More

    ಎಲ್ಲವೂ ಕಾಮನ್​… ಲಾಕಪ್​ ಶೋನಲ್ಲಿ ಸಿನಿ ಜಗತ್ತಿನ ಕರಾಳ ಮುಖ ಬಯಲು ಮಾಡಿದ ನಟಿ ಕಂಗನಾ ರಣಾವತ್​!

    ಮುಂಬೈ: ರಾಷ್ಟ್ರ ಪ್ರಶಸ್ತಿ ವಿಜೇತೆ ಹಾಗೂ ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಅವರು ನಡೆಸಿಕೊಡುತ್ತಿರುವ ಲಾಕಪ್​ ಹೆಸರಿನ ರಿಯಾಲಿಟಿ ಶೋ ಕಳೆದ ಫೆಬ್ರವರಿ ತಿಂಗಳಿನಿಂದ ಆರಂಭವಾದ ಬಳಿಕ ತನ್ನ ವಿವಾದಾತ್ಮಕ ವಿಷಯಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಭಾನುವಾರದ ಎಪಿಸೋಡ್​ನಲ್ಲಿ ನಟಿ ಕಂಗನಾ ಅವರು ಬಾಲಿವುಡ್‌ನ ಕರಾಳ ರಹಸ್ಯಗಳನ್ನು ಬಹಿರಂಗಪಡಿಸಿದ್ದು, ಸಿನಿಮಾ ಅಥವಾ ಫ್ಯಾಶನ್ ಉದ್ಯಮದಲ್ಲಿ ಲೈಂಗಿಕ ಶೋಷಣೆ ಎಂಬುದು ಸಾಮಾನ್ಯವಾಗಿದೆ ಎಂದಿದ್ದಾರೆ.

    ಶೋ ಸ್ಪರ್ಧಿಗಳಲ್ಲಿ ಒಬ್ಬರಾದ ತೃತೀಯ ಲಿಂಗಿ ಸೈಶಾ ಸಿಂಧೆ ಅವರು ವೃತ್ತಿ ಜೀವನದಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಸ್ಪರ್ಧಿಗಳ ಎದುರು ತೆರೆದಿಟ್ಟರು. ಬಾಲಿವುಡ್​ನ ಖ್ಯಾತ ಫ್ಯಾಶನ್​ ಡಿಸೈನರ್​ ಒಬ್ಬರು ತನ್ನ ಮೇಲೆ ಎಸಗಿದ ದೌರ್ಜನ್ಯ ಬಹಿರಂಗಪಡಿಸಿದರು.

    ನನ್ನ ಜೀವನದ ರಹಸ್ಯಗಳಲ್ಲಿ ಒಂದಾದ ಇದನ್ನು ನಾನೆಂದು ಹೊರಗೆ ತಂದಿರಲಿಲ್ಲ. ಆದರೆ, ಇಂದು ಅದನ್ನು ಬಹಿರಂಗಪಡಿಸುತ್ತೇನೆ. 2005 ಅಥವಾ 2006 ನನ್ನ ವೃತ್ತಿ ಜೀವನ ಆಗಷ್ಟೇ ಶುರುವಾಗಿತ್ತು. ಭಾರತೀಯ ಡಿಸೈನರ್​ ಒಬ್ಬರು ನನ್ನ ಫೇವರಿಟ್​ ಆಗಿದ್ದರು. ನಾನು ಅವರನ್ನು ಭೇಟಿಯಾದಗಲೆಲ್ಲ ಅವರೆಡೆಗೆ ಆಕರ್ಷಿತಗೊಳ್ಳುತ್ತಿದ್ದೆ. ಒಮ್ಮೆ ನನ್ನನ್ನು ತನ್ನ ಹೋಟೆಲ್​ ರೂಮ್​ಗೆ ಆಹ್ವಾನಿಸಿದರು. ನಾನು ಅವರನ್ನು ಭೇಟಿಯಾದಾಗ ಪರಸ್ಪರ ತಬ್ಬಿಕೊಳ್ಳುವ ಮೂಲಕ ನನ್ನನ್ನು ಸ್ವಾಗತಿಸಿದರು. ಬಳಿಕ ಇಬ್ಬರು ಲೈಂಗಿಕ ಸಂಭೋಗ ನಡೆಸಿದೆವು.

    ಆದರೆ, ಆ ಫ್ಯಾಶನ್​ ಡಿಸೈನರ್​ ಇತರೆ ಏಳು ಹುಡುಗರನ್ನು ಇದೇ ರೀತಿ ಬಳಸಿಕೊಂಡಿದ್ದಾರೆ ಎಂದು ತಿಳಿದಾಗ ಸೈಶಾ ಸಿಂಧೆಗೆ ತಾನೂ ಮೋಸ ಹೊಗಿರುವುದು ಗೊತ್ತಾಯಿತಂತೆ. ನನ್ನ ಮತ್ತು ಡಿಸೈನರ್​ ನಡುವಿನ ಸಂಬಂಧ, ಉದ್ಯಮದಲ್ಲಿ ಬೆಂಕಿಯಂತೆ ಹರಡಿತು. ಅದರ ಬೆನ್ನಲ್ಲೇ ನನ್ನನ್ನು ಫ್ಯಾಶನ್​ ಲೋಕದಿಂದ ನಿಷೇಧಿಸಲಾಯಿತು. ನಾನೇ ಬಹಿರಂಗಪಡಿಸಿದ್ದೇನೆ ಎಂದು ವದಂತಿಗಳನ್ನು ಹರಡಿದ್ದರು. ಆದರೆ, ನಾನು ರಹಸ್ಯವನ್ನು ಯಾರಿಗೂ ಹೇಳಿರಲಿಲ್ಲ. ನಾನು ಶೋಷಣೆಗೆ ಒಳಗಾಗಿದ್ದೆ ಮತ್ತು ಇದರ ಪರಿಣಾಮವನ್ನು ನಂತರದಲ್ಲಿ ನಾನು ಅನುಭವಿಸಬೇಕಾಯಿತು ಎಂದು ಸೈಶಾ ನೋವು ತೋಡಿಕೊಂಡರು.

    ಡಿಸೈನರ್‌ಗೆ ಪ್ರತಿ ಮೆಟ್ರೋಪಾಲಿಟನ್ ಸಿಟಿಯಲ್ಲಿ ಒಬ್ಬ ಬಾಯ್‌ಫ್ರೆಂಡ್ ಹೊಂದಿದ್ದಾನೆ ಎಂದು ಸೈಶಾ ಹೇಳಿದ್ದಾರೆ. ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಸೈಶಾರನ್ನು ಪ್ರತಿಸ್ಪರ್ಧಿಗಳು ಹಾಗೂ ಕಂಗನಾ ಶ್ಲಾಘಿಸಿದರು ಮತ್ತು ಲೈಂಗಿಕ ಶೋಷಣೆಯು ಉದ್ಯಮದ ಕರಾಳ ಸತ್ಯ ಎಂದು ಕಂಗನಾ ಹೇಳಿದ್ದಾರೆ. ಚಿತ್ರರಂಗ ಮತ್ತು ಫ್ಯಾಶನ್ ಇಂಡಸ್ಟ್ರಿಯಲ್ಲಿ ಲೈಂಗಿಕ ಶೋಷಣೆ ತುಂಬಾ ಸಾಮಾನ್ಯವಾಗಿದೆ. ಪ್ರತಿಯೊಂದು ಉದ್ಯಮದಲ್ಲಿಯು ಇದು ನಡೆಯುತ್ತದೆ. ಅದು ಕಾರ್ಪೊರೇಟ್ ಉದ್ಯಮವಾಗಿರಲಿ ಅಥವಾ ಹೋಟೆಲ್ ಉದ್ಯಮವಾಗಿರಲಿ ಎಲ್ಲಾ ಕಡೆ ದೌರ್ಜನ್ಯ ಎಸಗುವವರು ಇದ್ದೇ ಇರುತ್ತಾರೆ. ಆದರೆ, ಸಿನಿಮಾ ರಂಗದಲ್ಲಿ ಏನಾಗುತ್ತದೆ ಅಂದರೆ, ಯಾರಾದರೂ ಹೊಸಬರು ಬಂದರೆ ಅವರನ್ನು ಬಳಸಿಕೊಳ್ಳುವ ಪರವಾನಗಿ ನಮ್ಮ ಬಳಿ ಇದೆ ಎಂದು ಕೆಲವರು ಭಾವಿಸುತ್ತಾರೆ ಎಂದು ಕಂಗನಾ ರಣಾವತ್​ ಭಾನುವಾರದ ಜಡ್ಜ್​ಮೆಂಟ್​ ಎಪಿಸೋಡ್​ ಸಮಯದಲ್ಲಿ ಹೇಳಿದರು.

    ಕಂಗನಾ ಅವರು ಇದೇ ಸಂದರ್ಭದಲ್ಲಿ ಮೀಟೂ ಅಭಿಯಾನವನ್ನು ಪ್ರಸ್ತಾಪಿಸಿದರು. ಉದ್ಯಮದಲ್ಲಿ ಪ್ರಮುಖ ಹೆಸರುಗಳನ್ನು ಬಹಿರಂಗಪಡಿಸಿದ ಎಲ್ಲಾ ಸಂತ್ರಸ್ತೆಯರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದರು. ಅಂದು ಹೊರಗಿನಿಂದ ಬಂದ ಹುಡುಗಿಯರೆಲ್ಲ ಇಂದು ಕಾಣುತ್ತಿಲ್ಲ. ನಾನು ಕೂಡ ಕೆಲವು ಸಂತ್ರಸ್ತ ಹುಡುಗಿಯರನ್ನು ಬೆಂಬಲಿಸಿದಾಗ ನನ್ನನ್ನು ಸಹ ಉದ್ಯಮದಿಂದ ನಿಷೇಧಿಸಲಾಯಿತು. ಆದ್ದರಿಂದ ದೌರ್ಜನ್ಯ ಎಂಬುದು ಸಾಮಾನ್ಯವಾಗಿದೆ ಮತ್ತು ಸಿನಿಮಾ ಮತ್ತು ಫ್ಯಾಷನ್ ಉದ್ಯಮದಲ್ಲಿ ಆಗಾಗ ಸಂಭವಿಸುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

    ತನಗಿಂತ 28 ವರ್ಷ ಕಿರಿಯ ವಯಸ್ಸಿನ ಮಹಿಳೆಯನ್ನು ವರಿಸಿದ 66ರ ಮಾಜಿ ಕ್ರಿಕೆಟಿಗ!

    ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

    10 ವರ್ಷಗಳ ಬಳಿಕ ಮಕ್ಕಳ ಮುಂದೆಯೇ ಮೂವರು ಮಹಿಳೆಯರನ್ನು ವರಿಸಿದ, ಮದುಮಗನ ಡ್ಯಾನ್ಸ್​ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts