More

    ಥೂ ಇದೆಂಥಾ ನೀಚ ಕೃತ್ಯ? ಒಂದೇ ದಿನದಲ್ಲಿ 17 ಮಂದಿಯ ಜತೆ 16ರ ಹುಡುಗಿಯ ಒತ್ತಾಯದ ಲೈಂಗಿಕ ಕ್ರಿಯೆ

    ಲಂಡನ್​: ಬೆಂಗಾವಲು ಸಿಬ್ಬಂದಿಯೊಬ್ಬನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಕ್ಕೆ 16 ವರ್ಷದ ಹುಡುಗಿಯೊಬ್ಬಳನ್ನು ಒಂದೇ ದಿನದಲ್ಲಿ 17 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿರುವ ಅಮಾನವೀಯ ಘಟನೆ ಲಂಡನ್​ನಲ್ಲಿ ನಡೆದಿದೆ.

    ಕೇವಲ 17 ಮಂದಿ ಮಾತ್ರವಲ್ಲದೇ 30ಕ್ಕಿಂತ ಹೆಚ್ಚು ಪುರುಷರೊಂದಿಗೆ ಬಲವಂತದ ಲೈಂಗಿಕ ಕ್ರಿಯೆಗೆ ಸಂತ್ರಸ್ತೆಯನ್ನು ದೂಡಿರುವ ಆರೋಪವಿದೆ. ಎರಡು ವಾರಗಳಲ್ಲಿ ಪ್ರತಿ ಅರ್ಧ ಗಂಟೆಗೆ 80 ಪೌಂಡ್ ಪಡೆದು ಬಲವಂತಾಗಿ ಲೈಂಗಿಕ ಕ್ರಿಯೆ ಮಾಡಿಸಿದ್ದಾರೆ.

    ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದಾಳೆ. ಆರೋಪಿ ಬೆಂಗಾವಲು ಸಿಬ್ಬಂದಿಯನ್ನು ಟೈಯ್ಲರ್​ ಜೋ ವಾಕರ್​ ಎಂದು ಗುರುತಿಸಲಾಗಿದೆ. ಈತ ಸಂತ್ರಸ್ತೆ ಜತೆ ಇನ್​ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿ, ಚಾಟಿಂಗ್​ ಮೂಲಕ ತುಂಬಾ ಹತ್ತಿರವಾಗಿ ಸಂತ್ರಸ್ತೆಯನ್ನು ತನ್ನ ಅಪಾರ್ಟ್​ಮೆಂಟ್​ ಕರೆಸಿಕೊಂಡಿದ್ದ. ಹುಡುಗಿ ಬರಲೆಂದು ತಾನೇ 47 ಪೌಂಡ್​ ಟ್ಯಾಕ್ಸಿ ಚಾರ್ಜ್​ ಪಾವತಿಸಿದ್ದ. ಆದರೆ, ಹುಡುಗಿ ಮನೆಗೆ ಬಂದಾಗ ಟ್ಯಾಕ್ಸಿ ಚಾರ್ಜ್​ ಮತ್ತು ಇತರೆ ಖರ್ಚು ಸೇರಿ 100 ಪೌಂಡ್ಸ್​ ಕೊಡುವಂತೆ ಹುಡುಗಿಯನ್ನು ಕೇಳಿದ್ದ.

    ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ ನಂತರ ಆರೋಪಿಯು ಬಲವಂತವಾಗಿ ಸಂತ್ರಸ್ತೆಯ ಫೋಟೋಶೂಟ್​ ಮಾಡಿದ್ದಾನೆ. ಬಳಿಕ ಸಂತ್ರಸ್ತೆ 18 ವರ್ಷ ವಯಸ್ಸಿನವಳು ಎಂದು ಹೇಳಿ, ಫೋಟೋವನ್ನು ಜನರಿಗೆ ರವಾನಿಸಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ ವ್ಯಕ್ತಿಯೊಬ್ಬ ಅಪಾರ್ಟ್​ಮೆಂಟ್​ಗೆ ಭೇಟಿ ನೀಡಿದ್ದಾರೆ. ಬಳಿಕ ಏನು ಮಾಡಬೇಕೆಂದು ಆರೋಪಿಯು ಸಂತ್ರಸ್ತೆಗೆ ಹೇಳಿದ್ದಾನೆ.

    ಆರೋಪಿ ಹೇಳಿದ್ದನ್ನು ಕೇಳಿ ಶಾಕ್​ ಆದ ಸಂತ್ರಸ್ತೆ ಭಯದಿಂದ ಬಾತ್​ರೂಮ್​ಗೆ ಓಡಿಹೋದಳು ಮತ್ತು ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಳು. ಅದಕ್ಕೆ ಆರೋಪಿ ಹಣವನ್ನು ಹೇಗೆ ಮರು ಪಾವತಿ ಮಾಡುತ್ತೀಯ ಎಂದು ಕೇಳಿದ್ದಾನೆ. ಅಲ್ಲದೆ, ಆಕೆಯನ್ನು ಬೆದರಿಸಿದ್ದಾನೆ. ಇದಾದ ಬಳಿಕ ಆರೋಪಿ ಸಂತ್ರಸ್ತೆಯನ್ನು ಮಹಡಿಗೆ ಕರೆದೊಯ್ದು ಇನ್ನೊಬ್ಬ ವ್ಯಕ್ತಿಯೊಂದಿಗೆ ಒಪ್ಪಂದ ಮತ್ತು ಸಮಯದ ಮಾತುಕತೆ ನಡೆಸಿದ್ದಾರೆ. ನಂತರ ಅಪಾರ್ಟ್​ಮೆಂಟ್​ಗೆ ಬಂದಿದ್ದ ವ್ಯಕ್ತಿ ಅರ್ಧ ಗಂಟೆಯವರೆಗೆ 80 ಪೌಂಡ್​ ನೀಡಿ ಸಂತ್ರಸ್ತೆ ಜತೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಇದೇ ರೀತಿ 30ಕ್ಕೂ ಹೆಚ್ಚು ಪುರುಷರ ಜತೆ ಹುಡುಗಿಯನ್ನು ಆರೋಪಿ ಬಲವಂತದ ಲೈಂಗಿಕ ಕ್ರಿಯೆ ದೂಡಿದ್ದಾನೆ.

    ಆರೋಪಿಯು ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದು, 16 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಈ ತೀರ್ಪನ್ನು ನೀಡುವಾಗ ನ್ಯಾಯಾಧೀಶ ರಾಬರ್ಟ್ ಸ್ಪ್ರಾಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸಂತ್ರಸ್ತೆಯು ತನ್ನ ಜೀವನವನ್ನು ಮುಂದುವರಿಸಲು ಕಷ್ಟಪಡುತ್ತಿದ್ದಾಳೆ. ಏಕೆಂದರೆ ಅವಳು ಆಗಾಗ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಯೋಚಿಸುತ್ತಾಳೆ ಮತ್ತು ಅದರಿಂದ ಮುಜುಗರಕ್ಕೆ ಒಳಗಾಗುತ್ತಾಳೆ. ಇದು ಸಂತ್ರಸ್ತೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ಪೆಟ್ರೋಲ್ ಬೆಲೆ ಏರಿಕೆ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ, ಹಿಂದಿನ ಸರ್ಕಾರದ ತಪ್ಪು ನೀತಿ ಕಾರಣವೆಂದ ಡಿವಿಎಸ್​

    ಖ್ಯಾತ ನಟಿಯ ಕಾರು ಅಪಘಾತ; ಇತರ ಮೂರು ಕಾರುಗಳಿಗೆ ಡಿಕ್ಕಿ..

    ಜನರೇ ಬೀದಿಗಿಳಿಯಿರಿ ಎಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಪ್ರಧಾನಿ ಇಮ್ರಾನ್​ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts