More

    ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್​ಗೆ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ! ಗ್ರಾಹಕರು ಫುಲ್​ ಖುಷ್​

    ಪುಣೆ: ಇಂಧನ ದರ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್​ 14ರ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿಯ ಅಂಗವಾಗಿ ಮಹಾರಾಷ್ಟ್ರದ ಸ್ಥಳೀಯ ಸಂಘಟನೆಯೊಂದು 500 ಮಂದಿಗೆ ಪ್ರತಿ ಲೀಟರ್​ಗೆ ಕೇವಲ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಈ ವಿನೂತನ ಪ್ರಸಂಗ ಮಹಾರಾಷ್ಟ್ರ ಸೊಲ್ಲಾಪುರ ನಗರದಲ್ಲಿ ನಡೆದಿದೆ. ಪ್ರತಿ ಖರೀದಿದಾರರನಿಗೆ ಕೇವಲ ಒಂದು ಲೀಟರ್​ ಪೆಟ್ರೋಲ್​ ಅನ್ನು 1 ರೂಪಾಯಿಗೆ ನೀಡಿದ್ದಾರೆ. ಇದರಿಂದ ನಿನ್ನೆ ಪೆಟ್ರೋಲ್​ ಬಂಕ್​ನಲ್ಲಿ ಭಾರೀ ಕ್ಯೂ ನಿರ್ಮಾಣವಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

    ಈ ವಿನೂತನ ಪ್ರತಿಭಟನೆಯನ್ನು ಡಾ. ಬಿ.ಆರ್​. ಅಂಬೇಡ್ಕರ್​ ವಿದ್ಯಾರ್ಥಿ ಮತ್ತು ಯುವ ಪ್ಯಾಂಥರ್ಸ್​ ಸಂಘಟನೆ ಹಮ್ಮಿಕೊಂಡಿತ್ತು.

    ದೇಶದಲ್ಲಿ ಹಣದುಬ್ಬರ ತೀವ್ರವಾಗಿ ಏರಿಕೆಯಾಗಿದೆ. ನರೇಂದ್ರ ಮೋದಿ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 120 ರೂಪಾಯಿ ತಲುಪಿದೆ. ಆದ್ದರಿಂದ ಜನರಿಗೆ ಪರಿಹಾರ ನೀಡಲು ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿನೂತನವಾಗಿ ಆಚರಿಸಲು ನಾವು ಒಂದು ರೂಪಾಯಿ ದರದಲ್ಲಿ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇವೆ ಎಂದು ಸಂಘಟನೆಯ ರಾಜ್ಯ ಘಟಕದ ಮುಖಂಡ ಮಹೇಶ್​ ಸರ್ವಗೌಡ ತಿಳಿಸಿದ್ದಾರೆ.

    ನಮ್ಮಂತಹ ಸಣ್ಣ ಸಂಸ್ಥೆ 500 ಜನರಿಗೆ ಪರಿಹಾರ ನೀಡಿದರೆ, ಸರ್ಕಾರವೂ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು. ಈ ಬೆಲೆಗೆ ಪೆಟ್ರೋಲ್ ಖರೀದಿಸಲು ನನಗೆ ಖುಷಿಯಾಗಿದೆ. ಹಣದುಬ್ಬರದ ನಡುವೆಯೂ ನಾನು ಸ್ವಲ್ಪ ಹಣವನ್ನು ಉಳಿಸಿದ್ದೇನೆ ಎಂದು ಖರೀದಿದಾರರೊಬ್ಬರು ಸಂತಸ ವ್ಯಕ್ತಪಡಿಸಿದರು. (ಏಜೆನ್ಸೀಸ್​)

    ರಾಮಾಯಣದ ದೈವಿಕ ಪಕ್ಷಿ ಜಟಾಯು ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿತಾ? ವಿಡಿಯೋದ ಅಸಲಿಯತ್ತು ಇಲ್ಲಿದೆ

    ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್​? ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಈ ಒಂದು ಟ್ವೀಟ್​!

    ಕೆಜಿಎಫ್​-2 ಚಿತ್ರತಂಡಕ್ಕೆ ಕೃತಜ್ಞತೆ ಇಲ್ಲವೇ? ನೀವು ಮಾಡಿದ್ದು ಸರಿನಾ ಎಂಬುದು ಕೆಜಿಎಫ್​ ಜನರ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts