More

    ಹಿರಿಯ ನಾಗರಿಕರ ಸಂಘದಿ೦ದ ಪ್ರತಿಭಟನೆ

    ಧಾರವಾಡ: ಹಿರಿಯ ನಾಗರಿಕರ ದೌರ್ಜನ್ಯ ಕಾಯ್ದೆಯ ಮಾದರಿಯಲ್ಲಿ ವಿಶೇಷ ಕಾನೂನು ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ನಿವೃತ್ತರ ಸಂಘದ ವತಿಯಿಂದ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಸರ್ಕಾರಿ ಹಾಗೂ ವೈದ್ಯಕೀಯ ವಿಜ್ಞಾನ ಕಾಲೇಜ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಉಚಿತ ಚಿಕಿತ್ಸಾ ವಿಭಾಗ ಸ್ಥಾಪನೆ, ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರ ಸಮಿತಿ ರಚನೆ, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಪ್ರಮುಖ ಸ್ಥಳಗಳಲ್ಲಿ ಹಿರಿಯ ನಾಗರಿಕರ ಭವನ ಸ್ಥಾಪನೆ, ಹಿರಿಯ ನಾಗರಿಕರ ಸಂಘ- ಸಂಸ್ಥೆಗಳಿಗೆ ಸರ್ಕಾರದ ಅನುದಾನ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಿದರು.
    ಮಾಜಿ ಶಾಸಕ ಚಂದ್ರಕಾAತ ಬೆಲ್ಲದ, ನಿವೃತ್ತ ಜಿಲ್ಲಾ ನ್ಯಾಯÁಽÃಶ ಎಸ್.ಎಚ್. ಮಿಟ್ಟಲಕೋಡ, ಎಂ.ಡಿ. ಪಾಟೀಲ, ಬಿ.ಎಂ. ಸೂರಗೊಂಡ, ವಿ.ಬಿ. ಮತ್ತೂರ, ಬಸವರಾಜ ಪಾಟೀಲ, ಈಶ್ವರಲಿಂಗ ಶಿವಳ್ಳಿ, ಅಕ್ಕಮಹಾದೇವಿ ತೇಲಿ, ಉಮಾ ಅಗಡಿ, ಶಿವಗಂಗವ್ವ ಬುದ್ನಿ, ಮಹಾದೇವಿ ನೀಲವಾಣಿ, ಬಸವ್ವ ಲಗಮಣ್ಣವರ, ಮಲ್ಲವ್ವ ಭಜಂತ್ರಿ, ಪಾರಮ್ಮ ಲಗಮಣ್ಣವರ ಹಾಗೂ ವಿವಿಧ ಗ್ರಾಮಗಳ ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts