More

    ಗ್ರಾ.ಪಂ. ಚುನಾವಣೆಯಲ್ಲಿ ಮಾಜಿ ಚಂಬಲ್ ಡಕಾಯಿತ ಮಲ್ಖಾನ್​ ಸಿಂಗ್​ ಪತ್ನಿ ಅವಿರೋಧ ಆಯ್ಕೆ!

    ಭೋಪಾಲ್​: ಚಂಬಲ್ ಡಕಾಯಿತರ ಹೆಸರು ಕೇಳಿದರೇ ಒಂದು ಕಾಲದಲ್ಲಿ ಇಡೀ ಮಧ್ಯಪ್ರದೇಶವೇ ನಡುಗುತ್ತಿತ್ತು. ಅಷ್ಟು ಭಯಾನಕವಾಗಿತ್ತು ಆ ಗ್ಯಾಂಗ್​. ಅವರು ಮಾಡಿದ್ದ ಕೃತ್ಯಗಳೆಲ್ಲ ಕರಾಳ ಇತಿಹಾಸವಾಗಿ ಉಳಿದಿದೆ. ಆ ಗ್ಯಾಂಗ್​ನ ಕೆಲವು ಸದಸ್ಯರು ಈಗಲೂ ಇರುವುದು ಆಗಾಗ ಬೆಳಕಿಗೆ ಬರುತ್ತಿರುತ್ತದೆ.

    ಚಂಬಲ್​ ಡಕಾಯಿತರ ಗುಂಪಿನ ಮಾಜಿ ಸದಸ್ಯ ಮಲ್ಖಾನ್​ ಸಿಂಗ್​ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸಂಗಯಾಯಿ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಇದೀಗ ಭಾರೀ ಸುದ್ದಿಯಾಗಿದೆ.

    ಜೂನ್​ 25ರಿಂದ ಮಧ್ಯಪ್ರದೇಶದಲ್ಲಿ ಪಂಚಾಯತ್​ ಚುನಾವಣೆ ಆರಂಭವಾಗಲಿದೆ. ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಮತದಾನಕ್ಕೂ ಮುನ್ನವೇ ಮಲ್ಖಾನ್​ ಸಿಂಗ್​ ಪತ್ನಿ ಲಲಿತಾ ರಜಪೂತ್​ ಎದುರಾಳಿಯೇ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿರುವುದು ಭಾರೀ ಸುದ್ದಿಯಾಗಿದೆ.

    ಚಂಬಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಭಾರತದ ಡಕಾಯಿತ ರಾಜ ಎಂದು ಕರೆಯಲ್ಪಡುತ್ತಿದ್ದ. ಅವರು ತಮ್ಮ ಸಿಗ್ನೇಚರ್​ ಹ್ಯಾಂಡಲ್‌ಬಾರ್ ಮೀಸೆಗೆ ಹೆಸರುವಾಸಿಯಾಗಿದ್ದಾರೆ. ಈ ಮಲ್ಖಾನ್ ಸಿಂಗ್, ಭಿಂಡ್‌ನಿಂದ ಬಂದವರು ಆದರೆ ಈಗ ಗುನಾದ ಸುಂಗಯಾಯಿಯಲ್ಲಿ ವಾಸಿಸುತ್ತಿದ್ದಾರೆ. ಸಿಂಗ್​ ಮತ್ತು ಅವರ ಗ್ಯಾಂಗ್ 1982ರಲ್ಲಿ ಆಗಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಮುಂದೆ ಶರಣಾದರು. ಅವರ ಗ್ಯಾಂಗ್​ ವಿರುದ್ಧ 18 ಡಕಾಯಿತಿಗಳು, 28 ಅಪಹರಣ ಪ್ರಕರಣಗಳು ಮತ್ತು 17 ಕೊಲೆ ಪ್ರಕರಣಗಳು ಸೇರಿದಂತೆ 94 ಪೊಲೀಸ್ ಪ್ರಕರಣಗಳಿವೆ.

    ಅಂದಹಾಗೆ ಲಲಿತಾ ರಜಪೂತ್, ಮಲ್ಖಾನ್ ಸಿಂಗ್ ಅವರ ಎರಡನೇ ಪತ್ನಿ. ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ ಅವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾರೆ. ನನ್ನ ಗ್ರಾಮದಲ್ಲಿ ಯಾವುದೇ ಬೆಳಕು, ರಸ್ತೆ ಅಥವಾ ಒಳಚರಂಡಿ ಸೌಲಭ್ಯ ಇಲ್ಲ. ಆದ್ದರಿಂದ ನನ್ನ ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ ಎಂದು ರಜಪೂತ್ ಭರವಸೆ ನೀಡಿದ್ದಾರೆ.

    ಪಂಚಾಯತಿಯ ಸುಮಾರು ನಾಲ್ಕು ಲಕ್ಷ ಸ್ಥಾನಗಳಿಗೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಜೂನ್ 25 ರಂದು, ಎರಡನೇ ಮತ್ತು ಮೂರನೇ ಹಂತದ ಮತದಾನ ಕ್ರಮವಾಗಿ ಜುಲೈ 1 ಮತ್ತು ಜುಲೈ 8 ರಂದು ನಡೆಯಲಿದೆ. (ಏಜೆನ್ಸೀಸ್​)

    ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

    ಯಾವುದನ್ನು ಬೋಧಿಸಬೇಕು? ಏನನ್ನು ಬಿಡಬೇಕು?: ಪಠ್ಯಪುಸ್ತಕ ಪರಿಷ್ಕರಣೆ ಶಿಕ್ಷಕರಲ್ಲಿ ಗೊಂದಲ..

    ಬಿಜೆಪಿ ತಂತ್ರಕ್ಕೆ ಮೇಲುಗೈ: ರಾಜ್ಯಸಭೆಯ 22 ಸ್ಥಾನ ಉಳಿಸಿಕೊಂಡ ಕಮಲ; 31ಕ್ಕೇರಿದ ಕಾಂಗ್ರೆಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts