More

    ಭಾರೀ ಮಳೆಗೆ ರಾಗಿ ಬೆಳೆ ನಾಶ: ಶುಲ್ಕ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದ ವಿದ್ಯಾರ್ಥಿಗೆ ಕಿಚ್ಚನ ನೆರವು

    ಬೆಂಗಳೂರು: ಅಭಿಮಾನಿಗಳ ಅಭಿಮಾನಿಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ತಮ್ಮ ಸಾಮಾಜಿಕ ಕಾರ್ಯಗಳಿಂದ ಅಭಿಮಾನಿಗಳ ಆರಾಧ್ಯ ದೈವವು ಆಗಿದ್ದಾರೆ. ತಾವೆಲ್ಲೂ ಕಾಣಿಸಿಕೊಳ್ಳದೇ ಅಭಿಮಾನಿಗಳನ್ನೇ ಮುಂದೆ ಬಿಟ್ಟು ಕಷ್ಟ ಎಂದವರಿಗೆ ಸಹಾಯ ಮಾಡುವುದು ಕಿಚ್ಚನ ದೊಡ್ಡ ಗುಣ ಎಂದರೆ ತಪ್ಪಾಗಲಾರದು. ನೊಂದವರ ಬಾಳಿಗೆ ದೀಪವಾಗಿ ಬೆಳಕು ನೀಡುವುದೇ ಸುದೀಪ್​ ಅವರ ಬಹು ದೊಡ್ಡ ಗುಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

    ಹೌದು. ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ನಟ ಕಿಚ್ಚ ಸುದೀಪ್ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗೆ 21 ಸಾವಿರ ರೂ. ಮೌಲ್ಯದ ಚೆಕ್ ತಲುಪಿಸಿದ್ದಾರೆ.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ತಾಲೂಕಿನ ಬೆಟ್ಟದಪುರ ಗ್ರಾಮದ ಜಿ.ಆರ್​. ಗಿರೀಶ್​ ಕುಮಾರ್​, ಹಾಸನದ ರಾಜೀವ್ ಗ್ರೂಪ್ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾರೆ. ಇತ್ತೀಚೆಗೆ ನಿರಂತರವಾಗಿ ಸುರಿದ ಬಾರಿ ಮಳೆಯಿಂದಾಗಿ ರಾಗಿ ಬೆಳೆ ನಷ್ಟ ಅನುಭವಿಸಿ, ತಮ್ಮ ಕಾಲೇಜು ಶುಲ್ಕ ಕಟ್ಟಲಾಗದೆ ಗಿರೀಶ್​ ಕಂಗಾಲಾಗಿದ್ದರು.

    ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರಿಂದ ಶುಲ್ಕ ಕಟ್ಟಲು ಹಣವಿಲ್ಲದೆ, ಪರೀಕ್ಷೆಯಲ್ಲಿ ಕೂರಲಾಗದ ಸ್ಥಿತಿಯಲ್ಲಿದ್ದರು. ಇದು ಕಿಚ್ಚ ಸುದೀಪ್​ ಚಾರಿಟಬಲ್​ ಟ್ರಸ್ಟ್​ ಗಮನಕ್ಕೆ ಬಂದು ಇದೀಗ ವಿದ್ಯಾರ್ಥಿಗೆ ಹಣ ನೀಡಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಟ್ರಸ್ಟ್​ ಅಧ್ಯಕ್ಷ ರಮೇಶ್​ ಕಿಟ್ಟಿ ಅವರು ಚೆಕ್​ ಅನ್ನು ವಿದ್ಯಾರ್ಥಿಗೆ ಹಸ್ತಾಂತರಿಸಿದ್ದಾರೆ.

    ಕರೊನಾ ಸಂಕಷ್ಟ ಕಾಲದಲ್ಲಿಯು ಕೂಡ ಸುದೀಪ್​ ಅವರ ಟ್ರಸ್ಟ್​ ಅನೇಕ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿತ್ತು. ಹಸಿದವರಿಗೆ ಕಿಚ್ಚನ ಕೈತುತ್ತ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಲ್ಲದೆ, ಆಕ್ಸಿಜನ್​ ಸಿಲಿಂಡರ್​ ಒದಗಿಸಿಕೊಟ್ಟಿತ್ತು. ಅನೇಕರಿಗೆ ದವಸ ಧಾನ್ಯಗಳನ್ನು ಪೂರೈಸಿತ್ತು. ಅಲ್ಲದೆ, ಕಿಚ್ಚ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸಾಕಷ್ಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹೀಗಾ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. (ದಿಗ್ವಿಜಯ ನ್ಯೂಸ್​)

    ದುಬಾರಿ ಟೊಮ್ಯಾಟೊಗೆ ಗೌರಿಬಿದನೂರಲ್ಲಿ ಇಬ್ಬರು ಬಲಿ! ತೋಟದಲ್ಲೇ ನಡೀತು ಘೋರ ಕೃತ್ಯ, ಇಲ್ಲಿ ಯಾರದ್ದು ತಪ್ಪು?

    ಸಮಂತಾ ಜತೆ ಡಿವೋರ್ಸ್​ ಬಳಿಕ ನಾಗಚೈತನ್ಯ-ಶ್ರುತಿ ಹಾಸನ್​ ಕುರಿತು ಹರಿದಾಡ್ತಿದೆ ಈ ಸುದ್ದಿ!

    VIDEO| ಬರ್ತ್​ಡೇ ಪಾರ್ಟಿಗೆ ಟ್ರ್ಯಾಕ್ಟರ್​ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts