More

    ಭಾರತೀಯರು ಪ್ರತಿದಿನ ಎಷ್ಟು ಗಂಟೆ ಟಿವಿ ವೀಕ್ಷಣೆ ಮಾಡುತ್ತಾರೆ?

    ನವದೆಹಲಿ: ಸ್ಮಾರ್ಟ್​ಫೋನ್​ಗಳ ಪ್ರವೇಶಕ್ಕೂ ಮುನ್ನ ಭಾರತದಲ್ಲಿ ಮನರಂಜನೆಯ ಮುಖ್ಯ ಮಾಧ್ಯಮವಾಗಿ ಟೆಲಿವಿಷನ್​ ಮೊದಲ ಸ್ಥಾನ ಪಡೆದುಕೊಂಡಿತ್ತು. ಆರಂಭದಲ್ಲಿ ಯಾರ ಮನೆಯಲ್ಲಿ ಟಿವಿ ಇರುತ್ತಿತ್ತೋ ಅವರ ಮನೆಯಲ್ಲಿ ಅಕ್ಕಪಕ್ಕದ ಜನರು ಹೋಗಿ ಕುಳಿತುಕೊಳ್ಳುತ್ತಿದ್ದರು. ಆದರೆ, ಜಗತ್ತು ಮುಂದುವರಿಯುತ್ತಾ ಹೋದಂತೆ ಇಂದು ಟಿವಿ ಇಲ್ಲದ ಮನೆಯಿಲ್ಲ ಎಂಬಾಂತಾಗಿದೆ. ಆದರೆ, ಸ್ಮಾರ್ಟ್​ಫೋನ್​ಗಳು ಬಂದ ಮೇಲಂತೂ ಟಿವಿ ಮೇಲಿನ ಜನರ ವ್ಯಾಮೋಹ ತುಂಬಾ ಕಡಿಮೆಯಾಗಿದೆ.

    ಹೊಸ ಸಂಶೋಧನೆಯ ಪ್ರಕಾರ ಭಾರತದಲ್ಲಿ ಜನರು ಪ್ರತಿ ದಿನ ಸುಮಾರು 4 ಗಂಟೆಗಳಿಗೂ ಹೆಚ್ಚು ಕಾಲ ಟಿವಿ ವೀಕ್ಷಣೆ ಮಾಡುತ್ತಾರಂತೆ. ಇದು 2021ರ ಅಧ್ಯಯನದ ಫಲಿತಾಂಶವಾಗಿದೆ. 2020ರ ಸಂಶೋಧನೆ ಪ್ರಕಾರ 3 ಗಂಟೆಗಳ ಸಮಯವಾಗಿತ್ತು. ಕಳೆದ ವರ್ಷ ವೀಕ್ಷಣೆ ಸಮಯದಲ್ಲಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಒಟಿಟಿ ವೇದಿಕೆಗಳ್ಳು ಹೆಚ್ಚಾಗುತ್ತಿರುವ ಪರಿಣಾಮ ಎಂದು ಹೇಳಬಹುದು ಮತ್ತು ಅನೇಕ ಮನರಂಜನೆ ಕಾರ್ಯಕ್ರಮಗಳು ಕಿರುತೆರೆಯಲ್ಲಿ ಪ್ರಸಾರವಾಗುವುದರಿಂದ ವೀಕ್ಷಣೆ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ.

    ವಿಶ್ವದಾದ್ಯಂತ ಸುಮಾರು 150 ಮಿಲಿಯನ್ ಫೈರ್ ಟಿವಿ ಸಾಧನಗಳು ಮಾರಾಟವಾಗಿವೆ. ಗ್ರಾಹಕರು ಪ್ರತಿ ತಿಂಗಳು ಬಿಲಿಯನ್​ ಗಂಟೆಗಳ ಮನರಂಜನೆಯನ್ನು ಆನಂದಿಸುತ್ತಾರೆ ಎಂದು ಅಮೆಜಾನ್ ಡಿವೈಸಸ್‌ನ ಇಂಡಿಯಾ ಹೆಡ್ ಪರಾಗ್ ಗುಪ್ತಾ ಹೇಳಿದ್ದಾರೆ.

    ನಮ್ಮ ಗ್ರಾಹಕರು ಹೊಸ ವೆಬ್​ ಸರಣಿಗಳು, ಚಲನಚಿತ್ರಗಳು ಮತ್ತು ಇತರ ವಿಷಯಗಳನ್ನು ಹುಡುಕಲು ಮತ್ತು ಆನಂದಿಸಲು ಸಹಾಯವಾಗುವಂತೆ ಹೊಸತನವನ್ನು ಮುಂದುವರಿಸುತ್ತೇವೆ ಎಂದು ಗುಪ್ತಾ ಹೇಳಿದರು. ದೇಶದ ಶೇ. 80% ಪಿನ್ ಕೋಡ್‌ಗಳಲ್ಲಿ ಗ್ರಾಹಕರು Fire TV ಸಾಧನಗಳನ್ನು ಖರೀದಿಸಿದ್ದಾರೆ. ಕಾಮಿಡಿ ಫೈರ್ ಟಿವಿ ಬಳಕೆದಾರರಲ್ಲಿ ಅತ್ಯಂತ ಜನಪ್ರಿಯ ಟಿವಿ ಪ್ರಕಾರವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮೊದಲ ರಾತ್ರಿ ಮುಗಿಸಿ ಬೆಳಗಿನ ಜಾವವೇ ಎಸ್ಕೇಪ್​ ಆದ ವರ: ನಂತ್ರ ವಧುವಿಗೆ ತಿಳಿದಿದ್ದು ಘೋರ ಸತ್ಯ!

    ಮತ್ತೆ ತೆಲುಗಿಗೆ ಆಲಿಯಾ!; ಜೂನಿಯರ್ ಎನ್​ಟಿಆರ್ ಸಿನಿಮಾಗೆ ನಾಯಕಿ

    ಐಟಿ ದಾಳಿ ವೇಳೆ ನಿವೃತ್ತ ಐಪಿಎಸ್​ ಅಧಿಕಾರಿ ಮನೆಯಲ್ಲಿ ದಾಖಲೆಯಿಲ್ಲದ ಕೋಟಿಗಟ್ಟಲೆ ಹಣ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts