More

    ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಈ ಇಬ್ಬರು ಆಟಗಾರರ ಮೇಲೆ ಹಚ್ಚಿದೆ ನಿರೀಕ್ಷೆ: ಸಂಜಯ್​ ಬಂಗಾರ್ ಅಭಿಪ್ರಾಯ​

    ನವದೆಹಲಿ: ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಸಿದ್ಧವಾಗುತ್ತಿದ್ದು, ಆತಿಥೇಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ವಿರುದ್ಧ ನಡೆದ ಅಭ್ಯಾಸ ಪಂದ್ಯಗಳಲ್ಲಿ ಭಾರತೀಯ ಆಟಗಾರರ ಪ್ರದರ್ಶನವನ್ನು ತಂಡದ ನಿರ್ವಾಹಕರು, ತಜ್ಞರು ಮತ್ತು ಅಭಿಮಾನಿಗಳು ತುಂಬಾ ಹತ್ತಿರದಿಂದ ನೋಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ರಾಹುಲ್​ ಮತ್ತು ಸೂರ್ಯಕುಮಾರ್​ ಅದ್ಭುತ ಪ್ರದರ್ಶನ ನೀಡಿದರು. ಅ.23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲೂ ಇದೇ ಆಟವನ್ನು ಮುಂದುವರಿಸಲಿದ್ದಾರೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಈ ಬಾರಿ ಐಸಿಸಿ ಟಿ20 ಪುರುಷ ವಿಶ್ವಕಪ್​ ಟ್ರೋಫಿ ಗೆಲುವ ಕನಸಿನೊಂದಿಗೆ ಕಳೆದ 15 ವರ್ಷಗಳ ಕಾಯುವಿಕೆಗೆ ತೆರೆ ಎಳೆಯಲು ಟೀಮ್​ ಇಂಡಿಯಾ ಎದುರು ನೋಡುತ್ತಿದೆ.

    ರಾಹುಲ್​ ಮತ್ತು ಸೂರ್ಯಕುಮಾರ್​ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್ ಮಾತನಾಡಿದ್ದು, ಇತ್ತೀಚೆಗಷ್ಟೇ ರಾಹುಲ್ ಪ್ರದರ್ಶನ ಅದ್ಭುತವಾಗಿದೆ. ರಾಹುಲ್​ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಗಳಿಸಿದ್ದಾರೆ. ಸುಲಭವಾಗಿ ರನ್​ ಗಳಿಸುತ್ತಿದ್ದು, ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಇದು ಟೀಮ್ ಇಂಡಿಯಾಕ್ಕೆ ತುಂಬಾ ಅನುಕೂಲಕರವಾಗಿದೆ ಎಂದರು.

    ಸೂರ್ಯಕುಮಾರ್ ಫಾರ್ಮ್ ಕುರಿತು ಮಾತನಾಡಿ, ಯಾದವ್​ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಪ್ರವಾಸದಲ್ಲಿದ್ದಾರೆ. ಯಾವುದೇ ಆಟಗಾರನಿಗೆ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬೇಕಾದ ಪ್ರಮುಖ ಅಂಶವೆಂದರೆ ವಿಕೆಟ್‌ನ ವೇಗ ಮತ್ತು ಬೌನ್ಸ್‌ಗೆ ಒಗ್ಗಿಕೊಳ್ಳುವುದು. ಹಾಗಾಗಿ, ಸೂರ್ಯಕುಮಾರ್ ಅವರಿಗೆ ಸ್ಪಿನ್ ಬೌಲರ್‌ಗಳು ಅಥವಾ ವೇಗಿಗಳನ್ನು ಎದುರಿಸಲು ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಯಾದವ್​ ಪ್ರಮುಖರಾಗಿದ್ದಾರೆ. ಇದರಿಂದ ವಿಶ್ವಕಪ್​ ಟೂರ್ನಿಯಲ್ಲಿ ಯಾದವ್​ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು. (ಏಜೆನ್ಸೀಸ್​)

    ಶಾಸಕ ಎಂ.ಬಿ. ಪಾಟೀಲ ಅವರ ಪತ್ನಿಯ ಫೇಸ್​ಬುಕ್ ಹ್ಯಾಕ್: ಕಿಡಿಗೇಡಿಗಳಿಂದ ಬಾಕ್ಸಿಂಗ್​ ವಿಡಿಯೋ ಅಪ್​ಲೋಡ್​

    ಆನ್​ಲೈನ್​ನಲ್ಲಿ ಸ್ಮಾರ್ಟ್​ಫೋನ್ ಬುಕ್​ ಮಾಡಿದ ವಿದ್ಯಾರ್ಥಿನಿ ಹಣಕ್ಕಾಗಿ ಹಿಡಿದ ದಾರಿ ನಿಜಕ್ಕೂ ಆಘಾತಕಾರಿ!

    ಯುವ ರೈಡರ್ ಭರತ್ ಭರ್ಜರಿ ಆಟ: ಜಯದ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts