More

    ಮಕ್ಕಳ ಕಳ್ಳರೆಂದು ಭಾವಿಸಿ ನಾಲ್ವರು ಸಾಧುಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು: ವಿಡಿಯೋ ವೈರಲ್​

    ಮುಂಬೈ: ಮಕ್ಕಳ ಕಳ್ಳರು ಎಂದು ಭಾವಿಸಿ ನಾಲ್ವರು ಸಾಧುಗಳ ಮೇಲೆ ಜನರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಘಟನೆ ಸಾಂಗ್ಲಿ ಜಿಲ್ಲೆಯ ಲಾವಾನ ಗ್ರಾಮದಲ್ಲಿ ನಡೆದಿದೆ. ಕಿರಾಣಿ ಅಂಗಡಿಯೊಂದರ ಮುಂಭಾಗದಲ್ಲಿ ಸಾಧುಗಳ ಮೇಲೆ ಗುಂಪೊಂದು ದೊಣ್ಣೆಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯವು ವೈರಲ್​ ಆಗಿರುವ ವಿಡಿಯೋದಲ್ಲಿದೆ. ಹೀಗಿದ್ದರೂ ಈ ಘಟನೆಯ ಬಗ್ಗೆ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ನಮಗೆ ಯಾವುದೇ ದೂರು ಬಂದಿಲ್ಲ. ಆದರೆ, ವೈರಲ್​ ಆಗಿರುವ ವಿಡಿಯೋದ ಸತ್ಯಾಂಶವನ್ನು ಪರಿಶೀಲನೆ ಮಾಡುತ್ತಿದ್ದೇವೆ. ಈ ಕುರಿತು ಅಗತ್ಯ ಕ್ರಮವನ್ನು ತೆಗೆದುಕೊಳ್ಳುವುದಾಗಿ ಸಾಂಗ್ಲಿ ಪೊಲೀಸ್​ ವರಿಷ್ಠಾಧಿಕಾರಿ ದೀಕ್ಷಿತ್​ ಗೆದಮ್​ ತಿಳಿಸಿದ್ದಾರೆ.

    ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಸಾಧುಗಳ ಮೇಲಿನ ಇಂತಹ “ದುಷ್ಕೃತ್ಯ” ವನ್ನು ಸರ್ಕಾರವು ಸಹಿಸುವುದಿಲ್ಲ ಎಂದಿರುವ ಶಾಸಕರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

    ಪಾಲ್ಘರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಅವರಿಗೆ ನ್ಯಾಯವನ್ನು ಒದಗಿಸಲಿಲ್ಲ. ಆದರೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಯಾವುದೇ ಸಾಧುವಿನ ವಿರುದ್ಧ ಯಾವುದೇ ಅನ್ಯಾಯವನ್ನು ಅನುಮತಿಸುವುದಿಲ್ಲ ಎಂದು 2020ರಲ್ಲಿ ನಡೆದ ಘಟನೆಯನ್ನು ಶಾಸಕರು ಉಲ್ಲೇಖಿಸಿ ಹೇಳಿದರು. (ಏಜೆನ್ಸೀಸ್​)

    ಪತ್ನಿಯ ಒಪ್ಪಿಗೆ ಪಡೆದು ತೃತೀಯಲಿಂಗಿಯ ಜತೆ ಮದುವೆ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!

    ಎನ್​ಸಿಇಆರ್​ಟಿ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿಯ ದೀಕ್ಷಾಗೆ ಪ್ರಥಮ ಸ್ಥಾನ

    ದಕ್ಷಿಣ ಭಾರತದ ನಟಿಯ ಮೇಲೆ ಮುಂಬೈನ ಜಿಮ್​ ಟ್ರೈನರ್​ನಿಂದ ಅತ್ಯಾಚಾರ: ದೂರು ದಾಖಲು, ಆರೋಪಿ ಅಂದರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts