More

    ಸಮಂತಾ ತೊಟ್ಟ ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​ ಬೆಲೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ!

    ಹೈದರಾಬಾದ್​: ಟಾಲಿವುಡ್​ ಸ್ಟಾರ್​ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದಾಗಿನಿಂದ ನಟಿ ಸಮಂತಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನಾವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್​ ಏನೇ ಮಾಡಿದರೂ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಸ್ಯಾಮ್​ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಹಾಟ್​ ಡ್ರೆಸ್​ ಎಲ್ಲರ ಗಮನ ಸೆಳೆದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಕಾರ್ಯಕ್ರಮದಲ್ಲಿ ಸಮಂತಾ “ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​” ಧರಿಸಿದ್ದರು. ಎದೆ ಸೀಳು ಕಾಣುವಂತಹ ಡ್ರೆಸ್​ನಲ್ಲಿ ತುಂಬಾ ಬೋಲ್ಡ್​ ಆಗಿ ಸಮಂತಾ ಕಾಣುತ್ತಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಸಮಂತಾರ ಹಸಿರುಮಯವಾದ ಹಾಟ್​ ಲುಕ್ ಫೋಟೋಗಳೇ ಕಾಣಿಸುತ್ತಿವೆ.

    ಸಮಂತಾ ತೊಟ್ಟ ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​ ಬೆಲೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ!

    ಸಮಂತಾ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲೂ ಸಹ ಇದೇ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, 20 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ. ಸಮಂತಾ ಧರಿಸಿದ್ದು, ಬಿಕಿನಿ ಕಟ್ ಹೈ ವೇಸ್ಟ್ ಫಿಟೆಡ್ ಡ್ರೆಸ್. ಈ ಧಿರಿಸು ನೂಡಲ್ ಸ್ಟ್ರಾಪ್‌ಗಳು, ಸೀಕ್ವಿನ್ಡ್ ಎಂಬ್ರಾಯ್ಡರಿ ಪ್ಯಾಚ್‌ಗಳು ಸೇರಿದಂತೆ ಅನೇಕ ಫೀಚರ್​ಗಳನ್ನು ಸೇರಿಸಿ ವಿನ್ಯಾಸ ಮಾಡಲಾಗಿದೆ. ಈ ಉಡುಗೆಯನ್ನು ಸಮಂತಾರ ಡಿಸೈನರ್​ ಪ್ರೀತಂ ಝುಕಲ್ಕರ್ ಸಿದ್ಧಪಡಿಸಿದ್ದಾರೆ.

    ತುಂಬಾ ವಿಭಿನ್ನವಾಗಿ ಮತ್ತು ಸಖತ್​ ಹಾಟ್​ ಆಗಿ ಕಾಣುತ್ತಿದ್ದ ಸಮಂತಾರ ಫೋಟೋ ನೋಡಿ ಈ ಉಡುಗೆಯ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿತ್ತು. ಇದೀಗ ಉತ್ತರ ಸಿಕ್ಕಿದ್ದು, ಡಿಸೈನರ್​ಗಳಾದ ಗೌರಿ ಮತ್ತು ನೈನಿಕಾ ಅವರ ಫ್ಯಾಷನ್ ಲೇಬಲ್‌ನ ಕಪಾಟಿನಿಂದ ಹೊರಬಂದಂತಹ ಈ ಹಾಟ್​ ಡ್ರೆಸ್​ನ ಬೆಲೆ ತಲೆ ತಿರುಗಿಸುವಂತಿದೆ. ಈ ಬಿಕಿನಿ ಕಟ್​ ಬಾಟಲ್​ ಗ್ರೀನ್ ಗೌನ್​​ ಬೆಲೆ ಬರೋಬ್ಬರಿ 1.80 ಲಕ್ಷ ರೂಪಾಯಿ ಆಗಿದ್ದು, ಬೆಲೆ ಕೇಳಿದವರು ಬಾಯಿ ಮೇಲೆ ಬೆರಳಿಡುವಂತಿದೆ.

    ಸಮಂತಾ ತೊಟ್ಟ ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​ ಬೆಲೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ!

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಗುಣಶೇಖರ್​ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರೊಂದಿಗೆ ತಮಿಳು ಮತ್ತು ತೆಲುಗು ದ್ವಿಭಾಷಾ ಸಿನಿಮಾ ಯಶೋಧಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್​ಗೂ ಪದಾರ್ಪಣೆ ಮಾಡಿರುವ ಸಮಂತಾ ಫಿಲಿಪ್​ ಜಾನ್​​ ನಿರ್ದೇಶನದ ಅರೆಂಜ್​ಮೆಂಟ್ಸ್​ ಆಫ್​ ಲವ್​ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. (ಏಜೆನ್ಸೀಸ್​)

    ಹಾಟ್​​​ ಡ್ರೆಸ್​ ನೋಡಿ ತಮ್ಮ ಮೇಲೆ ಮುಗಿಬಿದ್ದ ವಿರೋಧಿಗಳಿಗೆ ಸಮಂತಾ ಕೊಟ್ಟ ಮಾತಿನ ಪಂಚ್​ ಹೀಗಿದೆ…

    ರಹಸ್ಯವಾಗಿ ಮದ್ವೆಯಾದ ನಯನತಾರಾ-ವಿಘ್ನೇಶ್ ಶಿವನ್​: ದೇವಸ್ಥಾನದಲ್ಲೇ ಹೊರಬಿತ್ತು ಮಹತ್ವದ ಸುಳಿವು!

    ಅಭಿಮಾನಿಗಳು ಅಪ್ಪಲಿ ಎಂದೇ ಬಿಡುಗಡೆ ಆಗಲಿದೆ ಅಂದು ಅಪ್ಪು ಬೇಡ ಎಂದಿದ್ದ ಹಾಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts