More

    ನಕಲಿ ಸಿಮ್ ನೆಪದಲ್ಲಿ ವೈದ್ಯೆಗೆ 19.41 ಲಕ್ಷ ಧೋಖಾ

    ಬೆಂಗಳೂರು: ‘ನಿಮ್ಮ ಹೆಸರಿನಲ್ಲಿ ಹಲವು ಮೊಬೈಲ್ ಸಿಮ್‌ಗಳು ಇದ್ದು, ಅಶ್ಲೀಲ ವಿಡಿಯೋ ಮತ್ತು ದೇಶವಿರೋಧಿ ಸಂದೇಶ ವೈರಲ್ ಆಗುತ್ತಿದೆ’ ಎಂಬುದಾಗಿ ಅಮಾಯಕರಿಗೆ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಸೈಬರ್ ಕಳ್ಳರು ವಂಚಿಸುತ್ತಿದ್ದಾರೆ. ಇತ್ತೀಚೆಗೆ ವೈದ್ಯೆಯೊಬ್ಬರಿಗೆ ಕರೆ ಮಾಡಿರುವ ಸೈಬರ್ ಖದೀಮರು, ಬ್ಲ್ಯಾಕ್‌ಮೇಲ್ ಮಾಡಿ 19.41 ಲಕ್ಷ ರೂ. ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.

    ಉತ್ತರಹಳ್ಳಿಯ ಚಿಕ್ಕಕಲ್ಲಸಂದ್ರದ 35 ವರ್ಷದ ವೈದ್ಯೆ, ಈ ಕುರಿತು ದಕ್ಷಿಣ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
    ಮಾ.28ರಂದು ವೈದ್ಯೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ‘ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆ್ ಇಂಡಿಯಾ (ಟಿಆರ್‌ಎಐ) ಕಚೇರಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಆಧಾರ್‌ನಲ್ಲಿ ಹಲವು ಮೊಬೈಲ್ ಸಿಮ್ ಕಾರ್ಡ್ ಆ್ಯಕ್ಟೀವ್ ಆಗಿವೆ. ಅದರಿಂದ 35 ನಿಂದನೆ ಮತ್ತು ಅಶ್ಲೀಲ ವಿಡಿಯೋ, ದೇಶವಿರೋಧಿ ಸಂದೇಶಗಳು ವೈರಲ್ ಆಗುತ್ತಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದಿದ್ದ. ಗಾಬರಿಗೊಂಡ ವೈದ್ಯೆ, ನನ್ನ ಬಳಿ ಒಂದೇ ಸಿಮ್ ಇರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಳು. ಅದಕ್ಕೆ ಅಪರಿಚಿತ ವ್ಯಕ್ತಿ, ಎ್ಐಆರ್ ನಂಬರ್ ಕೊಟ್ಟು, ‘ಮುಂಬೈ ಪೊಲೀಸರು ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಅವರೊಂದಿಗೆ ಸಂಭಾಷಣೆ ಮಾಡಿ’ ಎಂದು, ಮುಂಬೈ ಇನ್‌ಸ್ಪೆಕ್ಟರ್ ಎಂದು ಹೇಳಿ ನಂಬರ್ ಕೊಟ್ಟು ಜತೆಗೆ ಸ್ಕೈಪ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚನೆ ಕೊಟ್ಟು ಕರೆ ಸ್ಥಗಿತ ಮಾಡಿದ್ದ.

    ವೈದ್ಯೆ, ಅಪ್ಲೀಕೇಷನ್ ಡೌನ್‌ಲೋಡ್ ಮಾಡಿಕೊಂಡು ಅಪರಿಚಿತ ವ್ಯಕ್ತಿ ಹೇಳಿದಂತೆ ವಿಡಿಯೋ ಕಾಲ್ ಮಾಡಿದಾಗ ಮುಂಬೈ ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡು ಸಂಭಾಷಣೆ ಮಾಡಿದ್ದ. ವೈದ್ಯೆಯಿಂದ ಆಧಾರ್ ಕಾರ್ಡ್ ೆಟೋ ತರಿಸಿಕೊಂಡು ಸ್ವಲ್ಪ ಹೊತ್ತಾದ ಮೇಲೆ ‘ನಿಮ್ಮ ಆಧಾರ್‌ನಲ್ಲಿ ಹಲವು ಹವಾಲಾ ದಂಧೆ ನಡೆದಿದೆ. ಈ ಕುರಿತು ಹಲವು ಪ್ರಕರಣಗಳು ದಾಖಲಾಗಿವೆ. ನಿಮ್ಮನ್ನು ಬಂಧಿಸಲು ಸಿಐಡಿ ಪೊಲೀಸರು ಬರಲಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ವರ್ಚುವಲ್ ವಿಚಾರಣೆ ನಡೆಸಬೇಕಾಗಿದೆ. ಅದಕ್ಕೆ ಸ್ಪಂದಿಸಿದರೆ ಇಲ್ಲಿಂದಲೇ ವಿಚಾರಣೆ ನಡೆಸುತ್ತೇವೆ’ ಎಂದು ಭರವಸೆ ಕೊಟ್ಟಿದ್ದ. ಅದಕ್ಕೆ ಒಪ್ಪಿಕೊಂಡ ವೈದ್ಯೆಗೆ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಆರ್‌ಬಿಐ ಖಾತೆಗೆ ವರ್ಗಾವಣೆ ಮಾಡಬೇಕು. ತನಿಖೆ ಪೂರ್ಣವಾದ ಮೇಲೆ ವಾಪಸ್ ಬರಲಿದೆ ಎಂದು ನಂಬಿಸಿದ್ದ.

    ಬಂಧನ ಭೀತಿಯಿಂದ ವೈದ್ಯೆ, ತನ್ನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ಆರೋಪಿಗಳು ಕೊಟ್ಟ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 19.41 ಲಕ್ಷ ರೂ. ಜಮೆ ಮಾಡಿದ್ದರು. ನಂತರ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ದಿಕ್ಕು ತೋಚದೆ ವೈದ್ಯೆ, ಕೊನೆಗೆ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts