡು ಬರಲು ಸಹ ರಜೆ ಕೊಡುತ್ತಿಲ್ಲ ಎಂದು ರಾಧಾನಾಥ್​ ಆರೋಪ ಮಾಡಿದ್ದಾರೆ.

    ನನಗೊಬ್ಬಳು ಅನಾರೋಗ್ಯದಿಂದ ಬಳುತ್ತಿರುವ ತಾಯಿ ಇದ್ದಾಳೆ. ಆಕೆ ಸಾಯುವ ಕೊನೆಯ ಹಂತದಲ್ಲಿದ್ದಾರೆ. ಆದರೆ, ರಜೆ ಕೇಳಿದರೆ, ಕೊಡುತ್ತಿಲ್ಲ. ನನ್ನ ತಾಯಿಯನ್ನು ನೋಡಲಾಗದೇ ನಾನೀಗ ಖಿನ್ನತೆಗೆ ಒಳಗಾಗಿದ್ದೇನೆ. ಸಂವೇದನಾಶೀಲ ಪ್ರಕರಣಗಳನ್ನು ತಾವೇ ವಹಿಸಿಕೊಳ್ಳುವ ಬದಲು ಕಿರಿಯರನ್ನು ಇಂತಹ ಪ್ರಕರಣಗಳ ತನಿಖೆಗೆ ನಿಯೋಜಿಸುತ್ತಿದ್ದಾರೆ ಎಂದು ರಾಧಾನಾಥ್​ ಆರೋಪಿಸಿದ್ದಾರೆ.

    ಇದನ್ನೂ ಓದಿ: ಇಂಥವರೂ ಇರ್ತಾರಾ? ಮಗುವಿನ ಚಿಕಿತ್ಸೆಗೆ 11 ಕೋಟಿ ರೂ. ನೆರವು ನೀಡಿದ ಅಪರಿಚಿತ, ಮಗುವಿನ ತಂದೆ ಭಾವುಕ

    ಠಾಣಾ ಇನ್​ಸ್ಪೆಕ್ಟರ್​ ರಾಕೇಶ್​ ಉದ್ದೇಶಪೂರ್ವಕವಾಗಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ತೊಂದರೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ಎಸ್‌ಐ, ಇದರಿಂದ ಬೇಸತ್ತು ತನ್ನ ಕೆಲಸಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಆದಾಗ್ಯೂ ಈ ವಿಚಾರದ ಬಗ್ಗೆ ಈ ವರೆಗೂ ಪೊಲೀಸ್​ ವರಿಷ್ಠಾಧಿಕಾರಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಏಜೆನ್ಸೀಸ್​)

    ಸಹೋದರ-ಸಹೋದರಿ ನಡುವಿನ ಲೈಂಗಿಕತೆ ಬಗ್ಗೆ ಪ್ರಶ್ನೆ: ಪಾಕ್​ ಯೂನಿವರ್ಸಿಟಿ ವಿರುದ್ಧ ಭುಗಿಲೆದ್ದ ಆಕ್ರೋಶ

    ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ 1000 ರೂ. ದಂಡ! ರೊಚ್ಚಿಗೆದ್ದ ಸ್ಕೂಟರ್​ ಸವಾರ ಹೇಳಿದ್ದಿಷ್ಟು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts