More

    ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ವ್ಯಕ್ತಿ ದುರಂತ ಸಾವು: ಭಯಾನಕ ದೃಶ್ಯ ಸೆರೆ

    ನವದೆಹಲಿ: ರಕ್ಷಣಾ ಕಾರ್ಯಾಚರಣೆಯ ವೇಳೆ ವ್ಯಕ್ತಿಯೊಬ್ಬ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಜಾರ್ಖಂಡ್​ನ ದಿಯೋಘಡ ಜಿಲ್ಲೆಯಲ್ಲಿ ನಡೆದಿದೆ.

    ದಿಯೋಘಡ ಜಿಲ್ಲೆಯ ಬೈದ್ಯನಾಥ್​ ದೇವಾಲಯಕ್ಕೆ ಅಳವಡಿಸಿರುವ ರೋಪ್​ ವೇನಲ್ಲಿ ನಿನ್ನೆ (ಏ.11) ಎರಡು ಕೇಬಲ್​ ಕಾರುಗಳು ಪರಸ್ಪರ ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಬೆಟ್ಟದ ಮೇಲಿರುವ ದೇವಾಲಯಕ್ಕೆ ತಲುಪಲು ಕೇಬಲ್ ಕಾರು ಅಳವಡಿಸಲಾಗಿದೆ. ಇವು ಪರಸ್ಪರ ಡಿಕ್ಕಿ ಹೊಡೆದಿರುವುದರಿಂದ ಉಳಿದ ಕೇಬಲ್ ಕಾರುಗಳು ಅಲ್ಲೇ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್​ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯಿತು.

    ಮೃತಪಟ್ಟ ಮೂವರಲ್ಲಿ ಇಬ್ಬರು ಮಹಿಳೆಯರು. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ದಿಯೋಘಡದ ಸದಾರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ 30 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಕೇಬಲ್​ ಕಾರಿನಲ್ಲಿ ಸಿಲುಕಿದ್ದ 18 ಮಂದಿಯ ರಕ್ಷಣಾ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ನಿರ್ವಹಣಾ ಕೊರತೆಯೇ ಅಪಘಾತಕ್ಕೆ ಕಾರಣವಾಗಿರಬಹುದು. ತನಿಖಾ ತಂಡ ರಚಿಸಲಾಗಿದ್ದು, ಜೀವ ಉಳಿಸುವುದೇ ನಮ್ಮ ಆದ್ಯತೆ ಎಂದು ಜಾರ್ಖಂಡ್ ಸಚಿವ ಹಫೀಜುಲ್ ಹಸನ್ ಹೇಳಿದ್ದಾರೆ. ಒಟ್ಟು 48 ಕೇಬಲ್​ ಕಾರ್​ಗಳಿದ್ದು, ಅಲ್ಲೇ ಸಿಲುಕಿಕೊಂಡಿರುವ ಕಾರಣ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿದೆ. ಈ ಬಗ್ಗೆ ಗೊದ್ದಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರು ಜಾರ್ಖಂಡ್​ ಮುಖ್ಯ ಕಾರ್ಯದರ್ಶಿ ಸುಖದೇವ್​ ಸಿಂಗ್​ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಜೀವನದ ಬಹುದೊಡ್ಡ ಕನಸು ನನಸಾದ ಬೆನ್ನಲ್ಲೇ ಸಿನಿಮಾ, ಟಿವಿ ಶೋಗಳಿಗೆ ಗುಡ್​ಬೈ ಹೇಳಿದ ನಟಿ ರೋಜಾ!

    17ರ ಹುಡುಗಿಯ ಮೇಲೆ 15 ಮಂದಿಯಿಂದ ರೇಪ್​: ಬಡತನದಲ್ಲಿ ಹುಟ್ಟಿದ ಅಪ್ರಾಪ್ತೆಯ ಕಣ್ಣೀರ ಕತೆಯಿದು

    ಅಲ್ಲು ಅರ್ಜುನ್​, ಮಂಚು ಮನೋಜ್ ಬಳಿಕ​ ನಟ ನಾಗಚೈತನ್ಯಗೂ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts