More

    ಪತ್ನಿಯ ಒಪ್ಪಿಗೆ ಪಡೆದು ತೃತೀಯಲಿಂಗಿಯ ಜತೆ ಮದುವೆ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!

    ಭುವನೇಶ್ವರ: ವ್ಯಕ್ತಿಯೊಬ್ಬ ಪತ್ನಿಯ ಅನುಮತಿ ಪಡೆದು ತೃತೀಯಲಿಂಗಿಯನ್ನು ಮದುವೆ ಮಾಡಿಕೊಂಡಿರುವ ವಿಚಿತ್ರ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿರುವ ನಾರ್ಲಾ ದೇವಸ್ಥಾನದಲ್ಲಿ ನಡೆದಿದೆ.

    32 ವರ್ಷದ ವ್ಯಕ್ತಿಯ ಪತ್ನಿ ಮದುವೆಗೆ ಮಾತ್ರ ಒಪ್ಪಿಗೆ ನೀಡಿರುವುದಲ್ಲದೆ, ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸಲು ಸಹ ಅನುಮತಿ ನೀಡಿದ್ದಾಳೆ. ಎರಡು ವರ್ಷದ ಮಗನ ತಂದೆಯಾಗಿರುವ ವ್ಯಕ್ತಿಯು ಕಳೆದ ವರ್ಷ ರಾಯಗಡ ಜಿಲ್ಲೆಯ ಅಂಬಾಡೊಲಾ ಪ್ರದೇಶದಲ್ಲಿ ತೃತೀಯಲಿಂಗಿಯನ್ನು ಭೇಟಿ ಮಾಡಿದ್ದ. ಈ ವೇಳೆ ತೃತೀಯಲಿಂಗಿಯು ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಮೊದಲ ನೋಟದಲ್ಲೆ ಆಕೆಯ ಮೇಲೆ ಲವ್​ ಆಗಿತ್ತು. ಮೊಬೈಲ್​ ನಂಬರ್​ ಪಡೆದು ಆಕೆಯೊಂದಿಗೆ ಸಂಪರ್ಕದಲ್ಲಿದ್ದ.

    ತನ್ನ ಪತಿ, ತೃತೀಯಲಿಂಗಿಯ ಜೊತೆ ನಿರಂತರವಾಗಿ ಫೋನ್​ ಮೂಲಕ ಮಾತನಾಡುತ್ತಿರುವು ಸಂಗತಿ ಒಂದು ತಿಂಗಳ ಬಳಿಕ ಪತ್ನಿಗೆ ಗೊತ್ತಾಗುತ್ತದೆ. ಈ ಬಗ್ಗೆ ಪ್ರಶ್ನಿಸಿದಾಗ, ತೃತೀಯಲಿಂಗಿಯ ಜೊತೆ ಸಂಬಂಧ ಇರುವುದಾಗಿ ಒಪ್ಪಿಕೊಳ್ಳುತ್ತಾನೆ ಮತ್ತು ಇಬ್ಬರ ಸಂಬಂಧ ತುಂಬಾ ಗಾಢವಾಗಿದೆ ಎಂದು ಹೇಳುತ್ತಾನೆ. ಗಂಡನ ಮಾತಿಗೆ ಕರಗುವ ಪತ್ನಿ, ತೃತೀಯ ಲಿಂಗಿಯನ್ನು ಮದುವೆ ಮಾಡಿಕೊಳ್ಳಲು ಮತ್ತು ತಮ್ಮೊಂದಿಗೆ ಇರಿಸಿಕೊಳ್ಳಲು ಒಪ್ಪಿಕೊಳ್ಳುತ್ತಾಳೆ.

    ಪತ್ನಿಯ ಒಪ್ಪಿಗೆ ಸಿಕ್ಕ ಕೂಡಲೇ ತೃತೀಯಲಿಂಗಿಯನ್ನು ಕರೆತಂದು ತೃತೀಯಲಿಂಗಿ ಸಮುದಾಯವು ಸೇರಿದಂತೆ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ನಾರ್ಲಾ ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ.

    ಇದೇ ಸಂದರ್ಭದಲ್ಲಿ ಒಡಿಶಾದ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀನಿವಾಸ್ ಮೊಹಂತಿ ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿದ್ದು, ಹಿಂದು ಕುಟುಂಬದಲ್ಲಿ ಮಹಿಳೆಯಾಗಲಿ ಅಥವಾ ತೃತೀಯಲಿಂಗಿಗಳಾಗಿರಲಿ ಎರಡನೇ ವಿವಾಹವನ್ನು ಭಾರತೀಯ ಕಾನೂನಿನ ಪ್ರಕಾರ ಅನುಮತಿಸಲಾಗುವುದಿಲ್ಲ. ಎರಡನೇ ಮದುವೆ ನಡೆದರೆ ಅದು ಅನೂರ್ಜಿತವಾಗಿದೆ ಮತ್ತು ಭಾರತೀಯ ಕಾನೂನಿನ ಪ್ರಕಾರ ದಂಡದ ಕ್ರಮಕ್ಕೆ ಅರ್ಹವಾಗಿದೆ ಎಂದು ಮೊಹಾಂತಿ ಹೇಳಿದರು.

    ಇಬ್ಬರ ಮದುವೆಯ ಆಯೋಜನೆಯಲ್ಲಿ ಮುಂದಾಳತ್ವ ವಹಿಸಿದ್ದ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್ ಅಧ್ಯಕ್ಷೆ ಕಾಮಿನಿ, ಮದುವೆ ನಂತರ ನಾವು ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಹೋಗಿದ್ದೆವು ಎಂದು ತಿಳಿಸಿದರು. ಈ ಬಗ್ಗೆ ನಾರ್ಲಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಮಾತನಾಡಿ, ನೊಂದ ವ್ಯಕ್ತಿಯಿಂದ ಯಾವುದೇ ಘಟನೆ (ತೃತೀಯಲಿಂಗಿ ಮದುವೆ) ಬಗ್ಗೆ ದೂರು ನೀಡಿದರೆ, ನಾವು ಕಾನೂನಿನ ಪ್ರಕಾರ ಮಾತ್ರ ಮುಂದುವರಿಯುತ್ತೇವೆ ಎಂದರು.

    ಅಂದಹಾಗೆ ತಮ್ಮ ಗುರುತು ಬಹಿರಂಗಪಡಿಸಲು ಇಚ್ಛಿಸದ ನವವಿವಾಹಿತರು, ಮದುವೆ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ನನ್ನ ಹೆಂಡತಿ ಕೂಡ ಸಂತೋಷವಾಗಿದ್ದಾಳೆ ಎಂದು ಹೇಳಿದ್ದಾನೆ. (ಏಜೆನ್ಸೀಸ್​)

    ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣಕಿಸಿದ ನಟಿ ರೆಜಿನಾಗೆ ನಟ ಅಡವಿ ಶೇಷ್​ ಕೊಟ್ಟ ತಿರುಗೇಟು ಹೀಗಿತ್ತು…

    ಸರ್ಕಾರಿ ಕಾರ್ನರ್| ವಿಶೇಷ ವೇತನ ಬಡ್ತಿ ಪಡೆಯಲು ಅರ್ಹತೆ ಇದೆಯಾ?

    ಗೋಡೆ ಜತೆಗೆ ಮಾತಾಡೋ ಅಜ್ಜಿ… ‘ಮರೆತು ಹೋದವರು’ದಲ್ಲೊಂದು ನೆನಪಿನಲ್ಲಿ ಉಳಿಯುವ ಟ್ರಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts