More

    ಠಾಣೆಗೆ ತೆರಳಿ ತಾಯಿಯ ವಿರುದ್ಧವೇ ದೂರು ದಾಖಲು! 3 ವರ್ಷದ ಮಗುವಿನ ಮಾತು ಕೇಳಿ ನಗೆಗಡಲಲ್ಲಿ ತೇಲಿದ SI

    ಭೋಪಾಲ್​: ಕ್ಯಾಂಡಿಗಳನ್ನು ತಿನ್ನಲು ನನ್ನಮ್ಮ ಬಿಡುತ್ತಿಲ್ಲ ಎಂದು ಮೂರು ವರ್ಷದ ಮಗು, ಪೊಲೀಸ್​ ಠಾಣೆಗೆ ತೆರಳಿ ಅಮ್ಮನ ವಿರುದ್ಧವೇ ದೂರು ದಾಖಲಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಘಟನೆ ಮಧ್ಯಪ್ರದೇಶದ ಬುರ್ಹಾನ್​ಪುರ್​ನಲ್ಲಿ ನಡೆದಿದೆ. ಮೂರು ವರ್ಷದ ಮಗುವಿನ ಹೆಸರು ಹಮ್ಜಾ. ಅಮ್ಮ ಕ್ಯಾಂಡಿಗಳನ್ನು ಕದ್ದು, ಕಪಾಳಕ್ಕೆ ಬಾರಿಸಿದ್ದಕ್ಕೆ ಕುಪಿತಗೊಂಡ ಮಗು ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಠಾಣೆಗೆ ಕರೆದೊಯ್ಯುವಂತೆ ಅಪ್ಪನ ಬಳಿ ಕೇಳಿ, ಠಾಣೆಗೆ ಕರೆದದೊಯ್ಯುತ್ತಿದ್ದಂತೆ ಸಬ್​ ಇನ್ಸ್​ಪೆಕ್ಟರ್​ ಬಳಿ ಮಗು ತಾಯಿಯ ವಿರುದ್ಧ ದೂರು ನೀಡಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ 3 ವರ್ಷದ ಮಗು ಬುರ್ಹಾನ್​ಪುರ್​ನ ಡೆಡ್ತಲೈದಲ್ಲಿರುವ ಪೊಲೀಸ್​ ಠಾಣೆಗೆ ತೆರಳಿ, ಸಬ್​ ಇನ್ಸ್​ಪೆಕ್ಟರ್​ ಪ್ರಿಯಾಂಕಾ ನಾಯಕ್ ಅವರಿಗೆ ತನ್ನ ನೋವಿನ ಕತೆ ಹೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನನ್ನ ಅಮ್ಮ ನನ್ನ ಕ್ಯಾಂಡಿಗಳನ್ನು ಕದ್ದಿದ್ದಾರೆ. ಆಕೆಯನ್ನು ಜೈಲಿಗೆ ಹಾಕಿ ಎಂದು ಮಗು, ಸಬ್​ ಇನ್ಸ್​ಪೆಕ್ಟರ್​ಗೆ ಹೇಳಿದೆ. ಮಗುವಿನ ಮುಗ್ಧತೆಯನ್ನು ನೋಡಿ, ನಗೆಗಡಲಲ್ಲಿ ತೇಲಿದ ಎಸ್​ಐ ಪ್ರಿಯಾಂಕಾ, ತಮ್ಮ ನಗುವನ್ನು ನಿಯಂತ್ರಿಸಲು ಪರದಾಡುತ್ತಾ, ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳಿ, ದೂರು ಬರೆದುಕೊಳ್ಳುತ್ತಿರುವಂತೆ ನಟಿಸುತ್ತಾರೆ. ಬಳಿಕ ಮಗು ಪೇಪರ್​ಗೆ ಸಹಿ ಮಾಡುತ್ತದೆ. ಆದಷ್ಟು ಬೇಗ ನಿಮ್ಮ ಅಮ್ಮನನ್ನು ಬಂಧಿಸುವುದಾಗಿ ಹೇಳಿ ಭರವಸೆ ನೀಡಿ ಕಳುಹಿಸುವುದು ವಿಡಿಯೋದಲ್ಲಿದೆ.

    ಮಗುವಿನ ತಂದೆ ಈ ಬಗ್ಗೆ ಮಾತನಾಡಿದ್ದು, ಹಮ್ಜಾ ಕ್ಯಾಂಡಿಗಳನ್ನು ಕೇಳಿದಾಗ ತಾಯಿ ಮೃದುವಾಗಿ ಕೆನ್ನೆಗೆ ಬಾರಿಸಿದಳು. ಇದರ ಬೆನ್ನಲ್ಲೇ ತನ್ನ ಪೊಲೀಸ್​ ಠಾಣೆಗೆ ಕರೆದೊಯ್ಯುವಂತೆ ಹಮ್ಜಾ ಹೇಳಿದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ವಿಡಿಯೋ ತುಣುಕು ವೈರಲ್ ಆದ ನಂತರ, ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಗುವಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದು, ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಆರೋಪಿ ಕೊಟ್ಟ ಪ್ರತಿಕ್ರಿಯೆ ನೋಡಿ ದಂಗಾದ ಅಧಿಕಾರಿಗಳು

    ಮುಖ ಟ್ಯಾನ್​ ಆಗುವುದನ್ನು ತಪ್ಪಿಸಲು ಯಾವ ಸನ್​ಸ್ಕ್ರೀನ್ ಬಳಸ್ತೀರಾ? ರಾಹುಲ್ ಗಾಂಧಿ ಕೊಟ್ಟ ಉತ್ತರವಿದು…

    60 ವರ್ಷದ ಉದ್ಯಮಿ ಜತೆ ವಿವಾಹೇತರ ಸಂಬಂಧ! ನಟಿ ಕಸ್ತೂರಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts