More

    ಮಚ್ಚಿನಿಂದ ಕೊಚ್ಚಿ ಮುಳಬಾಗಲು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಕೋಲಾರದ ಜನತೆ!

    ಕೋಲಾರ: ಪ್ರಭಾವಿ ವ್ಯಕ್ತಿಯ ಭೀಕರ ಕೊಲೆಯಿಂದಾಗಿ ಕೋಲಾರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ದುಷ್ಕರ್ಮಿಗಳ ಗುಂಪೊಂದು ಕೋಲಾರ ಜಿಲ್ಲೆಯ ಮುಳಬಾಗಲು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮುಳಬಾಗಲು ನಗರದ ಮುತ್ಯಾಲಪೇಟೆಯಲ್ಲಿ ನಡೆದಿದೆ.

    ಜಗನ್ ಮೋಹನ್ ರೆಡ್ಡಿ ಕೊಲೆಯಾದ ನಗರಸಭೆ ಸದಸ್ಯ. ಈತ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬಲಗೈ ಬಂಟ. ಮಂಗಳವಾರ ಮುಂಜಾನೆ ಮನೆಯಿಂದ ಹೊರಬಂದ ಜಗನ್​ ಮೋಹನ್​ ರೆಡ್ಡಿಗಾಗಿ ನಾಲ್ಕೈದು ದುಷ್ಕರ್ಮಿಗಳು ಹೊಂಚು ಹಾಕಿ ಭೀಕರವಾಗಿ ಹತ್ಯೆ ಮಾಡಿ ಸ್ಕೂಟರ್​ನಿಂದ ಪರಾರಿಯಾಗಿದ್ದಾರೆ.

    ಘಟನಾ ಸ್ಥಳಕ್ಕೆ ಮುಳಬಾಗಲು ಡಿವೈಎಸ್​ಪಿ ಶ್ರೀನಿವಾಸಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

    Lays ಪ್ಯಾಕೆಟ್​ನಲ್ಲಿ ತುಂಬಿರೋ ಗಾಳಿ ಹಿಂದಿನ ರಹಸ್ಯ ಬಯಲು: ಪೆಪ್ಸಿಕೋ ಕಂಪನಿಗೆ ಬಿತ್ತು 85 ಸಾವಿರ ರೂ. ದಂಡ!

    ಈ ಬಿಕಿನಿ ಅವತಾರ ನೋಡಿ ಸಮಂತಾ ಮತ್ತೆ ಟ್ರೋಲ್​ ಆಗುವುದು ಖಂಡಿತ ಅಂತಿದ್ದಾರೆ ಫ್ಯಾನ್ಸ್​..!

    ವಿಂಡೋ ಸೀಟ್​ಗೆ ಕಿಚ್ಚ ಸುದೀಪ್ ಬಲ; ಶೀತಲ್ ಶೆಟ್ಟಿಯ ರೊಮ್ಯಾಂಟಿಕ್ ಥ್ರಿಲ್ಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts