More

  ಅಂತಾರಾಷ್ಟ್ರೀಯ ಪ್ಯಾರಾಬ್ಯಾಡ್ಮಿಂಟನ್ ಆಟಗಾರನ ಕೊಲೆ: ಮಾಜಿ ಪ್ರೇಯಸಿ, ಆಕೆಯ ಗೆಳೆಯ ಅರೆಸ್ಟ್​!

  ರಾಂಚಿ(ಜಾರ್ಖಂಡ್): ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಾಂತ್ ಕುಮಾರ್ ಸಿನ್ಹಾ ಅವರನ್ನು ಕೊಂದು ಶವವನ್ನು ಜಾರ್ಖಂಡ್‌ನ ಹಜಾರಿಬಾಗ್‌ನ ಛದ್ವಾ ಸೇತುವೆಯ ಕೆಳಗೆ ಎಸೆದ ಆರೋಪದ ಮೇಲೆ ಮಾಜಿ ಗೆಳತಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

  ಇದನ್ನೂ ಓದಿ: ಬಿಜೆಪಿಯ ಆಂತರಿಕ ಜಗಳದ ಬಗ್ಗೆ ರಾಧಾ ಮೋಹನ್ ದಾಸ್ ರಿಯಾಕ್ಷನ್!

  ಪ್ರಶಾಂತ್‌ ಜೊತೆ ತನ್ನ ಸ್ನೇಹವನ್ನು ಕೊನೆಗೊಳಿಸಿದರೂ, ತನ್ನೊಂದಿಗೆ ಇದ್ದ ಫೋಟೋಗಳು ಮತ್ತು ಖಾಸಗಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಕಾರಣ ಆತನಿಗೆ ಅಂತ್ಯ ಕಾಣಿಸಬೇಕಾಯಿತು ಎಂದು ಕಾಜಲ್ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.

  ಮಾರ್ಚ್ 11 ರಿಂದ ನಾಪತ್ತೆಯಾಗಿದ್ದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಾಂತ್ ಕುಮಾರ್ ಸಿನ್ಹಾ ಅವರ ಮೃತದೇಹವು ಹಜಾರಿಬಾಗ್ ಜಿಲ್ಲೆಯ ಛದ್ವಾ ಅಣೆಕಟ್ಟಿನ ಸೇತುವೆ ಕೆಳಗೆ ಶನಿವಾರ ಗೋಣಿಚೀಲದಲ್ಲಿ ಪತ್ತೆಯಾಗಿತ್ತು. ಪ್ರಶಾಂತ್ ಬಿರ್ಸಾನಗರ ನಿವಾಸಿಯಾಗಿದ್ದರು.

  ಪೊಲೀಸರ ಪ್ರಕಾರ, ಪ್ರಶಾಂತ್‌ನ ಮಾಜಿ ಗೆಳತಿ ಕಾಜಲ್ ತನ್ನ ಹೊಸ ಪ್ರೇಮಿ ರೌನಕ್ ಕುಮಾರ್ ಸಹಾಯದಿಂದ ಪ್ರಶಾಂತ್‌ನನ್ನು ಕೊಲೆ ಮಾಡಿದ್ದಳು. ಆರೋಪಿ ಕಾಜಲ್ ಹಜಾರಿಬಾಗ್‌ನ ನ್ಯೂ ಏರಿಯಾ ನಿವಾಸಿ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

  ಬಿರ್ಸಾನಗರ ಪೊಲೀಸ್ ಠಾಣೆ ಮತ್ತು ಪೆಲಾವಲ್ ಪೊಲೀಸ್ ಠಾಣೆಯ ತಂಡವು ಜಂಟಿಯಾಗಿ ಶೋಧ ನಡೆಸಿ, ಛಿದ್ರಗೊಂಡ ಮೃತದೇಹವನ್ನು ಶನಿವಾರ ಪತ್ತೆ ಹಚ್ಚಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಜಾರಿಬಾಗ್ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

  ಪ್ರಶಾಂತ್ ಅವರ ಕುಟುಂಬ ಸದಸ್ಯರು ಮಾರ್ಚ್ 13 ರಂದು ಬಿರ್ಸಾ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಪ್ರಶಾಂತ್ ಅವರ ತಾಯಿ ಕಿಡ್ನಾಪ್ ಎಂದು ಆರೋಪಿಸಿ ಎಫ್ಐಆರ್ ಸಂಖ್ಯೆ 30/24 ಅನ್ನು ಕಲಂ 364 (ಎ) ಅಡಿಯಲ್ಲಿ ಮಾರ್ಚ್ 22 ರಂದು ದಾಖಲಿಸಿದ್ದಾರೆ. ಬಿರ್ಸಾನಗರ ಪೊಲೀಸರಿಗೆ ತಾಂತ್ರಿಕ ಕೋಶ ಮತ್ತು ಕುಟುಂಬ ಸದಸ್ಯರ ವಿಚಾರಣೆ ವೇಳೆ ಸುಳಿವು ಸಿಕ್ಕಿದೆ.

  See also  ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

  2019 ರಿಂದ ಪ್ರಶಾಂತ್ ಜೊತೆ ಸ್ನೇಹ ಹೊಂದಿರುವುದಾಗಿ ವಿಚಾರಣೆ ವೇಳೆ ಕಾಜಲ್ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಶಾಂತ್ ಜೊತೆ ಸ್ನೇಹ ಮುರಿಯಲು ಇಷ್ಟವಿರಲಿಲ್ಲ. ಆದರೆ ಆತ ತನ್ನನ್ನು ಬಹಳ ಸಮಯದಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಫೋಟೋ, ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಇದರಿಂದ ಬೇಸತ್ತು ಮಾರ್ಚ್ 11ರಂದು ಜಮ್ಶೆಡ್‌ಪುರದಿಂದ ಆಮಿಷವೊಡ್ಡಿ ಹಜಾರಿಬಾಗ್ ನಗರದ ಶಹೀದ್ ನಿರ್ಮಲ್ ಮಹತೋ ಪಾರ್ಕ್ ಬಳಿ ಕರೆತಂದು, ಅಲ್ಲಿ ನಾನು ಮತ್ತು ನನ್ನ ಪ್ರಿಯಕರ ರೌನಕ್ ಸೇರಿ ಕತ್ತು ಹಿಸುಕಿ ಕೊಂದಿದ್ದಾಗಿ ಆಕೆ ಪೊಲೀಸರಿಗೆ ಹೇಳಿದ್ದಾಳೆ.

  ಅದೇ ದಿನ ರಾತ್ರಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಮಧ್ಯದಲ್ಲಿ ಇರಿಸಿದ ನಂತರ ಇಬ್ಬರೂ ಛದ್ವಾ ಅಣೆಕಟ್ಟಿಗೆ ಹೋಗಿ ಶವವನ್ನು ವಿಲೇವಾರಿ ಮಾಡಿದ್ದಾರೆ.

  ಮೃತ ಪ್ರಶಾಂತ್ ಸಿನ್ಹಾ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ. ಅವರು 2023 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

  ಪಾಕಿಸ್ತಾನದಲ್ಲಿ ಕಟುಕ ಸಹೋದರ.. ಸ್ವಂತ ತಂಗಿಗೆ ಯಾಕೆ ಹೀಗೆ ಮಾಡಿದ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts