More

    ಹೋಟೆಲ್​ನಲ್ಲಿ ಪರೋಟ ಮಾಡುವ ಕಾಯಕ: LLB ವಿದ್ಯಾರ್ಥಿನಿಯ ಲೈಫ್​ ಸ್ಟೋರಿಗೆ ಫಿದಾ ಆಗೋದು ಗ್ಯಾರೆಂಟಿ!

    ಕೊಟ್ಟಾಯಂ: ಹುಡುಗಿಯೊಬ್ಬಳು ಹೋಟೆಲ್​ವೊಂದರಲ್ಲಿ ಪರೋಟ ತಯಾರಿಸುತ್ತಾಳೆಂದು ಹೇಳಿದರೆ ಎಲ್ಲರಿಗೂ ಅಚ್ಚರಿಯಾಗದೇ ಇರದು. ಅದರಲ್ಲೂ ಎಲ್​ಎಲ್​ಬಿ ವಿದ್ಯಾರ್ಥಿನಿ ಈ ಕೆಲಸ ಮಾಡುತ್ತಿದ್ದಾಳೆಂದರೆ ನಂಬುವುದು ಕಷ್ಟವೇ. ಆದರೆ, ಇದು ನಿಜ. ಜೀವನ ನಿರ್ವಹಣೆಗಾಗಿ ಕೇರಳದ ವಿದ್ಯಾರ್ಥಿನಿ ಪರೋಟ ತಯಾರಿಸುವ ಕಾಯಕ ಮಾಡುತ್ತಿದ್ದು, ಇದೀಗ ಆಕೆ ಸಾಮಾಜಿಕ ಜಾಲತಾಣದ ತಾರೆಯಾಗಿ ಹೊರಹೊಮ್ಮಿದ್ದಾರೆ.

    ವಿದ್ಯಾರ್ಥಿನಿಯ ಹೆಸರು ಅನಸ್ವರಾ. ಕೇರಳದ ಎರುಮೆಲಿಯ ಕಂಜಿರಪಲ್ಲಿ ರಸ್ತೆಯಲ್ಲಿರುವ ಆರ್ಯ ಹೋಟೆಲ್​ನಲ್ಲಿ ಪರೋಟ ತಯಾರಿಸುವ ನಿತ್ಯದ ಕಾಯಕ ಮಾಡುತ್ತಿದ್ದು, ಈಕೆಯ ಲೈಫ್​ ಸ್ಟೋರಿ ವೈರಲ್​ ಆದ ಬಳಿಕ ಅನೇಕರು ಅನಸ್ವರಾಯೆಡೆಗೆ ತುಂಬಾ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತಿದ್ದಾರೆ.

    ಅನಸ್ವರಾ, ಎರುಮೆಲಿಯ ಕುರುವಮೋಳಿ ನಿವಾಸಿ. ಸಣ್ಣ ಹೋಟೆಲ್​ ಒಂದರ ಸಮೀಪ ಚಿಕ್ಕದಾದ ಮನೆಯಲ್ಲಿ ವಾಸವಿದ್ದಾರೆ.

    ತನ್ನ ಕಾಯಕದ ಬಗ್ಗೆ ಮಾತನಾಡಿರುವ ಅನಸ್ವರಾ, ಹೋಟೆಲ್​ ನಡೆಸುತ್ತಿರುವ ನನ್ನ ತಾಯಿ ಸುಬಿಗೆ ಸಹಾಯ ಮಾಡಲು ಪರೋಟ ಮಾಡಲು ಆರಂಭಿಸಿದೆ. ನಂತರದಲ್ಲಿ ಇದೇ ನನ್ನು ದಿನ ನಿತ್ಯದ ಕಾಯಕವಾಯಿತು. ಆರಂಭದಲ್ಲಿ ನಾನು ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಆದರೆ, ನಾನೀಗ ಸುಲಭವಾಗಿ ಪರೋಟ ತಯಾರಿಸುತ್ತೇನೆಂದು ಹೇಳಿದ್ದಾರೆ.

    ಇನ್ನು ಅನಸ್ವರಾ ಕೆಲಸಕ್ಕೆ ಆಕೆಯ ತಾಯಿ ಮತ್ತು ಆಂಟಿ ಸಹಾಯ ಮಾಡುತ್ತಾರಂತೆ. ಅನಸ್ವರಾ ತಂಗಿ ಮಾಳವಿಕಾ ಮತ್ತು ಅನಾಮಿಕಾ ಸಹ ಹೋಟೆಲ್​ನಲ್ಲಿ ಪರೋಟ ತಯಾರಿಸುವ ಕೆಲಸ ಮಾಡುತ್ತಾರೆ. ಇಬ್ಬರು ಸಹೋದರಿಯರಲ್ಲಿ ಒಬ್ಬಳು 6ನೇ ತರಗತಿ, ಮತ್ತೊಬ್ಬಳು 12 ತರಗತಿ ಓದುತ್ತಿದ್ದಾಳೆ.

    ಅನಸ್ವರಾ ಅವರ ಅಜ್ಜಿ ಈ ಹೋಟೆಲ್​ ಆರಂಭಿಸಿದರು. ನಂತರದಲ್ಲಿ ತಾಯಿ ಸುಬಿ ಮತ್ತು ಅವರ ಸಹೋದರಿ ಹೋಟೆಲ್​ ನಡೆಸುವ ಜವಬ್ದಾರಿ ವಹಿಸಿಕೊಂಡಿದ್ದು, ಅನಸ್ವರಾ ಮತ್ತು ಆಕೆಯ ಇಬ್ಬರು ಸಹೋದರಿಯರು ಮತ್ತು ಆಂಟಿಯ ಮಗ ಹೋಟೆಲ್​ ಕೆಲಸದಲ್ಲಿ ಸಕ್ರೀಯವಾಗಿದ್ದಾರೆ. ಹೋಟೆಲ್​ಗೆ ಹತ್ತಿರದಲ್ಲಿರುವ ಪೂರ್ವಜರ ಮನೆಯಲ್ಲಿ ಅನಸ್ವರಾ ಕುಟುಂಬ ವಾಸವಿದೆ.

    ಇನ್ನು ಅನಸ್ವರಾ ಸದ್ಯ ಅಂತಿಮ ವರ್ಷದ ಎಲ್​ಎಲ್​ಬಿ ವಿದ್ಯಾರ್ಥಿನಿಯಾಗಿದ್ದಾರೆ. ತೊಡಪುಳಾದ ಅಝರ್​ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

    ಆರಂಭದಲ್ಲಿ ನನ್ನ ಸ್ನೇಹಿತರು ನನ್ನನ್ನು ಪರೋಟ ಎಂದು ತಮಾಷೆಗೆ ಕರೆಯುತ್ತಿದ್ದರು. ನಾನು ಅದನ್ನು ಅವಮಾನ ಎಂದು ಅಂದುಕೊಳ್ಳಲೇ ಇಲ್ಲ. ನನ್ನ ಕಸುಬಿನ ಬಗ್ಗೆ ನನಗೆ ಯಾವಾಗಲೂ ಹೆಮ್ಮೆ ಇದೆ. ನನ್ನ ಕಸುಬೇ ನನಗೆಲ್ಲ. ಇದೀಗ ನನ್ನ ಸ್ನೇಹಿತರು ಸಹ ನನಗೆ ತುಂಬಾ ಬೆಂಬಲ ನೀಡುತ್ತಿದ್ದಾರೆ. ನನ್ನ ಕುರಿತಾದ ಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದಾಗಿನಿಂದ ಪ್ರತಿಯೊಬ್ಬರು ನನ್ನ ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅನೇಕರು ನನಗೆ ಬೆಂಬಲವಾಗಿ ನಿಂತಿದ್ದಾರೆಂದು ಅನಸ್ವರಾ ಹೇಳಿದರು.

    ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಲು ಕೆಲವೇ ದಿನಗಳ ಸಮಯವಿದೆ. ನಾನು ಲಾಯರ್​ ಆದ ನಂತರವೂ ಪರೋಟ ತಯಾರಿಸುವ ಕಾಯಕವನ್ನು ಮುಂದುವರಿಸುತ್ತೇನೆ. ನನ್ನ ವಿದ್ಯಾಭ್ಯಾಸಕ್ಕೆ ನನ್ನ ಕುಟುಂಬ ತುಂಬಾ ಬೆಂಬಲ ನೀಡುತ್ತಾರೆ. ಹೋಟೆಲ್​ ಕೆಲಸದ ಜತೆಯಲ್ಲೇ ನನ್ನ ವಿದ್ಯಾಭ್ಯಾಸವೂ ಸಹ ಸಾಗಿದೆ ಎಂದು ಅನಸ್ವಾರ ತಿಳಿಸಿದರು.

    ಲಾಕ್​ಡೌನ್​ನಿಂದಾಗಿ ನಮಗೆ ತುಂಬಾ ಸಮಸ್ಯೆ ಆಯಿತು. ಲಾಕ್​ಡೌನ್​ ಸಮಯದಲ್ಲಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ನಾನು ಕೆಲಸವನ್ನು ಬಿಟ್ಟೆ. ನನ್ನ ಪಾಕೆಟ್​ ಮನಿಗಾಗಿ ನಾನು ಟ್ಯೂಷನ್​ ಕ್ಲಾಸ್​ ತೆಗೆದುಕೊಳ್ಳುತ್ತಿದೆ. ಆದರೆ, ಈಗ ಹಣದ ಮೂಲಕ್ಕೆ ನಮ್ಮ ಆರ್ಯ ಹೋಟೆಲ್​ ಪ್ರಮುಖವಾಗಿದೆ ಎಂದು ಅನಸ್ವರಾ ತಿಳಿಸಿದರು.

    ಒಳ್ಳೆಯ ಕೆಲಸ ಮಾಡುವುದು ಅವಮಾನಕರ ಸಂಗತಿಯಲ್ಲ. ನಾನು ಕೆಲಸ ಮತ್ತು ಸನ್ನಿವೇಶಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸಂತೋಷದ ಜೀವನವನ್ನು ನಡೆಸಲು ಬಯಸುತ್ತೇನೆ. ನಾವು ದೂರುಗಳನ್ನು ನೀಡದೆ ಬದುಕುತ್ತಿದ್ದರೆ, ಜೀವನವು ನಿಮಗೆ ಸಂತೋಷ ಮತ್ತು ಶಾಂತಿಯನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆಂದು ಅನಸ್ವರಾ ಹೇಳಿದರು. (ಏಜೆನ್ಸೀಸ್​)

    ತೆರಿಗೆ ಕಟ್ಟಲು ದುಡ್ಡಿಲ್ಲ- ಜಾಲತಾಣದಲ್ಲಿ ದುಃಖ ತೋಡಿಕೊಂಡ ನಟಿ ಕಂಗನಾ ಏನು ಹೇಳಿದ್ದಾರೆ ನೋಡಿ…

    ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಐ ಡ್ರಾಪ್​ನಲ್ಲೇ ವಿಷ ಬೆರೆಸಿ ಸ್ನೇಹಿತೆಯನ್ನು ಕೊಂದ ಮಹಿಳೆ! ಕೊಲೆಗೂ ಮುನ್ನ ಮಾಡಿದ್ದು ಮಾಡಬಾರದ ಕೆಲಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts