More

    ಪಿಂಚಣಿ ಹಣದಲ್ಲಿ ಜೀವನ ದೂಡುತ್ತಿರುವ ವದ್ಧನಿಗೆ GST ನೋಟಿಸ್​: ತೆರಿಗೆ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

    ಪೆರುಂಬವೂರ್​: ನಮ್ಮ ದೇಶದ ಸರ್ಕಾರಿ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಕೇರಳದ ಪೆರುಂಬವುರ್​ನಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ. ಪಿಂಚಣಿ ಹಣದಲ್ಲಿ ಬದುಕುತ್ತಿರುವ ಹಿರಿಯ ನಾಗರಿಕರೊಬ್ಬರಿಗೆ ಜಿಎಸ್​ಟಿ ನೋಟಿಸ್​ ಬಂದಿರುವುದು ನಿಜಕ್ಕೂ ಶೋಚನಿಯ ಸಂಗತಿಯೇ ಸರಿ.

    ಬರೋಬ್ಬರಿ 5,97,439 ಲಕ್ಷ ರೂಪಾಯಿ ಜಿಎಸ್​ಟಿ ಪಾವತಿಸುವಂತೆ ನೋಟಿಸ್​ ಕಳುಹಿಸಲಾಗಿದೆ. ನೋಟಿಸ್​ ಸ್ವೀಕರಿಸಿದ ರಾಜನ್​ (75) ಅದರಲ್ಲಿರುವ ಜಿಎಸ್​ಟಿ ಮೊತ್ತ ನೋಡಿ ಒಮ್ಮೆ ಶಾಕ್​ ಆಗಿದ್ದಾರೆ.

    ಮೂರು ವರ್ಷಗಳ ಹಿಂದೆ ರಾಜನ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ನಕಲಿ ಮಾಡಿ ‘ಭವಾನಿ ವುಡ್ ಪ್ರಾಡಕ್ಟ್ಸ್’ ಹೆಸರಿನಲ್ಲಿ ಕಂಪನಿಯನ್ನು ನೋಂದಾಯಿಸಲಾಗಿದೆ ಎಂಬುದು ಬಹಿರಂಗವಾಗಿದೆ. ಮುವಾಟ್ಟುಪುಳ ಕೇಂದ್ರ ತೆರಿಗೆ ಮತ್ತು ಕೇಂದ್ರ ಅಬಕಾರಿ ಕಚೇರಿಯಲ್ಲಿ ಜಿಎಸ್‌ಟಿ ನೋಂದಣಿಯಾಗಿದೆ. ರಾಜನ್ ಹೆಸರಿಗೆ ಕಂಪನಿಯೊಂದು ನೋಂದಣಿಯಾಗಿದ್ದು, ಮೂರು ವರ್ಷಗಳಲ್ಲಿ ಕಂಪನಿಯ ಅಡಿಯಲ್ಲಿ ಕೋಟಿಗಟ್ಟಲೆ ವಹಿವಾಟು ನಡೆದಿರುವುದು ನೋಟಿಸ್ ಬಂದ ನಂತರವೇ ಗೊತ್ತಾಗಿದೆ.

    ಬಡಗಿಯಾಗಿದ್ದ ರಾಜನ್ ವಯೋಸಹಜ ಕಾಯಿಲೆಗಳಿಂದ ವಿಶ್ರಾಂತಿಯಲ್ಲಿದ್ದಾರೆ. 7 ಸೆಂಟ್ಸ್ ಜಮೀನಿನಲ್ಲಿ ನಿರ್ಮಿಸಿರುವ ಹಳೆಯ ಮನೆಯಲ್ಲಿ ಪತ್ನಿ ತಂಕಮ್ಮ ಜತೆ ವಾಸವಾಗಿದ್ದಾರೆ. ಇದೀಗ ನೋಟಿಸ್​ ನೋಡಿ ಶಾಕ್​ ಆಗಿರುವ ರಾಜನ್​, ಇದರ ಹಿಂದಿರುವ ವಂಚಕನನ್ನು ಪತ್ತೆ ಹಚ್ಚುವಂತೆ ಮುಖ್ಯಮಂತ್ರಿ ಹಾಗೂ ಗ್ರಾಮಾಂತರ ಎಸ್ಪಿಗೆ ದೂರು ನೀಡಿದ್ದಾರೆ.

    ಈ ಹಿಂದೆ ಪೆರುಂಬವೂರು ಪ್ರದೇಶದಲ್ಲಿ ಟಿಂಬರ್ ಮತ್ತು ಪ್ಲೈವುಡ್ ಕಂಪನಿಗಳು ಅಮಾಯಕರು ಮತ್ತು ಬಡ ಕಾರ್ಮಿಕರ ಹೆಸರಿನಲ್ಲಿ ಭಾರಿ ತೆರಿಗೆ ವಂಚನೆಯಲ್ಲಿ ತೊಡಗಿದ್ದವು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಕೊರಗಜ್ಜನ ವೇಷ ಧರಿಸಿ ಮದ್ವೆ ಮನೇಲಿ ಡಾನ್ಸ್​, ಇಬ್ಬರ ಬಂಧನ: ಆರೋಪಿ ಬಿಡುಗಡೆಗೆ ಒತ್ತಡ ಏರಿದ್ದ ಬಿಜೆಪಿ ಮುಖಂಡ ಅಮಾನತು

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ಗೆ ಕರೊನಾ ಪಾಸಿಟಿವ್​, ಐಸಿಯುನಲ್ಲಿ ಚಿಕಿತ್ಸೆ

    ನನ್ನ ಬೈಯೋಕ್ಕೆ ಆಗಲ್ಲ, ಟ್ರೋಲ್​ ಮಾಡಿ ಖುಷಿಪಡ್ತಿದ್ದಾರೆ.. ಅವರಿಗೆ ನಾನೇ ಟಾರ್ಗೆಟ್ ಎನ್ನುತ್ತಲೇ ಮಹತ್ತರ ವಿಷ್ಯ ಬಿಚ್ಚಿಟ್ಟ ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts