More

    ಹಿರಿಯ ನಾಗರಿಕಗೆ 3.52 ಲಕ್ಷ ರೂ. ವಂಚನೆ

    ಶಿವಮೊಗ್ಗ: ಆನ್‌ಲೈನ್‌ನಲ್ಲಿ ಖರೀದಿಸಿದ್ದ ಜೀನ್ಸ್ ಪ್ಯಾಂಟ್‌ಗಳು ಗುಣಮಟ್ಟದ್ದಲ್ಲ ಎಂದು ಹಿಂದಿರುಗಿಸಲು ಮುಂದಾದ ಸಾಗರದ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.52 ಲಕ್ಷ ರೂ. ಕಳೆದುಕೊಂಡಿದ್ದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಸಾಗರ ತಾಲೂಕಿನ ನಿವೃತ್ತ ಉದ್ಯೋಗಿ ಹಣ ಕಳೆದುಕೊಂಡವರು. ಫೇಸ್‌ಬುಕ್‌ನಲ್ಲಿ ಕಾಣಿಸಿದ ಆನ್‌ಲೈನ್ ಮಾರ್ಕೆಟಿಂಗ್ ಪೇಜ್ ಮೂಲಕ ಪ್ಯಾಂಟ್‌ಗಳನ್ನು ಖರೀದಿಸಿದ್ದರು. ಕೊರಿಯರ್ ಮೂಲಕ ಪ್ಯಾಂಟುಗಳು ಮನೆಗೆ ತಲುಪಿದ್ದವು. ಆದರೆ ಪ್ಯಾಂಟುಗಳ ಗುಣಮಟ್ಟ ಸರಿ ಇಲ್ಲದ ಕಾರಣ ಆನ್‌ಲೈನ್‌ನಲ್ಲಿದ್ದ ಕಸ್ಟಮರ್ ಕೇರ್‌ಗೆ ಸಂಪರ್ಕಿಸಿದ್ದರು.
    ಹಣ ರೀಫಂಡ್ ಮಾಡುವುದಾಗಿ ತಿಳಿಸಿದ್ದ ಕಸ್ಟಮರ್ ಕೇರ್‌ನ ವ್ಯಕ್ತಿ, ನಿವೃತ್ತ ಉದ್ಯೋಗಿಯ ಆಧಾರ್ ಕಾರ್ಡ್ ಸೇರಿ ವಿವಿಧ ಮಾಹಿತಿ ಪಡೆದಿದ್ದ. ಹಿರಿಯ ನಾಗರಿಕ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ 3.52 ಲಕ್ಷ ರೂ. ಖಾಲಿಯಾಗಿತ್ತು. ಕೂಡಲೇ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ದೂರು ನೀಡಿದ್ದಾರೆ. ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts