More

    48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಕಾಟ್​ಲೆಂಡ್​ನಲ್ಲಿ ಸಿಕ್ಕಿಬಿದ್ದ ಭಾರತೀಯ ಮೂಲದ ವೈದ್ಯ

    ಲಂಡನ್​: ಕಳೆದ 35 ವರ್ಷದ ಸುಮಾರು 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಭಾರತೀಯ ಮೂಲದ ಸ್ಕಾಟ್​ಲೆಂಡ್​ನ 72 ವರ್ಷದ ವೈದ್ಯ ಗುರುವಾರ ತಪ್ಪೊಪ್ಪಿಕೊಂಡಿದ್ದಾರೆ.

    ಆರೋಪಿ ಹೆಸರು ಕೃಷ್ಣ ಸಿಂಗ್​. ಈತ ಸ್ಕಾಟ್​ಲೆಂಡ್​ನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಹಿಳಾ ರೋಗಿಗಳಿಗೆ ಚುಂಬಿಸುವುದು, ಮೈ-ಕೈ ಮುಟ್ಟುವುದು, ಸೂಕ್ತವಲ್ಲದ ಪರೀಕ್ಷೆ ಹಾಗೂ ಅಶ್ಲೀಲ ಕಾಮೆಂಟ್​ಗಳನ್ನು ಮಾಡುವುದು ಸೇರಿ ಹಲವು ಆರೋಪಗಳು ಕೃಷ್ಣ ಸಿಂಗ್​ ಮೇಲಿದೆ. ಗ್ಲಾಸ್ಗೋದಲ್ಲಿರುವ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

    1983 ಮತ್ತು 2018ರ ನಡುವಿನ ಸಮಯದಲ್ಲಿ ಕೃತ್ಯಗಳನ್ನು ಎಸಗಿರುವುದಾಗಿ ಸ್ಕಾಟ್​ಲೆಂಡ್​ನ ಮಾಧ್ಯಮಗಳು ವರದಿ ಮಾಡಿವೆ. ನಾರ್ಥ್​ ಲನಾರ್ಕ್​ಶೈರ್​ನಲ್ಲಿ ವೈದ್ಯರಾಗಿದ್ದಾಗ ಹೆಚ್ಚು ಕೃತ್ಯಗಳನ್ನು ಅಲ್ಲಿಯೇ ಮಾಡಿದ್ದಾರೆ. ಅಲ್ಲದೆ, ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ಪೊಲೀಸ್​ ಠಾಣೆ ಹಾಗೂ ರೋಗಿಗಳ ಮನೆಗೆ ಭೇಟಿ ನೀಡಿದಾಗಲೆಲ್ಲ ಕೃತ್ಯಗಳನ್ನು ಕೃಷ್ಣ ಸಿಂಗ್​ ಎಸಗಿರುವ ಆರೋಪ ಕೇಳಿಬಂದಿದೆ.

    ಡಾ.ಸಿಂಗ್ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡುವುದನ್ನೇ ರೂಢಿ ಮಾಡಿಕೊಂಡಿದ್ದರು. ಕೆಲವೊಮ್ಮೆ ಸೂಕ್ಷ್ಮವಾದ ಅಥವಾ ಮರೆಮಾಚುವ, ಇನ್ನು ಕೆಲವೊಮ್ಮೆ ಸ್ಪಷ್ಟವಾಗಿ ಎದ್ದುಕಾಣುವ ಲೈಂಗಿಕ ಕೃತ್ಯವನ್ನು ರೋಗಿಯ ಮೇಲೆ ಎಸಗಿದ್ದಾರೆ. ಲೈಂಗಿಕ ಶೋಷಣೆಯು ಸಿಂಗ್​ ವೃತ್ತಿ ಜೀವನದ ಭಾಗವೇ ಆಗಿತ್ತು ಎಂದು ಪ್ರಾಸಿಕ್ಯೂಟರ್ ಏಂಜೆಲಾ ಗ್ರೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಇನ್ನು ಸಿಂಗ್ ಅವರನ್ನು ವೈದ್ಯಕೀಯ ಸಮುದಾಯದ ಗೌರವಾನ್ವಿತ ಸದಸ್ಯರಾಗಿ ನೋಡಲಾಗಿದೆ. ಏಕೆಂದರೆ, ವೈದ್ಯಕೀಯ ಸೇವೆಯಲ್ಲಿ ಅವರ ಕೊಡುಗೆಗಾಗಿ ರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವವನ್ನು ಸಹ ನೀಡಲಾಗಿದೆ.

    ಓರ್ವ ಸಂತ್ರಸ್ತ ಮಹಿಳಾ ರೋಗಿ 2018ರಲ್ಲಿ ತನ್ನ ಮೇಲಿನ ದೌರ್ಜನ್ಯದ ವಿರುದ್ಧ ದೂರು ನೀಡಿದಾಗ, ಸಿಂಗ್​ ವಿರುದ್ಧ ತನಿಖೆ ನಡೆದ ಬಳಿಕ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಪಿ ಸಿಂಗ್​ ವಿರುದ್ಧ 54 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳು ಹೆಚ್ಚಾಗಿ ಲೈಂಗಿಕ ಮತ್ತು ಅಸಭ್ಯ ವರ್ತನೆಯನ್ನು ಒಳಗೊಂಡಿವೆ.

    ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮುಂದಿನ ತಿಂಗಳವರೆಗೆ ಶಿಕ್ಷೆಯನ್ನು ಮುಂದೂಡಿದ್ದಾರೆ. ಅಲ್ಲಿಯವರೆಗೆ ಪಾಸ್‌ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸುವ ಹೇಳಿದ್ದು, ಷರತ್ತುಬದ್ಧ ಜಾಮೀನು ನೀಡಿದೆ. (ಏಜೆನ್ಸೀಸ್​)

    ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್​ಗೆ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ! ಗ್ರಾಹಕರು ಫುಲ್​ ಖುಷ್​

    ರಾಮಾಯಣದ ದೈವಿಕ ಪಕ್ಷಿ ಜಟಾಯು ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿತಾ? ವಿಡಿಯೋದ ಅಸಲಿಯತ್ತು ಇಲ್ಲಿದೆ

    ಕೆಜಿಎಫ್​-2 ಚಿತ್ರತಂಡಕ್ಕೆ ಕೃತಜ್ಞತೆ ಇಲ್ಲವೇ? ನೀವು ಮಾಡಿದ್ದು ಸರಿನಾ ಎಂಬುದು ಕೆಜಿಎಫ್​ ಜನರ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts