More

    Mahalaya amavasya 2022: ಪಿತೃಪಕ್ಷದ ಶ್ರಾದ್ಧ ಮಹತ್ವವೇನು? ಯಾವ ನಿಯಮಗಳನ್ನು ಪಾಲಿಸಬೇಕು?

    ಹಿಂದು ಸಂಪ್ರದಾಯದಲ್ಲಿ ಪಿತೃ ಋಣ ನಿವಾರಣೆ ಮಾಡಲು ಶ್ರಾದ್ಧ ಕಾರ್ಯ ಮಾಡಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಪಿತೃಪಕ್ಷದ 15 ದಿನಗಳ ಕಾಲಾವಧಿಯಲ್ಲಿ ಪಿತೃ ಋಣವನ್ನು ತೀರಿಸಿ ಅವರ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡಲಾಗುವುದು. ಇದೇ ಭಾನುವಾರ (ಸೆ.25) ಪಿತೃಪಕ್ಷದ ಕೊನೆಯ ದಿನವಾಗಿದೆ. ಒಟ್ಟು 15 ದಿನಗಳ ಕಾಲ ನಡೆಯುವ ಪಿತೃಪಕ್ಷದ ಶ್ರಾದ್ಧ ಕಾರ್ಯಕ್ಕೆ ಅಂದು ತೆರೆ ಬೀಳಲಿದೆ. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಾವಸ್ಯೆ ಬರುವುದರಿಂದ ಆ ದಿನವನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.

    ಪಿತೃಪಕ್ಷದ ಮಹತ್ವವೇನು?
    ಮಹಾಲಯ ಪಿತೃಪಕ್ಷ ಶ್ರಾದ್ಧದ ಕೊನೆಯ ದಿನವಾದರೆ, ದುರ್ಗಾಪೂಜೆ, ದಸರಾ ಹಬ್ಬದ ಆರಂಭಕ್ಕೆ ಮುನ್ನುಡಿಯಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಶುಭ ಕಾರ್ಯಗಳಿಗೆ ಸಂಪೂರ್ಣ ನಿಷೇಧವಿರುತ್ತದೆ. ಈ ಸಮಯದಲ್ಲಿ ಗೃಹ ಪ್ರವೇಶ, ಕ್ಷೌರ, ಹೊಸ ಮನೆ ಅಥವಾ ವಾಹನ ಖರೀದಿ ಮಾಡುವುದಿಲ್ಲ. ಅದೇ ರೀತಿ ಪಿತೃ ಪಕ್ಷವು ಜಾತಕದಲ್ಲಿ ಪಿತೃ ದೋಷವನ್ನು ತೆಗೆದುಹಾಕಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪೂರ್ವಜರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದ ಪಡೆಯಲು ವಿವಿಧ ಕ್ರಮಗಳನ್ನು ಅನುಸರಿಸಲಾಗುತ್ತದೆ. ಪೂರ್ವಜರು ಮರಣ ಹೊಂದಿದ ದಿನ, ತಿಥಿ, ನಕ್ಷತ್ರ ನಮಗೆ ಗೊತ್ತಿಲ್ಲದಿದ್ದರೆ ಮಹಾಲಯ ಅಮಾವಾಸ್ಯೆ ಮತ್ತು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಿ ಪುಣ್ಯದ ಜೊತೆಗೆ ದೋಷಗಳಿಂದ ಮುಕ್ತರಾಗಬಹುದು. ಅಲ್ಲದೆ, ಮನೆಗಳಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

    ಈ ನಿಯಮಗಳನ್ನು ಪಾಲಿಸಬೇಕು
    ಪಿತೃಪಕ್ಷದಲ್ಲಿ ಶ್ರಾದ್ಧ ಮಾಡುವವರು ಆ ದಿನದಂದು ಕ್ಷೌರ, ದ್ವಭೋಜನ, ಅಭ್ಯಂಜನ ಸ್ನಾನ, ಪರಾನ್ನ ಭೋಜನ, ತಾಂಬೂಲ ಸೇವನೆಗಳನ್ನು ಮಾಡುವಂತಿಲ್ಲ. ಶ್ರಾದ್ಧದ ಹಿಂದಿನ ದಿನದಿಂದಲೇ ಬ್ರಹ್ಮಚರ್ಯ ವ್ರತ ಪಾಲಿಸಬೇಕು. ತುಂಬಾ ಮಡಿವಂತಿಕೆ ಇರಬೇಕು. ದೈವ ಕಾರ್ಯಕ್ಕಿಂತ ಮಿಗಿಲಾಗಿ ಭಕ್ತಿ ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕು. ಶ್ರಾದ್ಧ ಕಾರ್ಯ ಮಾಡಲು ಬ್ರಾಹ್ಮಣರನ್ನು ಕರೆದು ಅವರಿಗೆ ಅರ್ಘ್ರ್ಯ, ಪಾದ್ಯ, ವಸ್ತ್ರಗಳನ್ನು ಕಾಣಿಕೆಯಾಗಿ ನೀಡಬೇಕು. ಮನೆಗೆ ಬಂದ ಬ್ರಾಹ್ಮಣನಿಗೆ ಗೌರವಪೂರ್ವವಾಗಿ ಆಹಾರ, ಹಣ್ಣು, ದಕ್ಷಿಣೆ ಕೊಟ್ಟು ಕಳುಹಿಸಬೇಕು. ಶ್ರಾಧ್ಧ ಮಾಡುವ ದಿನ ಬೆಳಗ್ಗೆ ಸ್ನಾನ ಮಾಡಿದ ಬಳಿಕ ಪೂಜೆ ಮಾಡುವ ಜಾಗವನ್ನು ಸೆಗಣಿಯಿಂದ ಸಾರಿಸಬೇಕು. ಆ ಜಾಗದಲ್ಲಿ ಸೆಗಣಿ ಹಾಕಲು ಸಾಧ್ಯವಾಗದಿದ್ದರೆ ಗೋ ಮೂತ್ರ ಅಥವಾ ಗಂಗಾ ಜಲ ಹಾಕಿ ಜಾಗವನ್ನು ಶುದ್ಧ ಮಾಡಬೇಕು. ಮನೆ ಮುಂದೆ ರಂಗೋಲಿ ಬಿಡಬೇಕು.

    ಸಿಪ್ಪೆ ತೆಗೆದ ಕರಿ ಎಳ್ಳನ್ನೇ ಬಳಸಬೇಕು
    ಹಿರಿಯರಿಗೆ ಶ್ರಾದ್ಧ ಮಾಡುವಾಗ ಇಡಲು ಮಾಡುವ ಆಹಾರವನ್ನು ಕೂಡ ಮಡಿಯಿಂದ ಮಾಡಬೇಕು. ಅದರ ರುಚಿ ನೋಡಬಾರದು. ಪಿತೃಗಳಿಗೆ ಹಾಲು, ಮೊಸರು, ತುಪ್ಪ, ಪಾಯಸ ಹಾಗೂ ಅವರಿಗೆ ಇಷ್ಟವಾದ ಭಕ್ಷ್ಯ ಅರ್ಪಿಸಬೇಕು. ಅವರಿಗೆ ತರ್ಪಣ ಅರ್ಪಿಸುವವರಿಗೆ ಮನೆಯವರು ಏನೂ ತಿನ್ನಬಾರದು. ಶ್ರಾದ್ಧ ಕರ್ಮದಲ್ಲಿ ಸಿಪ್ಪೆ ತೆಗೆದ ಕರಿ ಎಳ್ಳನ್ನೇ ಬಳಸಬೇಕು. ಈ ಎಳ್ಳು ಬಳಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಎಳ್ಳು ಬಳಸಿದರೆ ಭೂತ, ಪ್ರೇತಗಳಿಂದ ಬರುವ ಬಾಧಕಗಳು ಇಲ್ಲವಾಗುವುದು, ಅಲ್ಲದೆ ಸುತ್ತಿಕೊಂಡಿದ್ದ ಪಾಪ ದೂರವಾಗುವುದು ಎಂದು ಹೇಳಲಾಗುತ್ತದೆ.

    ಶ್ರಾದ್ಧದಲ್ಲಿ ಪಿತೃಗಳಿಗೆ ಪಿಂಡ ಇಡಲಾಗುವುದು. ಈ ಪಿಂಡವನ್ನು ಅಷ್ಟದ್ರವ್ಯದಿಂದ ಮಾಡಬೇಕು. ಎಳ್ಳು, ಹಾಲು, ಮೊಸರು, ಬೆಲ್ಲ, ಜೇನುತುಪ್ಪ ಮತ್ತು ತುಪ್ಪ ಬಳಸಿ ಪಿಂಡ ಮಾಡಲಾಗುವುದು. ಇದನ್ನು ನೀರಿನಲ್ಲಿ ಬಿಡಬೇಕು, ನೆಲದಲ್ಲಿ ಹೂಳ ಬೇಕು ಹಾಗೂ ಪ್ರಾಣಿಗಳಿಗೆ ನೀಡಬೇಕು. ಪಿಂಡವನ್ನು ನೀರಿನಲ್ಲಿ ತೇಲಿ ಬಿಟ್ಟಾಗ ಅಥವಾ ಕಾಗೆ, ಹಸುಗಳಿಗೆ ನೀಡಿದಾಗ ಅದನ್ನು ಒಡೆಯುವುದನ್ನು ನೋಡಬಾರದು. ಅಲ್ಲದೆ ಪಿತೃ ತರ್ಪಣವನ್ನು ದಕ್ಷಿಣ ದಿಕ್ಕಿಗೆ ತಿರುಗಿ ನೀಡಬೇಕು.

    ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್​ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…

    ಒಂದು ಶಬ್ದ ಬದಲಾಯಿಸಲು ಫೋನ್​ ಮಾಡಿ ಕೇಳಿದ್ದರು… ಅಬ್ಬಾ! ನೆನೆಸಿಕೊಂಡರೆ ರೋಮಾಂಚನವಾಗುತ್ತೆ…

    ಮಂಗಳೂರಿನ ರಥಬೀದಿ ಶಾರದೆಗೆ ಚಿನ್ನದ ಜರಿ ಸೀರೆ! ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ಮತ್ತೊಂದು ವಿಶೇಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts