More

    ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಹೀಗಿದೆ… ಕೆಜಿಎಫ್​-2 ಎಷ್ಟನೇ ಸ್ಥಾನದಲ್ಲಿದೆ?

    ಹೈದರಾಬಾದ್: ದಕ್ಷಿಣ ಭಾರತದ ಚಿತ್ರಗಳ ಆರ್ಭಟಕ್ಕೆ ಬಾಲಿವುಡ್​ ಕಂಗಾಲಾಗಿದೆ. ಹಿಂದೆ ಬಿಗ್​ಬಜೆಟ್​ ಸಿನಿಮಾಗಳಿಗೆ ಬಾಲಿವುಡ್​ ಹೆಸರಾಗಿತ್ತು. ಆದರೆ, ಈಗ ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ದಕ್ಷಿಣ ಭಾರತದ ಚಿತ್ರರಂಗ ಬಿಗ್​ಬಜೆಟ್​ ಜತೆ ವಿಭಿನ್ನ ಕಥಾಹಂರದ ಮೂಲಕ ಬಾಲಿವುಡ್​ಗೆ ಟಕ್ಕರ್​ ಕೊಡುತ್ತಿವೆ. ಬಾಲಿವುಡ್​ ಬಾಕ್ಸ್​ಆಫೀಸ್​ನಲ್ಲಿಯೂ ದಕ್ಷಿಣ ಭಾರತದ ಚಿತ್ರಗಳದ್ದೇ ಹವಾ ಜೋರಾಗಿದೆ. ಇದು ಹೀಗೆ ಮುಂದುವರಿದರೆ ಇಡೀ ಭಾರತೀಯ ಚಿತ್ರರಂಗವನ್ನು ದಕ್ಷಿಣ ಭಾರತದ ಚಿತ್ರರಂಗ ಆಳುವುದರಲ್ಲಿ ಸಂಶಯವೇ ಇಲ್ಲ.

    ಬಾಹುಬಲಿಯಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್​ ಚಾಪ್ಟರ್​ 2 ಚಿತ್ರದವರೆಗೂ ಎಲ್ಲ ಸಿನಿಮಾಗಳು ಬಾಲಿವುಡ್​ ಗಲ್ಲಾಪೆಟ್ಟಿಗೆಯನ್ನೂ ದೋಚಿವೆ. ಹಾಗಾದರೆ, ಇದುವರೆಗೂ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಹೀಗಿದೆ ನೋಡಿ….

    1. ಬಾಹುಬಲಿ-2: 1810 ಕೋಟಿ ರೂ.
    2. RRR: 1071 ಕೋಟಿ ರೂ.
    3. 2ಪಾಯಿಂಟ್0 : 709 ಕೋಟಿ ರೂ.
    4. ಬಾಹುಬಲಿ: 605 ಕೋಟಿ ರೂ.
    5. ಕೆಜಿಎಫ್: ಚಾಪ್ಟರ್​ 2 : ರೂ 500 ಕೋಟಿ (4 ದಿನಗಳು)
    6. ಸಾಹೋ: 435 ಕೋಟಿ ರೂ.
    7. ಪುಷ್ಪ: 360 ಕೋಟಿ ರೂ.
    8. ಬಿಗಿಲ್: 300 ಕೋಟಿ ರೂ.
    9. ಕಬಾಲಿ: 294 ಕೋಟಿ ರೂ.
    10. ರೋಬೋಟ್: 288 ಕೋಟಿ ರೂ.
    11. ಸರ್ಕಾರ್: 260 ಕೋಟಿ ರೂ.
    12. ಅಲಾ ವೈಕುಂಠಪುರಮುಲೂ: 256.35 ಕೋಟಿ ರೂ.
    13. ಮೆರ್ಸಲ್: 245 ಕೋಟಿ ರೂ.
    14. ಕೆಜಿಎಫ್‌ಸಿ ಚಾಪ್ಟರ್-1 : 242 ಕೋಟಿ ರೂ.
    15. ಐ: 240 ಕೋಟಿ ರೂ.
    16. ಸೈರಾ ನರಸಿಂಹ ರೆಡ್ಡಿ: 236.40 ಕೋಟಿ ರೂ.
    17. ಮಾಸ್ಟರ್: 236 ಕೋಟಿ ರೂ.
    18. ಪೆಟ್ಟಾ: 228 ಕೋಟಿ ರೂ.
    19. ಸರಿಲೇರು ನೀಕೆವ್ವರು : 223.05 ಕೋಟಿ ರೂ.
    20. ರಂಗಸ್ಥಳ: 216.70 ಕೋಟಿ ರೂ.
    21. ದರ್ಬಾರ್: 205 ಕೋಟಿ ರೂ.

    (ಸುದ್ದಿಮೂಲ : ಟಾಲಿವುಡ್​ ಡಾನ್​ ನೆಟ್​ ವೆಬ್​ಸೈಟ್​)

    ಪ್ರೇಕ್ಷಕರು ಕೆಜಿಎಫ್​ 2 ಅನ್ನೇ ಮರೆತುಬಿಡಬೇಕು.. ಪುಷ್ಪ ನಿರ್ದೇಶಕ ಸುಕುಮಾರ್ ಹಿಂದೆ ಬಿದ್ದ ಬನ್ನಿ ಫ್ಯಾನ್ಸ್​​

    ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

    BBMP ಕಸದ ಲಾರಿಗೆ ನಗರದಲ್ಲಿ ಮತ್ತೊಂದು ಬಲಿ: ಕೆಲ್ಸ ಮುಗಿಸಿ ಮನೆಗೆ ಬರ್ತಿದ್ದ SBI ಉದ್ಯೋಗಿ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts